ಬಡಗನ್ನೂರು ಸ.ಹಿ.ಉ.ಪ್ರಾ.ಶಾಲಾ ನೂತನ ಸಭಾಂಗಣದ ಶಿಲಾನ್ಯಾಸ

0

ಬಡಗನ್ನೂರು: ಹಲವು ಮಕ್ಕಳಿಗೆ ರಾಷ್ಟ್ರ ನಿರ್ಮಾಣದ ಕರ್ತವ್ಯವನ್ನು ರೂಪಿಸಿ ಕಳಿಸಿದ ಶಾಲೆ ಬಡಗನ್ನೂರು ಸ.ಹಿ.ಉ.ಪ್ರಾ.ಶಾಲೆ ಎಂದು ಶ್ರೀ ಕ್ಷೇತ್ರ ಪಡುಮಲೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು ಹೇಳಿದರು.

ಅವರು ಬಡಗನ್ನೂರು ಸ.ಹಿ.ಪ್ರಾ.ಶಾಲಾ ನೂತನ ಸಭಾಂಗಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೆಸರು ಕಲ್ಲು ಹಾಕಿ ಕಾಮಗಾರಿ ಚಾಲನೆ ನೀಡಿ ಮಾತನಾಡಿದರು. ಇಂದು ನಾವು ಸುಮಾರು 16 ಲಕ್ಷ ರೂಪಾಯಿ ವೆಚ್ಚ ನಿರ್ಮಾಣದ ಸಭಾಂಗಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆದಿದ್ದು, ಇದು ಯಶಸ್ವಿಯಾಗಿ ಮೂಡಿಬರಲು ಶಿಕ್ಷಣಾಭಿಮಾನಿಗಳಾದ ತಮ್ಮೆಲ್ಲರ ಸಹಕಾರ ಅತಿ ಅವಶ್ಯಕ .ಮುಂದೆ  ಈ ಶಾಲೆಗೆ ಹೆಚ್ಚು ಮಕ್ಕಳನ್ನು ಕಳುಹಿಸುವ ಮೂಲಕ  ಮಕ್ಕಳ ಕೊರತೆಯಿಂದ ಶಾಲೆಯನ್ನು ಮುಚ್ಚದಾಗೆ  ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ.  ಈ ಶಾಲೆ ನಾನು ಕಲಿತ ಶಾಲೆ  ಮತ್ತು ಇದು ಹಲವಾರು ಮಕ್ಕಳಿಗೆ ರಾಷ್ಟ್ರ ನಿರ್ಮಾಣದ  ಕರ್ತವ್ಯವನ್ನು ರೂಪಿಸಿದೆ. ಮುಂದೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ರಾಷ್ಟ್ರವ್ಯಾಪಿ ಹೆಸರುವಾಸಿಯಾಗಿ ಹೊರಹೊಮ್ಮಲಿ, ಶಿಲಾನ್ಯಾಸಗೊಂಡ ಈ ಸಭಾಂಗಣ ಅತಿ ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರ ರಾಮಣ್ಣ ಗೌಡ ಬಸವಹಿತ್ತಿಲು ಮಾತನಾಡಿ,  ಊರಿನ ದೇವಸ್ಥಾನ ಮತ್ತು  ಶಾಲೆ ಆ ಊರಿನ ಶ್ರೇಯಸ್ಸಿನ ಅಳತೆ ಗೋಲು ಇಲ್ಲಿನ ದೇವಸ್ಥಾನ ಜೀರ್ಣೋದ್ಧಾರ ನಡೆದಿದೆ. ಅದೇ  ಶಾಲೆ ಶತಮಾನದ ಅಂಚಿನಲ್ಲಿರುವ ಶಾಲೆಯ ನೂತನ ಸಭಾಂಗಣದ ಕೆಲಸ ಯಶಸ್ವಿಯಾಗಿ ನಡೆಯಲಿ. ಮುಂದೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವ ಮೂಲಕ ಮಾದರಿಯಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸಂಜೀವ ರೈ ಕೆ.ಪಿ ಮಾತನಾಡಿ, ಲೋಕದ ಬೆಳಕನ್ನು ಕಂಡ  ಸ್ಥಳ  ನಾವು ಮುಗ್ಧರಿರುವ ಸಂದರ್ಭದಲ್ಲಿ ಹಿರಿಯ  ಈ ಪರಿಸರಕ್ಕೆ ತಂದು ಅಕ್ಷರಾಭ್ಯಾಸ ಮಾಡಿದ್ದಾರೆ. ಆನಂತರ ಅನೇಕ ಬದಲಾವಣೆ ಕೂಡಿದೆ. ಅದು ಪ್ರಕೃತಿ ನಿಯಮ  ಹಿಂದಿನ ಕಾಲದಲ್ಲಿ ಯಾವುದೇ ಅಭಿವೃದ್ಧಿ ಕಷ್ಟಕರವಾಗಿತ್ತು ಅದರೆ ಇಂದು ಜನರು ಆರ್ಥಿಕವಾಗಿ ಸದೃಢರಾಗಿದ್ದಾರೆ ಮತ್ತು ಸರ್ಕಾರದಿಂದ ಸೌಲಭ್ಯ ದೊರೆಯುತ್ತದೆ. ಹಾಗಾಗಿ ಶತಮಾನದ ಅಂಚಿನಲ್ಲಿರುವ ಈ ಶಾಲೆ ಹೆಮ್ಮೆ ಎಂದರು.

ಶ್ರೀ ಕ್ಷೇತ್ರ ಪಡುಮಲೆ ಜಾತ್ರೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ, ಹಾಗೂ ಪಟ್ಟೆ ಶ್ರೀಕೃಷ್ಣ ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಶಂಕರಿ ಪಟ್ಟೆ ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರು ಮಾತನಾಡಿ,ಶತಮಾನದ ಅಂಚಿನಲ್ಲಿರುವ ಈ ಶಾಲೆಗೆ ಗ್ರಾ.ಪಂ ವತಿಯಿಂದ ಸುಮಾರು 7 ಲಕ್ಷ ರೂಪಾಯಿ ಅನುದಾನದಲ್ಲಿ  ಮೂಲಭೂತ ಸೌಕರ್ಯ ಈಡೇರಿಸಲು ಪ್ರಯತ್ನಿಸಲಾಗಿದೆ ಎಂದರು.

ಗೌರವಾಧ್ಯಕ್ಷ  ನಾರಾಯಣ ರೈ ಮಾನಸ  ಕುದ್ಕಾಡಿ ,ಗೌರವ ಸಲಹೆಗಾರರಾದ ಜಯಂತ ರೈ ಕುದ್ಕಾಡಿ,ಗ್ರಾ.ಪಂ ಸದಸ್ಯರಾದ ರವಿರಾಜ ರೈ ಸಜಂಕಾಡಿ, ಸಂತೋಷ್ ಆಳ್ವ ಗಿರಿಮನೆ, ಸುಜಾತ ಮೈಂದನಡ್ಕ ಶ್ರೀ ಕ್ಷೇತ್ರ ಪಡುಮಲೆ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಪಡುಮಲೆ ಕೋಟಿ ಚೆನ್ನಯ ಯುವಕ ಮಂಡಲದ ಅಧ್ಯಕ್ಷ ರಾಕೇಶ್ ರೈ ಕುದ್ಕಾಡಿ,  ಶಾಸ್ತಾರ ಸ್ಫೋಟ್ಸ್ ಕ್ಲಬ್‌ ನ ಅಧ್ಯಕ್ಷ ಗಂಗಾಧರ ರೈ ಮೇಗಿನಮನೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಪಳ್ಳತ್ತಾರು, ಕಾರ್ಯದರ್ಶಿ ಶಾಂಭವಿ ತಾರನಂದ ಶೆಟ್ಟಿ  ಕುದ್ಕಾಡಿ  ಉಪಾಧ್ಯಕ್ಷ ಶ್ರೀಧರ ನಾಯ್ಕ ನೆರ್ಲಂಪಾಡಿ, ಶ್ರೀಧರ ಭಟ್ ಸಿ ಯಾಚ್ , ಕೋಶಾಧಿಕಾರಿ ಸುಬ್ರಾಯ ನಾಯಕ್, ಸಂಘಟನಾ ಕಾರ್ಯದರ್ಶಿ ಅಲ್ಲಾವುದ್ದೀನ್  ಪದಡ್ಕ, ಗೌರವ ಸಲಹೆಗಾರ ತ್ಯಾಂಪಣ್ಣಸಿ.ಹೆಚ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಮೂಲ್ಯ ಮೈಂದನಡ್ಕ, ಮಾಜಿ ಅಧ್ಯಕ್ಷ ಶ್ರೀಕೃಷ್ಣ ಗೌಡ, ಸದಸ್ಯ ಗಿರೀಶ್ ಗೌಡ ಕನ್ನಯ, ಸುಲೋಚನ ನೇರ್ಲಪ್ಪಾಡಿ, ಮಾಜಿ ಸದಸ್ಯ ತಿಮ್ಮಪ್ಪ ಪಾಟಾಳಿ,ಅಬ್ದುಲ್‌ ರಹಮಾನ್‌ ಮೈಂದನಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರುಗಳಾದ, ರಾಜೇಶ್ ರೈ ಮೇಗಿನಮನೆ,  ಬಾಬು ಬಿ ಮೈಂದನಡ್ಕ, ನಾರಾಯಣ ಆಚಾರ್ಯ, ಈಶ್ವರ ನಾಯ್ಕ ಮೈಂದನಡ್ಕ.ಶ್ರೀಧರ ನಾಯ್ಕ ಮೈಂದನಡ್ಕ  ರವಿಚಂದ್ರ ನಾಯ್ಕ ಪದಡ್ಕ ಈಶ್ವರ ಅಚಾರ್ಯ ಮೈಂದನಡ್ಕ, ಲತಾ ಕಟ್ಟಾವು,  ,ಕುಸುಮ ಪೇರತ್ತಡ್ಕ ಚಂದ್ರಿಕಾ ಸೋಣಗೇರಿ, ಆಸಿಂ ಮೈಂದನಡ್ಕ ಸಿಮರ್ ಚಾಯ್ಸ್ ಮೈಂದನಡ್ಕ, ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮಕ್ಕಳ ಪೋಷಕರು ಮತ್ತು ಶಿಕ್ಷಣಾಭಿಮಾನಿಗಳು  ಉಪಸ್ಥಿತರಿದ್ದರು.

ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಮಹಾಲಿಂಗ ಭಟ್ ನೇತೃತ್ವದಲ್ಲಿ ಭೂಮಿ ಪೂಜೆ ನಡೆಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಹರೀಣಾಕ್ಷಿ ಎ ಸ್ವಾಗತಿಸಿದರು, ಅತಿಥಿ ಶಿಕ್ಷಕಿ ಮಧುಶ್ರೀ ವಂದಿಸಿದರು.ಸಹ ಶಿಕ್ಷಕಿ ರಮ್ಯ ಕಾರ್ಯಕ್ರಮ ನಿರೂಪಿಸಿದರು. ಅಕ್ಷರದಾಸೋಹ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here