ಪುತ್ತೂರು: ಮಂದಾರ ಬಳಗ ಕುಂಬ್ರ ಅರ್ಪಿಸುವ ಪಡ್ಡಂಬೈಲುಗುತ್ತು ದಿ.ನಾರಾಯಣ ರೈ ಸ್ಮರಣಾರ್ಥ 2024 ರ ‘ಮಂದಾರ ಪ್ರಶಸ್ತಿ’ ಪ್ರದಾನ ಸಮಾರಂಭವು ಡಿ.31 ರಂದು ಸಂಜೆ ಕುಂಬ್ರ ಹೇಮಾವತಿ ಸಂಕೀರ್ಣದ ಬಳಿ ದಿ.ತ್ಯಾಂಪಣ್ಣ ರೈ ವೇದಿಕೆಯಲ್ಲಿ ನಡೆಯಲಿದೆ.
ಈ ಬಾರಿ ಹಿರಿಯ ನಾಗರಿಕರಾದ ಹೇಮಾವತಿ ರೈ ಕುಂಬ್ರ, ಉದ್ಯಮ ಕ್ಷೇತ್ರದಲ್ಲಿ ಡಾ| ಅಶ್ರಫ್ ಕಮ್ಮಾಡಿ ಹಾಗೂ ಕೃಷಿ ಕ್ಷೇತ್ರದ ಸಾಧನೆಗಾಗಿ ಗುಂಡ್ಯಡ್ಕ ವಾಸು ಪೂಜಾರಿಯವರಿಗೆ ಮಂದಾರ ಪ್ರಶಸ್ತಿ ಪ್ರದಾನ ನಡೆಯಲಿದೆ. ಪುತ್ತೂರು ಶಾಸಕರದ ಅಶೋಕ್ ಕುಮಾರ್ ರೈಯವರ ಸಭಾಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್.ಎಸ್ ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈ ಸಾಧಕರನ್ನು ಸನ್ಮಾನಿಸಲಿದ್ದಾರೆ. ತುಳು ಅಕಾಡೆಮಿ ಸದಸ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಅಭಿನಂದನಾ ಮಾತುಗಳನ್ನಾಡಲಿರುವರು.
ಅತಿಥಿಗಳಾಗಿ ಶ್ರೀ ಕುಕ್ಕುಮುಗೇರು ಉಳ್ಳಾಕುಲು ಕ್ಷೇತ್ರದ ಆಡಳಿತ ಮೊಕ್ತೇಸರ ಚಿಕ್ಕಪ್ಪ ನಾಕ್, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉದ್ಯಮಿಗಳಾದ ವೆಂಕಪ್ಪ ಗೌಡ ಬೊಳ್ಳಾಡಿ, ಬೂಡಿಯಾರ್ ರಾಧಾಕೃಷ್ಣ ರೈ, ಮೋಹನ್‌ದಾಸ ರೈ ಕುಂಬ್ರ, ಯೂಸುಫ್ ಹಾಜಿ ಕೈಕಾರ, ಪುರಂದರ ರೈ ಕೋರಿಕ್ಕಾರು, ಜಯಂತ್ ನಡುಬೈಲ್, ಮಹಮ್ಮದ್ ಸಾದಿಕ್ ಹಾಜಿ, ಅಕ್ಷಿತ್ ರೈ ಕುರಿಕ್ಕಾರ ಹಾಗೇ ಪಿ.ಎಂ.ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ವಿನೋದ್ ಕುಮಾರ್ ಶೆಟ್ಟಿ ಅರಿಯಡ್ಕ, ಪ್ರಕಾಶ್ಚಂದ್ರ ರೈ ಕೈಕಾರ, ರತನ್ ರೈ ಕುಂಬ್ರ, ಸಂತೋಷ್ ಕುಮಾರ್ ರೈ ಕುಂಬರ ಮೇಗಿನಗುತ್ತು, ಹರ್ಷ ರೈ ಕುರಿಕ್ಕಾರ, ಸುಬ್ಬಣ್ಣ ರೈ ಕುಂಬ್ರ, ಬಾಲಚಂದ್ರ ರೈ, ಪ್ರೇಮಾ ಬಿ.ರೈ, ಪಿ.ಕೆ ಮಹಮ್ಮದ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂದಾರ ಬಳಗದ ಸುಂದರ ರೈ ಮಂದಾರ ತಿಳಿಸಿದ್ದಾರೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಆರಿಕೋಡಿಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಹರೀಶ್ ಆರಿಕೋಡಿಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಅಮ್ಮೆರ್ ತುಳು ನಾಟಕ
ವಿಶೇಷವಾಗಿ ಕಡಮಜಲು ಸುಭಾಷ್ ರೈ ಮತ್ತು ಪ್ರೀತಿ ಎಸ್.ರೈಯವರ ದಾಂಪತ್ಯ ಜೀವನದ 45 ನೇ ವರ್ಷದ ಸಂಭ್ರಮಾಚರಣೆ ಕೂಡ ಇದೇ ವೇದಿಕೆಯಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಅಮ್ಮ ಕಲಾವಿದೆರ್ ಕುಡ್ಲ ತಂಡದವರಿಂದ ತುಳು ಹಾಸ್ಯಮಯ ಸಾಂಸಾರಿಕ ನಾಟಕ ‘ಅಮ್ಮೆರ್’ ಪ್ರದರ್ಶನಗೊಳ್ಳಲಿದೆ.