ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತ್ತೊಟ್ಟು ಅನಿಲಬಾಗ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ಎ.ಎಸ್.ಜಿ. ಕಾಂಪ್ಲೆಕ್ಸ್ನಲ್ಲಿ ಡಿ.23ರಂದು ಗಣಹೋಮ ನಡೆಯಿತು.
ಬೆಳಾಲು ಆರಿಕೊಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿಯವರು ದೀಪ ಪ್ರಜ್ವಲಿಸಿದರು. ಬಳಿಕ ಮಾತನಾಡಿದ ಅವರು, ಎ.ಎಸ್.ಜಿ.ಕಾಂಪ್ಲೆಕ್ಸ್ ಉತ್ತರೋತ್ತರ ಅಭಿವೃದ್ಧಿ ಹೊಂದಲಿ, ಮಾಲಕರಿಗೆ ದೇವರ ಅನುಗ್ರಹವಿರಲಿ ಎಂದು ಹೇಳಿ ಶುಭಹಾರೈಸಿದರು. ಎ.ಎಸ್.ಜಿ.ಕಾಂಪ್ಲೆಕ್ಸ್ ಮಾಲಕ ಶೇಖರ ಗೌಡ ಅವರು ಹರೀಶ್ ಕೋಡಿ ಅವರನ್ನು ಸನ್ಮಾನಿಸಿ ಗೌರವಿಸಿದರು. ವಿಶ್ವನಾಥ ಗೌಡ ಪೆರಣ, ಗೋಪಾಲ ಗೌಡ ಕುದ್ಕೋಳಿ, ಪುರುಷೋತ್ತಮ ಗೌಡ ಕುದ್ಕೋಳಿ, ರವಿ ಸುರಕ್ಷಾ ನೆಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು. ಎ.ಎಸ್.ಜಿ.ಕಾಂಪ್ಲೆಕ್ಸ್ ಮಾಲಕ ಶೇಖರ ಗೌಡ ಅನಿಲಬಾಗ್ ಅವರು ಅತಿಥಿಗಳನ್ನು ಸ್ವಾಗತಿಸಿದರು.