ಪುತ್ತೂರು: ಒಳಮೊಗ್ರು ಗ್ರಾಮದ ಶ್ರೀ ಕುಕ್ಕು ಮುಗೇರು ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಚಿಕ್ಕಪ್ಪ ನ್ಯಾಕ್ ಅರಿಯಡ್ಕರವರು ರಾಜಮಾಡ ಬೊಳ್ಳಾಡಿಯಲ್ಲಿ ಬಿಡುಗಡೆ ಮಾಡಿದರು. ಜ.29 ರಿಂದ ಫೆ.03 ರವರೆಗೆ ನೇಮೋತ್ಸವ ನಡೆಯಲಿದೆ. ವೇದಿಕೆಯಲ್ಲಿ ದೈವಸ್ಥಾನದ ಮೊಕ್ತೇಸರರಾದ ಎ.ಜಿ. ವಿಜಯಕುಮಾರ ರೈ ಮುಗೇರು ಉಪಸ್ಥಿತರಿದ್ದರು.
ಸಭೆಯಲ್ಲಿ ವೆಂಕಪ್ಪಗೌಡ ಬೊಳ್ಳಾಡಿ, ಸುಧಾಕರ್ ರೈ ಕುಂಬ್ರ, ಹೊನ್ನಪ್ಪ ಗೌಡ ಇಡಿಂಜಿಲ, ರಕ್ಷಿತ್ ರೈ ಮುಗೇರು, ಸುಧಾಕರ್ ರೈ ಕುಂಬ್ರ, ಬಾರಿಕೆ ನಾರಾಯಣ್ ರೈ, ಸೀತಾರಾಮರೈ ಕೈಕಾರ, ಕುಂಬ್ರ ದುರ್ಗಾ ಪ್ರಸಾದ್ ರೈ, ಪುರಂದರ ಶೆಟ್ಟಿ ಮುಡಾಲ, ಜಗನ್ನಾಥ ಪೂಜಾರಿ ಮುಡಾಲ, ಚಂದ್ರಶೇಖರ ಗೌಡ ಬೊಳ್ಳಾಡಿ, ಉಮೇಶಗೌಡ ಬೊಳ್ಳಾಡಿ, ಪ್ರಜ್ವಲ್ ರೈ ಕೈಕಾರ ಉಪಸ್ಥಿತರಿದ್ದರು. ಪ್ರತಿಭಾ ಪ್ರೌಢಶಾಲೆಯ ಶಿಕ್ಷಕರಾದ ವಿಶ್ವನಾಥ ಗೌಡ ಬೊಳ್ಳಾಡಿ ಸ್ವಾಗತಿಸಿ, ವಂದಿಸಿದರು.