ಕೋಡಿಂಬಾಡಿ: ಕೋಡಿ-ಪಿಜಿನಡ್ಕ ಸಂಚಾರಕ್ಕೆ ರಸ್ತೆ ನಿರ್ಮಾಣ:ಶಾಸಕ ಅಶೋಕ್ ರೈ ಮಾರ್ಗದರ್ಶನದೊಂದಿಗೆ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಮುಂದಾಳತ್ವದಲ್ಲಿ ಸಂಧಾನ ಸಕ್ಸಸ್

0

ಕೋಡಿಂಬಾಡಿ: ಕಳೆದ ಅನೇಕ ವರುಷಗಳಿಂದ ಮನೆಗೆ ತೆರಳಲು ಸರಿಯಾದ ರಸ್ತೆಯಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ರಸ್ತೆ ಭಾಗ್ಯ ಒದಗಿ ಬಂದಿದೆ.

ಕೋಡಿ-ಫಿಜಿನಡ್ಕ ಭಾಸ್ಕರ್ ರೈ ಅವರ ಮನೆಗೆ ಹಲವು ವರ್ಷಗಳಿಂದ ಸರಿಯಾದ ರಸ್ತೆಯಿಲ್ಲದೆ ಮನೆಗೆ ತೆರಳಲು ಸಂಕಷ್ಟಪಡುತ್ತಿದ್ದು, ಭಾಸ್ಕರ್ ಅವರ ಮನವಿ ಮೇರೆಗೆ ಶಾಸಕ ಅಶೋಕ್ ರೈ ಮತ್ತು ಅವರ ತಾಯಿ ಗಿರಿಜಾ ರೈ ಹಾಗೂ ಸ್ಥಳೀಯ ನಿವಾಸಿ ಸೇವಂತಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು ರವರ ಮುತುವರ್ಜಿಯಿಂದಾಗಿ ಇದೀಗ ರಸ್ತೆ ನಿರ್ಮಾಣದ ಕಾರ್ಯಕ್ಕೆ ನಾಂದಿಯಾಡಿದ್ದು, ಈ ಮೂಲಕ ಹಲವು ವರುಷಗಳ ಬೇಡಿಕೆ ಈಡೇರಿದಂತಾಗಿದೆ.

ಘಟನೆ ವಿವರ :
ಕಳೆದ ಅನೇಕ ವರುಷಗಳಿಂದ ರಸ್ತೆಯಿಲ್ಲದೆ ಫಿಜಿನಡ್ಕ ಭಾಸ್ಕರ ರೈ ಕುಟುಂಬ ಸಂಕಷ್ಟಪಡುತ್ತಿದ್ದರು. ಭಾಸ್ಕರ್ ರೈ ಅವರ ಜಾಗಕ್ಕೆ ಒಂದು ಕಡೆ ದಿ. ಮಾದವ ಪೂಜಾರಿ ಅವರ ಪತ್ನಿ ಸೇವಂತಿಯವರಿಗೆ ಸೇರಿದ ಜಾಗವಿದ್ದು, ಮತ್ತೊಂದು ಕಡೆ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸೇರಿದ ಜಾಗವಿದೆ. ಮಾತುಕತೆ ಮೂಲಕ ಬಡ ಕುಟುಂಬಕ್ಕೆ ರಸ್ತೆ ನೀಡಲು ಶಾಸಕರು ಹಾಗೂ ಸ್ಥಳೀಯ ನಿವಾಸಿ ಸೇವಂತಿಯವರು ಒಪ್ಪಿಗೆ ನೀಡಿದ್ದು, ಈ ಮೂಲಕ ಒಮ್ಮತದ ಅಭಿಪ್ರಾಯಕ್ಕೆ ಬಂದು ಭಾಸ್ಕರ್ ಅವರ ಕುಟುಂಬಕ್ಕೆ ರಸ್ತೆ ಭಾಗ್ಯವನ್ನು ಕಲ್ಪಿಸಿದರು.

ರಸ್ತೆ ನಿರ್ಮಾಣಗೊಂಡ ಹಿನ್ನಲೆ ಕುಟುಂಬ ಮಾತ್ರವಲ್ಲದೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here