ಉಪ್ಪಿನಂಗಡಿ: ಇದ್ದಿಲು ಅಳವಡಿಸಿ ಬಳಸುವ ಕಂಚಿನ ಇಸ್ತ್ರಿ ಪೆಟ್ಟಿಗೆಯನ್ನು ಕಳವು ಮಾಡಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ಗ್ರಾಮ ಪಂಚಾಯತ್ ಸದಸ್ಯ ಸಣ್ಣಣ್ಣ ಯಾನೆ ಸಂಜೀವ ಮಡಿವಾಳ ರವರು ಇಲ್ಲಿನ ರಥಬೀದಿಯ ತಮ್ಮ ಅಂಗಡಿಯಲ್ಲಿ ಇಸ್ತ್ರಿ ಪೆಟ್ಟಿಗೆಯನ್ನು ಇರಿಸಿ ಬ್ಯಾಂಕ್ ವ್ಯವಹಾರದ ನಿಮಿತ್ತ ಹೊರ ಹೋದವರು ಹಿಂದಿರುಗುವಾಗ ಅಂಗಡಿಯೊಳಗಿದ್ದ ಇಸ್ತ್ರಿ ಪೆಟ್ಟಿಗೆಯನ್ನು ಕಳ್ಳರು ಕದ್ದೊಯ್ದಿರುವುದು ಗಮನಕ್ಕೆ ಬಂದಿತ್ತು.
ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.