ಅಂಬಿಕಾದ ವಿದ್ಯಾರ್ಥಿನಿಯರು ರಾಜ್ಯಮಟ್ಟದ ಥ್ರೋಬಾಲ್‌ನಲ್ಲಿ ಪ್ರಥಮ

0

ಪುತ್ತೂರು: ಬೆಂಗಳೂರು ಹಾಗೂ ಬಾಗಲಕೋಟೆಯ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಮತ್ತು ಯಲ್ಲಟ್ಟಿಯ ಕೊಣ್ಣೂರ ವಿಜ್ಞಾನ ಪದವಿ ಪೂರ್ವ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 16ರಿಂದ 18ರವರೆಗೆ ನಡೆದ 2024-25ನೇ ಸಾಲಿನ ಪದವಿ ಪೂರ್ವ ವಿದ್ಯಾಲಯಗಳ ರಾಜ್ಯ ಮಟ್ಟದ ಬಾಲಕಿಯರ ಥ್ರೋಬಾಲ್ ಕ್ರೀಡಾಕೂಟದಲ್ಲಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಅವನಿ ರೈ, ವೈಶಾಲಿ ಕೆ, ರಿಯಾ ಜೆ ರೈ ಪ್ರಥಮ ಸ್ಥಾನ ಗಳಿಸಿದ್ದಾರೆ.


ಅವನಿ ರೈ ಅವರು ಪುತ್ತೂರು ಪಾಂಗ್ಲಾಯಿಯ ತಾರಾನಾಥ ರೈ ಬಿ ಮತ್ತು ಮಮತಾ ರೈ ದಂಪತಿಯ ಪುತ್ರಿಯಾದರೆ, ವೈಶಾಲಿ ಕೆ ಪುತ್ತೂರು ಆರ್ಯಾಪಿನ ಬಾಬು ಶೆಟ್ಟಿ ಕೆ ಮತ್ತು ವಿಶಾಲಾಕ್ಷಿ ಬಿ ದಂಪತಿಯ ಪುತ್ರಿ. ರಿಯಾ ಜೆ ರೈ ಪುತ್ತೂರು ಮುಕ್ರಂಪಾಡಿಯ ಜಯಪ್ರಸಾದ್ ರೈ ಡಿ ಮತ್ತು ಹರಿಣಾಕ್ಷಿ ಜೆ ರೈ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here