ವಿಶ್ವಕರ್ಮ ಗುಡಿ ಕೈಗಾರಿಕೆ ಸಂಘದ ಸಭೆ

0

ಪುತ್ತೂರು: ವಿಶ್ವಕರ್ಮ ಗುಡಿ ಕೈಗಾರಿಕೆ ಸಂಘ ಪುತ್ತೂರು ಇದರ ಸಭೆಯು ದಾರಂದಕುಕ್ಕು ವಾಸುದೇವ ಆಚಾರ್ಯರ ಕಬ್ಬಿಣ ಕೆಲಸದ ಅಂಗಡಿಯಲ್ಲಿ ನಡೆಯಿತು.


ಕರ್ನಾಟಕ ಸರಕಾರದ ವತಿಯಿಂದ ನೀಡುವ ಸಂಘಟಿತ ಕಾರ್ಡು, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಸ್ಮಾರ್ಟ್ ಕಾರ್ಡ್‌ಗಳನ್ನು ಅರ್ಹ ಕಾರ್ಮಿಕರಿಗೆ ಸಭೆಯಲ್ಲಿ ವಿತರಿಸಲಾಯಿತು. ದೀಪ ಬೆಳಗಿಸಿದ ವಾಸುದೇವ ಆಚಾರ್ಯ ದಾರಂದಕುಕ್ಕು ಮಾತನಾಡಿ, ಈ ಸಂಘವು ಜನರಿಗೆ ಉಪಯೋಗ ಆಗಬೇಕೆಂದು ಹೇಳಿ ಶುಭ ಹಾರೈಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಗುಡಿ ಕೈಗಾರಿಕೆ ಸಂಘದ ಅಧ್ಯಕ್ಷ ಸದಾನಂದ ಆಚಾರ್ಯ ರಾಮಕುಂಜ ಅವರು, ವಿಶ್ವಕರ್ಮ ಗುಡಿ ಕೈಗಾರಿಕೆ ಸಂಘವು ಜಿಲ್ಲೆ, ತಾಲೂಕಿನಲ್ಲಿ ರಚನೆಗೊಂಡಿದೆ. ಸಂಘದ ಬೆಳವಣಿಗೆಗೆ ಸದಸ್ಯರೆಲ್ಲರು ಸಹಕರಿಸಬೇಕೆಂದು ಹೇಳಿದರು. ವಿಶ್ವಕರ್ಮ ಗುಡಿಕೈಗಾರಿಕೆ ಜಿಲ್ಲಾ ಅಧ್ಯಕ್ಷ ರಮೇಶ ಆಚಾರ್ಯ ಕಡೆಶ್ವಾಲ್ಯ ಮಾತನಾಡಿ, ಸರಕಾರದ ಯೋಜನೆಗಳನ್ನು ಸಂಘದ ಸದಸ್ಯರು ಪಡೆದುಕೊಳ್ಳಬೇಕೆಂದು ಹೇಳಿದರು.


ಸಂಘದ ಸದಸ್ಯ ಚಿದಾನಂದ ಆಚಾರ್ಯ ಹಿರೇಬಂಡಾಡಿ ಸ್ವಾಗತಿಸಿ, ನಿರೂಪಿಸಿದರು. ಹರೀಶ್ ಆಚಾರ್ಯ ಪೆರಿಯಡ್ಕ ವಂದಿಸಿದರು. ಸಭೆಯಲ್ಲಿ ಜಿಲ್ಲಾ ಕೋಶಾಧಿಕಾರಿ ಪ್ರಸನ್ನ ಆಚಾರ್ಯ ಉಪ್ಪಿನಂಗಡಿ, ಜಿಲ್ಲಾ ಸಂಚಾಲಕ ನವೀನ ಆಚಾರ್ಯ, ಪುತ್ತೂರು ಹಾಗೂ ಕಡಬ ತಾಲೂಕಿನ ವಿಶ್ವಕರ್ಮ ಗುಡಿ ಕೈಗಾರಿಕೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here