ರಜತಶ್ರೀ ವಿಶೇಷ ಸನ್ಮಾನ | ನಾರಾಯಣ ಬಲ್ಯ ದಂಪತಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ
- *ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ: ರಾಜೇಶ್ ಮುದೋಳ್
- *ದೇವರ ಅನುಗ್ರಹ, ಹಿರಿಯ ಆಶೀರ್ವಾದ ಮುಖ್ಯ: ಹರೀಶ್ ಆರಿಕೋಡಿ
- *ಎಲ್ಐಸಿ ಧ್ಯೇಯೋದ್ದೇಶ ನಿರ್ವಹಿಸಿದ್ದಾರೆ: ಸತೀಶ್ಕುಮಾರ್
- *ರಜತ ಸಂಭ್ರಮ ಅರ್ಥಪೂರ್ಣ ಆಚರಣೆ: ಅಬ್ರಹಾಂ ವರ್ಗೀಸ್
- *ಜಿರೋದಿಂದ ಹಿರೋ ಆದವರು: ಸದಾನಂದ ಶೆಟ್ಟಿ
ಕಡಬ: ಎಲ್ಐಸಿ ಬಂಟ್ವಾಳ ಶಾಖೆಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿರುವ ಕಡಬ ತಾಲೂಕಿನ ಬಲ್ಯ ಗ್ರಾಮದ ಕೊಲ್ಲಿಮಾರು ನಿವಾಸಿ ನಾರಾಯಣ ಎನ್.,ಅವರ ಎಲ್ಐಸಿ ವೃತ್ತಿ ಬದುಕಿನ ರಜತ ಸಂಭ್ರಮೋತ್ಸವ ಅವರ ಸ್ವಗೃಹ ಬಲ್ಯ ಗ್ರಾಮದ ಕೊಲ್ಲಿಮಾರು ’ಸೌಪರ್ಣಿಕಾ’ ತರವಾಡು ಮನೆಯಲ್ಲಿ ಡಿ.25ರಂದು ನಡೆಯಿತು.
ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ: ರಾಜೇಶ್ ಮುದೋಳ್
ಸಂಜೆ ಕೊಲ್ಲಿಮಾರು ದುಗ್ಗಣ್ಣ ಗೌಡ ವೇದಿಕೆಯಲ್ಲಿ ನಡೆದ ನಾರಾಯಣ ಬಲ್ಯ ರಜತ ಸಂಭ್ರಮದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಎಲ್ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗೀಯ ಅಧಿಕಾರಿ ರಾಜೇಶ ವಿ.ಮುದೋಳ್ ಅವರು ಮಾತನಾಡಿ, ಎಲ್ಐಸಿ ವೃತ್ತಿ ಬದುಕಿನ 25 ವರ್ಷ ಪೂರೈಸಿರುವ ನಾರಾಯಣ ಬಲ್ಯರವರಿಗೆ ಅವರ ವೃತ್ತಿ ಜೀವನದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ. ಅವರಿಂದ ಇನ್ನಷ್ಟೂ ಸಾಧನೆ ಮೂಡಿಬರಲಿ. ಇದಕ್ಕೆ ಅವರ ಅಭಿಮಾನಿ ವೃಂದದವರು ಸಹಕರಿಸಬೇಕು ಎಂದರು.
ದೇವರ ಅನುಗ್ರಹ, ಹಿರಿಯರ ಆಶೀರ್ವಾದ ಮುಖ್ಯ: ಹರೀಶ್ ಆರಿಕೋಡಿ
ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಅವರು ಮಾತನಾಡಿ, ಯಾವುದೇ ಕೆಲಸ ಯಶಸ್ವಿಯಾಗಲು ಕೆಲಸದ ಮೇಲೆ ಆಸಕ್ತಿ, ದೇವರ ಅನುಗ್ರಹ, ಹಿರಿಯರ ಆಶೀರ್ವಾದ ಮುಖ್ಯವಾಗಿದೆ. ಇದಕ್ಕೆ ನಾರಾಯಣ ಬಲ್ಯ ಅವರೇ ಸಾಕ್ಷಿಯಾಗಿದ್ದಾರೆ. ಬಡತನದ ನಡುವೆ ಶಿಕ್ಷಣ ಪಡೆದು ಪ್ರಾಮಾಣಿಕ ಸೇವೆಯ ಮೂಲಕ ಈಗ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಮುಂದಿನ ವೃತ್ತಿ ಜೀವನದಲ್ಲೂ ಯಶಸ್ವಿ ಸಿಗಲಿ. ಇದಕ್ಕೆ ದೇವರು ಅನುಗ್ರಹಿಸಲಿ ಎಂದು ಹಾರೈಸಿದರು.
ಎಲ್ಐಸಿ ಧ್ಯೇಯೋದ್ದೇಶ ನಿರ್ವಹಿಸಿದ್ದಾರೆ: ಸತೀಶ್ಕುಮಾರ್
ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಎಲ್ಐಸಿ ಬಂಟ್ವಾಳ ಶಾಖೆಯ ಮುಖ್ಯ ಪ್ರಬಂಧಕರಾದ ಕೆ.ಸತೀಶ್ಕುಮಾರ್ ಅವರು ಮಾತನಾಡಿ, ನಾರಾಯಣ ಬಲ್ಯ ಅವರು ಎಲ್ಐಸಿ ಪ್ರತಿನಿಧಿ, ಮುಖ್ಯವಿಮಾ ಸಲಹೆಗಾರರಾಗಿ ಸೇವೆ ಸಲ್ಲಿಸಿ ಪ್ರಸ್ತುತ 5 ವರ್ಷಗಳಿಂದ ಅಭಿವೃದ್ಧಿ ಅಧಿಕಾರಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ತೆರಳಿ ವಿಮಾ ಪಾಲಿಸಿ ಮಾಡಿದ್ದಾರೆ. ಅವರ ಪರಿಶ್ರಮ, ಅಗಾಧ ಪಾಲಿಸಿದಾರರ ಸಂಖ್ಯೆ, ಸಮಾಜಕ್ಕೆ ಅವರು ನೀಡಿದ ಕೊಡುಗೆ ಅವರನ್ನು ಈ ಸ್ಥಾನಕ್ಕೆ ತಂದಿದೆ. ದೇಶದ ಮೂಲೆ ಮೂಲೆಗಳಿಗೆ ವಿಮಾ ಸೌಲಭ್ಯ ತಲುಪಿಸಬೇಕೆಂಬ ಎಲ್ಐಸಿ ಧ್ಯೇಯೋದ್ದೇಶಗಳನ್ನು ನಾರಾಯಣ ಬಲ್ಯ ಅವರು ಅರ್ಥಪೂರ್ಣವಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದರು.
ರಜತ ಸಂಭ್ರಮ ಅರ್ಥಪೂರ್ಣ ಆಚರಣೆ: ಅಬ್ರಹಾಂ ವರ್ಗೀಸ್
ಅಭಿನಂದನಾ ಭಾಷಣ ಮಾಡಿದ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ, ನಿವೃತ್ತ ಪ್ರಾಂಶುಪಾಲರೂ ಆದ ಅಬ್ರಹಾಂ ವರ್ಗೀಸ್ ಅವರು, ನಾರಾಯಣ ಬಲ್ಯ ಅವರು ಎಲ್ಲರನ್ನೂ ಸೇರಿಸಿಕೊಂಡು ರಜತ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ರಜತ ಸಂಭ್ರಮದಲ್ಲಿ ಅನೇಕರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಹಾಗೂ ಕೊಡುಗೆ ನೀಡುವ ಮೂಲಕ ಸಮಾಜದಿಂದ ಪಡೆದಿರುವುದನ್ನು ದೇವರಿಗೆ ಸಮರ್ಪಣೆ ಮಾಡಿದ್ದಾರೆ. ಅವರ ಸಾಧನೆಯ ಸಂಭ್ರಮದಲ್ಲಿ ನಾವೆಲ್ಲರೂ ಪಾಲುದಾರರೂ ಆಗಿದ್ದೇವೆ. ನೆಲ್ಯಾಡಿ ಜೆಸಿಐನ ಬೆಳ್ಳಿಹಬ್ಬದ ಅಧ್ಯಕ್ಷರಾಗಿಯೂ ಹಲವು ಸೇವಾ ಕಾರ್ಯ ಮಾಡಿದ್ದಾರೆ. ಅವರಿಗೆ ಇನ್ನೂ ಯಶಸ್ಸು ಸಿಗಲಿ ಎಂದರು.
ರಜತಶ್ರೀ ವಿಶೇಷ ಸನ್ಮಾನ:
ನಾರಾಯಣ ಬಲ್ಯ ಅವರನ್ನು ಎಲ್ಐಸಿ ಫೀಲ್ಡ್ಗೆ ಕರೆತಂದ ಎಲ್ಐಸಿ ಪುತ್ತೂರು ಶಾಖೆಯ ನಿವೃತ್ತ ಹಿರಿಯ ಅಭಿವೃದ್ಧಿ ಅಧಿಕಾರಿ ಟಿ.ಸದಾನಂದ ಶೆಟ್ಟಿ ಹಾಗೂ ಶಕೀಲಾ ದಂಪತಿಗೆ ರಜತಶ್ರೀ ವಿಶೇಷ ಸನ್ಮಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿದ ಸದಾನಂದ ಶೆಟ್ಟಿಯವರು ಮಾತನಾಡಿ, ನಾರಾಯಣ ಬಲ್ಯ ಅವರು ಜಿರೋದಿಂದ ಹಿರೋ ಆದವರು. ಅವರಲ್ಲಿನ ಚುರುಕುತನ, ಸಾಮರ್ಥ್ಯವನ್ನು ಗಮನಿಸಿ ಪ್ರೋತ್ಸಾಹಿಸಿದ್ದೇನೆ. ಎಲ್ಐಸಿಯಲ್ಲಿ ಅವರು ನಂ.1 ಆಗಿದ್ದರು. ಈಗ ಅಭಿವೃದ್ಧಿ ಅಧಿಕಾರಿಯಾಗಿರುವ ಅವರು ಮುಂದೆ ಸೀನಿಯರ್ ಮೇನೇಜರ್ ಆಗಿ ನಿವೃತ್ತಿಯಾಗಲಿ ಎಂದು ಹೇಳಿದರು.
ಸನ್ಮಾನ:
ಸಭಾ ಕಾರ್ಯಕ್ರಮದಲ್ಲಿ 15 ಮಂದಿಗೆ ಸನ್ಮಾನ ಮಾಡಲಾಯಿತು. ನಾರಾಯಣ ಅವರ ತಾಯಿ ಶಿವಮ್ಮ ದುಗ್ಗಣ್ಣ ಗೌಡ ಕೊಲ್ಲಿಮಾರು, ಅತ್ತೆ ಶೇಷಮ್ಮ ಶೀನಪ್ಪ ಗೌಡ ಕೊಳ್ಳಕೋಡಿ ಅವರ ಪರವಾಗಿ ಪುತ್ರ ಬಾಲಕೃಷ್ಣ ಗೌಡ, ನಾರಾಯಣ ಬಲ್ಯ ಅವರ ಪ್ರಾಥಮಿಕ ಶಾಲೆಯ ಶಿಕ್ಷಕ, ಪ್ರಸ್ತುತ ರೆಂಜಿಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಮೇದಪ್ಪ ಗೌಡ, ಸಿವಿಲ್ ಇಂಜಿನಿಯರ್ ಚಂದ್ರಹಾಸ ಪನ್ಯಾಡಿ, ಶ್ರಮಜೀವಿ ಜನಾರ್ದನ ಗೌಡ ಪೂವಳ ಹಳೆಸ್ಟೇಷನ್, ಕಲಾವಿದ ಉಮೇಶ ಬಂಗೇರ ಮಾದೇರಿಕೆ, ಎಲ್ಐಸಿ ಗ್ರಾಹಕ ಮಿತ್ರ ರಾಮಣ್ಣ ಗೌಡ ಕೆ.ನೆಲ್ಯಾಡಿ, ಎಲ್ಐಸಿ ಪ್ರತಿನಿಧಿಗಳಾದ ಪುತ್ತೂರು ಬ್ರಾಂಚ್ನ ಗಿರೀಶ್ ಗೌಡ ಕೊರುಂದೂರು, ಬಂಟ್ವಾಳ ಬ್ರಾಂಚ್ನ ವಸಂತ ಕುಮಾರ್ ಕೆ. ಪುದುವೆಟ್ಟು, ಮಾಲತಿ ಸಾಕೋಟೆಮಾರು, ಮೋಹಿನಿ ಬಿ.ಸಿ.ರೋಡ್ ಕೈಕಂಬ, ಅಂಚೆ ಇಲಾಖೆ ನಿವೃತ್ತ ನೌಕರ ರುಕ್ಮಯ ಗೌಡ ಕೊಳಕ್ಕೆ, ಮಿತ್ರವೃಂದದ ರಾಮಚರಣ್ ರೈ ಮಾಣಿಗ, ನೆಲ್ಯಾಡಿ ಜೇಸಿಐ ಹಾಗೂ ಸೀನಿಯರ್ ಛೇಂಬರ್ ಪರವಾಗಿ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ., ಹಾಗೂ ಕೊಲ್ಲಿಮಾರು ಕುಟುಂಬದ ಪರವಾಗಿ ದೇವಣ್ಣ ಗೌಡ ಕೊಲ್ಲಿಮಾರು ಅವರನ್ನು ಸನ್ಮಾನಿಸಲಾಯಿತು. ನೆಲ್ಯಾಡಿ ಜೆಸಿಐನ ಪುರಂದರ ಗೌಡ ಡೆಂಜ, ಜಾಹ್ನವಿ, ವಿ.ಆರ್.ಹೆಗಡೆ, ಜಯಾನಂದ ಬಂಟ್ರಿಯಾಲ್, ದಯಾಕರ ರೈ, ದಯಾನಂದ ಕೆ ಆದರ್ಶ, ಚಂದ್ರಶೇಖರ ಬಾಣಜಾಲು, ಸುಪ್ರೀತಾ ರವಿಚಂದ್ರ, ಸುಚಿತ್ರಾ ಬಂಟ್ರಿಯಾಲ್, ಆರ್.ವೆಂಕಟ್ರಮಣ, ಮೋಹನ್ ಕುಮಾರ್ ಡಿ., ಗಣೀಶ್ ಕೆ ರಶ್ಮಿ, ವಿನ್ಯಾಸ ಬಂಟ್ರಿಯಾಲ್, ರವಿಚಂದ್ರ ಹೊಸವಕ್ಲು, ನವ್ಯಪ್ರಸಾದ್ ಅವರು ಸನ್ಮಾನ ಪತ್ರ ವಾಚಿಸಿದರು.
ವಿಶೇಷ ಗೌರವಾರ್ಪಣೆ:
ರಜತ ಸಂಭ್ರಮ ಕಾರ್ಯಕ್ರಮಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಕೃಷ್ಣಪ್ಪ ದೇವಾಡಿಗ ಸನಿಲ, ರಮೇಶ ಪೂಜಾರಿ ಕೊಲ್ಲಿಮಾರು, ಕೃಷ್ಣ ಎಂ.ಆರ್.ಹೊಸಮಠ, ದೇವಯ್ಯ ಗೌಡ ಪನ್ಯಾಡಿ, ಸತೀಶ್ಚಂದ್ರ ಶೆಟ್ಟಿ ಬೀರುಕ್ಕು ಅವರಿಗೆ ನಾರಾಯಣ ಎನ್.ಬಲ್ಯ ಅವರು ಗೌರವಾರ್ಪಣೆ ಮಾಡಿದರು.
ಕೊಡುಗೆ ವಿತರಣೆ:
ರಜತ ಸಂಭ್ರಮೋತ್ಸವದ ಅಂಗವಾಗಿ ನಾರಾಯಣ ಬಲ್ಯ ಅವರು ವಿವಿಧ ಕೊಡುಗೆ ವಿತರಿಸಿದರು. ದೇರಾಜೆ ಸರಕಾರಿ ಹಿ.ಪ್ರಾ.ಶಾಲೆಗೆ ಫ್ಯಾನ್, ಪೆರ್ನ ಮುಗೇರ ಪನ್ಯಾಡಿ, ರಾಮಚಂದ್ರ ಪೂಜಾರಿ ಗೋವಿಂದಕಟ್ಟೆ ಅವರಿಗೆ ತಲಾ 30 ಕೆ.ಜಿ.ಅಕ್ಕಿ, ಬಲ್ಯ ಉಮಾಮಹೇಶ್ವರಿ ದೇವಸ್ಥಾನಕ್ಕೆ ಅಡಿಕೆ ತೋಟ ಮಾಡಲು 12,500 ರೂ.ದೇಣಿಗೆ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟಕ್ಕೆ 12,500 ರೂ.ದೇಣಿಗೆ ಹಸ್ತಾಂತರಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ:
ಕಾರ್ಯಕ್ರಮದಲ್ಲಿ ರಜತ ಸಂಭ್ರಮದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ದಿನೇಶ್ ಮಾಮೇಶ್ವರ ಅವರು ಸ್ಮರಣ ಸಂಚಿಕೆ ಬಗ್ಗೆ ವಿಷಯ ಪ್ರಸ್ತಾಪಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಾರಾಯಣ ಬಲ್ಯ ಸ್ವಾಗತಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಅತಿಥಿಗಳಾಗಿದ್ದ ಕಡಬ ಉಪತಹಶೀಲ್ದಾರ್ ಗೋಪಾಲ ಕೆ., ಹೊಸಮಠ ಶ್ರೀ ಪೂರ್ಣ ಆಯುರ್ವೇದ ಮತ್ತು ಪಂಚಕರ್ಮ ಚಿಕಿತ್ಸಾಲಯದ ಡಾ.ಸುರೇಶ್ ಕುಮಾರ್ ಕೂಡೂರು, ಕುಟ್ರುಪ್ಪಾಡಿ ಗ್ರಾ.ಪಂ.ಅಧ್ಯಕ್ಷೆ ಸುಮನಾ ಹೊಸ್ಮಠ, ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನದ ಅಧ್ಯಕ್ಷ ರಾಮಚರಣ್ ರೈ ಮಾಣಿಗ, ಆಲಂಕಾರು ಶ್ರೀ ದುರ್ಗಾಂಬಾ ಪ.ಪೂ.ಕಾಲೇಜಿನ ಆಡಳಿತಾಧಿಕಾರಿ ಶ್ರೀಪತಿ ರಾವ್, ಕುಟ್ರುಪ್ಪಾಡಿ ಗ್ರಾ.ಪಂ.ಪಿಡಿಒ ಆನಂದ ಗೌಡ, ಪಡ್ನೂರು ಬಲ್ಯ ಶ್ರೀ ರಾಜನ್ ದೈವಸ್ಥಾನದ ಗೌರವಾಧ್ಯಕ್ಷ ಪುರುಷೋತ್ತಮ ಪನ್ಯಾಡಿ, ಎಲ್ಐಸಿ ಪ್ರತಿನಿಧಿಗಳ ಸಂಘ ಕರ್ನಾಟಕ ರಾಜ್ಯ ಅಧ್ಯಕ್ಷ ಎ.ಎಸ್.ಲೋಕೇಶ್ ಬೆಳ್ತಂಗಡಿ, ನೋಟರಿ,ನ್ಯಾಯವಾದಿ ಎನ್.ಇಸ್ಮಾಯಿಲ್ ನೆಲ್ಯಾಡಿ, ಬೆಳ್ತಂಗಡಿ ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕ ಶೀನಾ ನಾಡೋಳಿ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿ, ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ ಅಧ್ಯಕ್ಷ ಶೀನಪ್ಪ ಎಸ್., ನೆಲ್ಯಾಡಿ ಜೆಸಿಐ ನಿಯೋಜಿತ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಪಡ್ನೂರು ಬಲ್ಯ ಶ್ರೀ ರಾಜನ್ ದೈವಸ್ಥಾನದ ಪೂಜಾರಿಮೆ ಪ್ರಮುಖರಾದ ದೇವಣ್ಣ ಗೌಡ ಕೊಲ್ಲಿಮಾರು, ನಾರಾಯಣ ಅವರ ತಾಯಿ ಶಿವಮ್ಮ ದುಗ್ಗಣ್ಣ ಗೌಡ ಕೊಲ್ಲಿಮಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರಾಗಿದ್ದ ಎಲ್ಐಸಿ ಬಂಟ್ವಾಳ ಶಾಖೆ ಉಪಶಾಖಾಧಿಕಾರಿ ಕೃಪಾಲ್ ಬಿ.ಹೆಚ್., ಪುತ್ತೂರು ಶಾಖೆ ಉಪಶಾಖಾಧಿಕಾರಿ ಗುರುರಾಜ ಎಂ.ಯು., ಹೊಸಮಠ ಮಸ್ಜಿದ್ ನೂರ್ ಮಸೀದಿ ಅಧ್ಯಕ್ಷ ಮಹಮ್ಮದ್ ಆಲಿ, ತಾ.ಪಂ.ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ದೇರಾಜೆ ಶಾಲಾ ಪ್ರಭಾರ ಮುಖ್ಯಗುರು ವೀರಪ್ಪ ಇಟಗಿ, ಬಲ್ಯ ಬೀರುಕ್ಕು ಶ್ರೀ ರಾಜನ್ ದೈವಸ್ಥಾನ ಸೇವಾ ಟ್ರಸ್ಟ್ನ ಅಧ್ಯಕ್ಷ ಧನಂಜಯ ಕೊಡಂಗೆ, ಎಲ್ಐಸಿ ಉಡುಪಿ ವಿಭಾಗದ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರೈ ಸಾರಕರೆ, ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಸುಂದರ ಶೆಟ್ಟಿ ಎಂ.ಕೆ., ನೋಟರಿ,ನ್ಯಾಯವಾದಿ ಶಿವಪ್ರಸಾದ್ ಪುತ್ತಿಲ, ಕಡಬ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ, ಬಂಟ್ವಾಳ ಶಾಖೆ ಹಿರಿಯ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ, ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ, ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್, ಪ್ರಗತಿಪರ ಕೃಷಿಕ ರಾಜರಾಂ ಭಟ್, ನೆಲ್ಯಾಡಿ ಶಿಲ್ಪಾ ಕನ್ಸ್ಟ್ರಕ್ಷನ್ ಮತ್ತು ಶಿಲ್ಪಾ ಹಾರ್ಡ್ವೇರ್ನ ಶಿವಣ್ಣ ಪಿ.ಹೆಗ್ಡೆ, ಕ್ರೀಡಾ ತರಬೇತುದಾರ ಅಬ್ದುಲ್ ಖಾದರ್, ಮಂಗಳೂರು ನಗರ ಪೊಲೀಸ್ ಠಾಣೆಯ ರವಿಚಂದ್ರ ಡಿ.ಎಡಮಂಗಲ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಶೆಟ್ಟಿ ಹೊಸಮನೆ, ನಿವೃತ್ತ ಉಪನ್ಯಾಸಕ ರುಕ್ಮಯ ಗೌಡ, ನಿವೃತ್ತ ಮುಖ್ಯಗುರುಗಳಾದ ನೋಣಯ್ಯ ಗೌಡ, ಜನಾರ್ದನ ಗೌಡ ಪಣೆಮಜಲು, ರುಕ್ಮಿಣಿ ಕೆ.ಬಿ., ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಡಾ.ಸುರೇಶ್ಕುಮಾರ್ ಕೂಡೂರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಪ್ರಜ್ಯೋತ್ ಎನ್.ಕೆ.,ಹೂ ನೀಡಿ ಸ್ವಾಗತಿಸಿದರು. ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷ ಪುರಂದರ ಗೌಡ ಡೆಂಜ ವಂದಿಸಿದರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.ನೆಲ್ಯಾಡಿ ಹಾಗೂ ಶಿಕ್ಷಕ ಶೇಖರ ಗೌಡ ಪನ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾ ಕೆ.ಕೊಲ್ಲಿಮಾರ್, ಪ್ರಾಪ್ತಿ ಎನ್.ಕೆ.,ಪ್ರಾರ್ಥಿಸಿದರು.
ಭಜನೆ:
ಬೆಳಿಗ್ಗೆ ಶ್ರೀ ಸಬ್ಬಮ್ಮ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಬಳಿಕ ಕೊಲ್ಲಿಮಾರು ದುಗ್ಗಣ್ಣ ಗೌಡ ವೇದಿಕೆಯಲ್ಲಿ ನಾರಾಯಣ ಬಲ್ಯ ಅವರ ತಾಯಿ ಶಿವಮ್ಮ ಅವರು ಭಜನಾ ಕಾರ್ಯಕ್ರಮದ ದೀಪ ಪ್ರಜ್ವಲಿಸಿದರು. ನಂತರ ಕೊಲ್ಲಿಮಾರು ಕುಟುಂಬ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಆ ನಂತರ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಬಲ್ಯ, ಭಜನಾಮೃತ ಭಜನಾ ತಂಡ ಕಡಬ, ಶ್ರೀ ಉಮಾಮಹೇಶ್ವರಿ ಮಹಿಳಾ ಭಜನಾ ಮಂಡಳಿ ಶ್ರೀ ಕ್ಷೇತ್ರ ಬಲ್ಯ, ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಕಡಬ, ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ರಾಮನಗರ ನೆಲ್ಯಾಡಿ ಇವರಿಂದ ಭಜನೆ ನಡೆಯಿತು. ಮಧ್ಯಾಹ್ನ ಸಬ್ಬಮ್ಮ ದೇವಿಗೆ ಪೂಜೆ ನಡೆದು ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಬಲ್ಯ ಇವರಿಂದ ಭಜನಾ ಮಂಗಳ ನಡೆಯಿತು.
ಕುಣಿತ ಚೆಂಡೆ ವಾದನ:
ಮಧ್ಯಾಹ್ನ ಶ್ರೀ ಕಪಿಲೇಶ್ವರ ಕಲಾ ಸಮಿತಿ ಸಿಂಗಾರಿ ಮೇಳ ಚಾರ್ವಾಕ ಇವರಿಂದ ಸ್ಯಾಕ್ಸೋಪೋನಿನ ಜೊತೆಗೆ ಕುಣಿತ ಚೆಂಡೆ ವಾದನ ನಡೆಯಿತು.
ನವರಸ ದರ್ಶನ:
ಮಧ್ಯಾಹ್ನ ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ನೆಲ್ಯಾಡಿ ಇವರಿಂದ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಕಲಾರತ್ನ ವಿಶ್ವನಾಥ ಶೆಟ್ಟಿ ಕೆ.ನಿರ್ದೇಶನದ ನಗಬೇಕು ಆಗಾಗ ಬದುಕಿನೊಳಗೆ ಹಾಸ್ಯ-ಸಂಗೀತ-ನೃತ್ಯ-ಮ್ಯಾಜಿಕ್ಗಳಿಂದ ಕೂಡಿದ ನವರಸ ದರ್ಶನ ವಿಭಿನ್ನ ರೀತಿಯ ಕಾರ್ಯಕ್ರಮ ನಡೆಯಿತು.
ಏಕಕಾಲದಲ್ಲಿ ಕುಣಿತ ಭಜನೆ:
ಮಧ್ಯಾಹ್ನ ಸುಮಾರು 20 ಭಜನಾ ತಂಡಗಳಿಂದ ಏಕಕಾಲದಲ್ಲಿ ಕುಣಿತ ಭಜನೆ ನಡೆಯಿತು. ಶ್ರೀ ಉಮಾಮಹೇಶ್ವರಿ ಕುಣಿತ ಭಜನಾ ಮಂಡಳಿ ಬಲ್ಯ, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಬಿಳಿನೆಲೆ, ಶ್ರೀ ಗೋಪಾಲಕೃಷ್ಣ ಮಹಿಳಾ ಭಜನಾ ಮಂಡಳಿ ಬಿಳಿನೆಲೆ, ಶ್ರೀ ಕಾರ್ತಿಕೇಯ ಭಜನಾ ಮಂಡಳಿ ನೇಲ್ಯಡ್ಕ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಮರ್ದಾಳ, ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಕೊಂಬಾರು, ಶ್ರೀ ಶಿವದುರ್ಗಾ ಭಜನಾ ಮಂಡಳಿ ಮದುರಡ್ಕ ಎಡಮಂಗಲ, ಧರ್ಮಶ್ರೀ ಮಹಿಳಾ ಭಜನಾ ಮಂಡಳಿ ಹೊಸಮಜಲು-ಕೌಕ್ರಾಡಿ, ಮಂಜುಶ್ರೀ ಭಜನಾ ಮಂಡಳಿ ಮಣಿಬಾಂಡ, ಅನ್ನಪೂರ್ಣೇಶ್ವರೀ ಭಜನಾ ಮಂಡಳಿ ಆತೂರು, ಶ್ರೀ ಕೃಷ್ಣ ಭಜನಾ ಮಂಡಳಿ ಕೃಷ್ಣನಗರ ಬಂಟ್ರ, ಮಾತೃಶಕ್ತಿ ಭಜನಾ ಮಂಡಳಿ ಕಡಬ, ಜಯದುರ್ಗ ಭಜನಾ ಮಂಡಳಿ ಕಡಬ, ಮಾತೃಶಕ್ತಿ ದುರ್ಗಾವಾಹಿನಿ ಭಜನಾ ಮಂಡಳಿ ರೆಂಜಿಲಾಡಿ, ಪಂಚಲಿಂಗೇಶ್ವರ ಭಜನಾ ಮಂಡಳಿ ಕೊಂಬಾರು ರೆಂಜಾಳ, ಧರ್ಮಚಾವಡಿ ಭಜನಾ ಮಂಡಳಿ ಕಲ್ಲುಗುಡ್ಡೆ, ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ನೇರ್ಲ ಇಚ್ಲಂಪಾಡಿ, ಶ್ರೀ ಶಾರದಾ ಕುಣಿತ ಭಜನಾ ಮಂಡಳಿ ಕುಂತೂರು, ಮಂಜುಶ್ರೀ ಭಜನಾ ಮಂಡಳಿ ಇಚ್ಲಂಪಾಡಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಇಚ್ಲಂಪಾಡಿ ಬೀಡು ಇವರಿಂದ ಕುಣಿತ ಭಜನೆ ನಡೆಯಿತು.
ವಿಶೇಷ ಫೋಟೋ ಕ್ಲಿಪ್ಪಿಂಗ್:
ಮಧ್ಯಾಹ್ನ ನಾರಾಯಣ ಎನ್.ಕೊಲ್ಲಿಮಾರು ಬಲ್ಯ ಇವರ ಜೊತೆಗೆ ವಿಶೇಷ ಫೋಟೋ ಕ್ಲಿಪ್ಪಿಂಗ್ ನಡೆಯಿತು. ಅಭಿನಂದನಾ ಟೀಮ್ನ ಎಲ್ಲಾ ಎಲ್ಐಸಿ ಪ್ರತಿನಿಧಿಗಳ ಜೊತೆಗೆ, 1990-91ನೇ ಸಾಲಿನ 7ನೇ ಕ್ಲಾಸ್, 1993-94ನೇ ಸಾಲಿನ 10ನೇ ಕ್ಲಾಸ್, 1995-96ನೇ ಸಾಲಿನ ಪಿಯುಸಿ ಹಾಗೂ 1998-99ನೇ ಸಾಲಿನ ಡಿಗ್ರಿ ಬ್ಯಾಚ್ನ ಸಹಪಾಠಿಗಳ ಜೊತೆ ವಿಶೇಷ ಫೋಟೋ ಕ್ಲಿಪ್ಪಿಂಗ್ ನಡೆಯಿತು.
ಯೋಗ ಪ್ರದರ್ಶನ:
ಕಡಬ ಕ್ನಾನಾಯ ಜ್ಯೋತಿ ಆಂಗ್ಲಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ ಯೋಗಪಟು ಸಾನ್ವಿ ದೊಡ್ಡಮನೆ ಪಂಜ ಇವರಿಂದ ಯೋಗ ಪ್ರದರ್ಶನ ನಡೆಯಿತು.
ಶ್ರೀ ದೇವಿ ಮಹಾತ್ಮೆ ಯಕ್ಷಗಾನ:
ಸಂಜೆ ಶ್ರೀ ಸಬ್ಬಮ್ಮ ದೇವಿಗೆ ಪೂಜೆ ನಡೆಯಿತು. ಬಳಿಕ ಚೌಕಿ ಪೂಜೆ ನಡೆದು ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.
ನಾರಾಯಣ ಬಲ್ಯ ದಂಪತಿಗೆ ಸನ್ಮಾನ:
ಎಲ್ಐಸಿ ವೃತ್ತಿ ಬದುಕಿನ ರಜತ ಸಂಭ್ರಮ ಆಚರಿಸಿಕೊಂಡ ಬಂಟ್ವಾಳ ಶಾಖೆಯ ಎಲ್ಐಸಿ ಅಭಿವೃದ್ಧಿ ಅಧಿಕಾರಿ ನಾರಾಯಣ ಎನ್ ಬಲ್ಯ ಹಾಗೂ ಅವರ ಪತ್ನಿ ಬಲ್ಯ ಸರಕಾರಿ ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಪುಷ್ಪಾ ಕೆ.ಕೊಲ್ಲಿಮಾರು ಅವರನ್ನು ಕೊಲ್ಲಿಮಾರು ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು. ಈ ಸನ್ಮಾನ ಪತ್ರವನ್ನು ನಮಿತಾ ಕೊಲ್ಲಿಮಾರು, ಗಾಯತ್ರಿ ಕೊಲ್ಲಿಮಾರು ವಾಚಿಸಿದರು. ಬಳಿಕ ಅಭಿನಂದನಾ ಬಳಗ ಎಲ್ಐಸಿ ಬಂಟ್ವಾಳ ಪ್ರತಿನಿಧಿಗಳು, ಅಭಿನಂದನಾ ಬಳಗ ಎಲ್ಐಸಿ ಪುತ್ತೂರು ಪ್ರತಿನಿಧಿಗಳಿಂದ ಸನ್ಮಾನ ನಡೆಯಿತು. ರವಿಶೆಟ್ಟಿ ವಾಮದಪದವು, ಮಿಥುನ್ ಸನ್ಮಾನ ಪತ್ರ ವಾಚಿಸಿದರು. ಎಲ್ಐಸಿ ಬಂಟ್ವಾಳ ಶಾಖೆಯ ಸಹೋದ್ಯೋಗಿ ಅಭಿವೃದ್ಧಿ ಅಧಿಕಾರಿಗಳ ಸಂಘಟನೆ, ನೆಲ್ಯಾಡಿ ಜೆಸಿಐ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್, ಎಲ್ಐಸಿ ಪ್ರತಿನಿಧಿ ಗಿರೀಶ್ ಗೌಡ ಕೊರುಂದೂರು ಸೇರಿದಂತೆ ನಾರಾಯಣ ಬಲ್ಯ ಹಿತೈಷಿಗಳು ಸನ್ಮಾನಿಸಿ ಶುಭಹಾರೈಸಿದರು.
ದಿನಪೂರ್ತಿ ಸಂಭ್ರಮ
ನಾರಾಯಣ ಬಲ್ಯ ಅವರ ಎಲ್ಐಸಿ ವೃತ್ತಿ ಬದುಕಿನ ರಜತ ಸಂಭ್ರಮ ದಿನಪೂರ್ತಿ ನಿರಂತರವಾಗಿ ನಡೆಯಿತು. ಬೆಳಿಗ್ಗೆ ಶ್ರೀ ಸಬ್ಬಮ್ಮ ದೇವಿಗೆ ವಿಶೇಷ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ವೇದಿಕೆಯಲ್ಲಿ ಭಜನೆ, ಸ್ಯಾಕ್ಸೋಫೋನಿನ ಜೊತೆಗೆ ಕುಣಿತ ಚೆಂಡೆ ವಾದನ, ನವರಸ ದರ್ಶನ, ಕುಣಿತ ಭಜನೆ, ವಿಶೇಷ ಫೋಟೋ ಕ್ಲಿಪ್ಪಿಂಗ್, ಯೋಗ ಪ್ರದರ್ಶನ ಹೀಗೆ ವಿವಿಧ ಕಾರ್ಯಕ್ರಮಗಳು ಗಮನ ಸೆಳೆಯಿತು. ರಾತ್ರಿ ಶ್ರೀ ದೇವಿಮಹಾತ್ಮೆ ಯಕ್ಷಗಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಹೀಗೆ ಬೆಳಿಗ್ಗೆ 6ರಿಂದ ರಾತ್ರಿ 12.30ರ ತನಕ ನಿರಂತರವಾಗಿ ನಡೆದ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಆಗಮಿಸಿ ನಾರಾಯಣ ಬಲ್ಯ ಅವರಿಗೆ ಶುಭಹಾರೈಸಿದರು.