ಪೆರಾಬೆ: ವಿಕಾಸ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಪೆರಾಬೆ ಇದರ ವಾರ್ಷಿಕ ಮಹಾಸಭೆ ಡಿ.24ರಂದು ಪೆರಾಬೆ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ಜಿ.ಯವರು ಕಾರ್ಯಕ್ರಮ ಉದ್ಘಾಟಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಜಯಕುಮಾರಿ ಅವರು ಕಂಪ್ಯೂಟರ್ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು. ಸಿಹೆಚ್‌ಒ ರಮ್ಯ ಅವರು ಆರೋಗ್ಯ ಇಲಾಖೆ ಮಾಹಿತಿ ನೀಡಿದರು.
ಸನ್ಮಾನ:
ಸ್ತ್ರೀ ಶಕ್ತಿ ಸಂಘದ ಹಿರಿಯ ಸದಸ್ಯೆ, ನಾಟಿ ವೈದ್ಯೆಯೂ ಆಗಿದ್ದು ಯಾವುದೇ ಫಲಾಪೇಕ್ಷೆ ಇಲ್ಲದೇ ಕುಂತೂರು ಭಾಗದ ಬಸ್‌ನಿಲ್ದಾಣಗಳ ಸ್ವಚ್ಛತೆ ಮಾಡುತ್ತಿರುವ ಗುಲಾಬಿ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಆಟೋಟ ಸ್ಪರ್ಧೆ:
ಸಂಘದ ಸದಸ್ಯೆಯರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ಸ್ತ್ರೀ ಶಕ್ತಿ ಸಂಘದ ಮಹಿಳೆಯರು, ಸಂಜೀವಿನಿ ಸಂಘದ ಮಹಿಳೆಯರು, ವಿಶೇಷ ಚೇತನ ಸಂಜೀವಿನಿ ಸಂಘದವರು ಭಾಗವಹಿಸಿದ್ದರು.
ಕಾರ್ಯಯದರ್ಶಿ ಪೂರ್ಣಿಮ ವರದಿ ವಾಚಿಸಿದರು. ಲಿಖಿತ ಸ್ವಾಗತಿಸಿ, ನಿಟಕಪೂರ್ವ ಕಾರ್ಯದರ್ಶಿ ಶಶಿಕಲಾ ವಂದಿಸಿದರು. ಎಂಬಿಕೆ ಮಾಲತಿ ಬಿ.ನಿರೂಪಿಸಿದರು. ಸ್ತ್ರೀ ಶಕ್ತಿ ಸಂಘದ ಸದಸ್ಯೆ ಉಮಾವತಿ ಪ್ರಾರ್ಥಿಸಿದರು.