ವಿಜಯಾ ಬ್ಯಾಂಕ್ ನಿವೃತ್ತ ಉದ್ಯೋಗಿ ಜೋನ್ ಮಸ್ಕರೇನ್ಹಸ್ ಹೃದಯಾಘಾತದಿಂದ ನಿಧನ

0

ಪುತ್ತೂರು: ಕಲ್ಲಿಮಾರು ಮಾರ್ಸೆಲ್ ಮಸ್ಕರೇನ್ಹಸ್ ಹಾಗೂ ತೆರೆಜಾ ಫುಡ್ತಾದೋರವರ ಪುತ್ರ, ವಿಜಯಾ ಬ್ಯಾಂಕ್ ನಿವೃತ್ತ ಉದ್ಯೋಗಿ ಜೋನ್ ಮಸ್ಕರೇನ್ಹಸ್ ಹೃದಯಾಘಾತದಿಂದ ಡಿ.25 ರಂದು ನಿಧನ ಹೊಂದಿದರು.

ಮೃತ ಜೋನ್ ಮಸ್ಕರೇನ್ಹಸ್ ರವರು ಬೆಟ್ಟಂಪಾಡಿ ವಿಜಯಾ ಬ್ಯಾಂಕಿನಲ್ಲಿ ಕರ್ತವ್ಯ ಆರಂಭಿಸಿ ಬಳಿಕ ಬಾಂಬೆ, ಕೇರಳ, ಮಾಣಿ, ಬೆಳ್ಳಾರೆ, ದರ್ಬೆ ಶಾಖೆಗಳಲ್ಲಿ ಸೇವೆ ಸಲ್ಲಿಸಿ ಕೊನೆಗೆ ಬೆಟ್ಟಂಪಾಡಿ ಶಾಖೆಯಲ್ಲಿಯೇ ನಿವೃತ್ತಿ ಹೊಂದಿದರು.

ಜೋನ್ ಮಸ್ಕರೇನ್ಹಸ್ ರವರು ಡೊನ್ ಬೊಸ್ಕೊ ಕ್ಲಬ್ ಸದಸ್ಯರಾಗಿದ್ದು ಕ್ಲಬ್ ನ ಸುವರ್ಣ ವರ್ಷದ ಅಧ್ಯಕ್ಷರಾಗಿ ಕ್ಲಬ್ ಅನ್ನು ಮುನ್ನೆಡೆಸಿದ್ದರು.

ಮೃತರು ಪತ್ನಿ ಪುತ್ತೂರು ಅಂಚೆ ಇಲಾಖೆಯ ಉದ್ಯೋಗಿ ಜೆಸ್ಸಿ ಮಸ್ಕರೇನ್ಹಸ್, ಪುತ್ರರಾದ ಶ್ವಾಸಕೋಶ ತಜ್ಞ, ಮಂಗಳೂರಿನ ಫಳ್ನೀರ್  ವೆಲ್ನೆಸ್ ಕ್ಲಿನಿಕ್ ನ ಡಾ.ಡೋನ್ ಗ್ರೆಗೋರಿ ಮಸ್ಕರೇನ್ಹಸ್, ಸುಶಾಂತ್ ಮಸ್ಕರೇನ್ಹಸ್ ಬೆಂಗಳೂರು, ಪುತ್ರಿ ಡಾ.ಜೋಯ್ಲಿನ್ ಮಸ್ಕರೇನ್ಹಸ್ ಆಸ್ಟ್ರೇಲಿಯಾ, ಅಳಿಯ ಡಾ.ಅಭಿಜಿತ್ ಶಾನ್ ಭೋಗ್, ಸೊಸೆಯಂದಿರಾದ ಡಾ.ಜ್ಯೋಸ್ನಾ ಕುವೆಲ್ಲೋ, ಹೆಲ್ಮಾ ಮಿನೇಜಸ್, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here