ಆಲಂಕಾರು: ಪೆರಾಬೆ ಗ್ರಾಮದ ಪರಾರಿಗುತ್ತು ವಿನಲ್ಲಿ ದೈವಂಕುಲು ಕೊಡಮಣಿತ್ತಾಯಿ ಮೈಸಂದಾಯ ಸಪರಿವಾರ ದೈವಸ್ಥಾನದಲ್ಲಿ ಡಿ.27,ಡಿ.28 ರಂದು ಧಾರ್ಮಿಕ ಕಾರ್ಯಕ್ರಮ ಹಾಗು ನೇಮೊತ್ಸವ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯ ರವರ ನೇತೃತ್ವದಲ್ಲಿ ಡಿ.27r ಶುಕ್ರವಾರ ಬೆಳಿಗ್ಗೆ ನಾಗತಂಬಿಲ,ದೈವಂಕುಲು, ಮಹಿಷಂತ್ತಾಯ,ಕೊಡಮಣಿತ್ತಾಯಿ ದೈವಗಳಿಗೆ ಕಲಶ ಪರ್ವ ಶಿರಾಡಿ ಪರಿವಾರ ದೈವಗಳಿಗೆ ತಂಬಿಲ ನಡೆದು ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಡಿ. 28 ರಂದು ಶನಿವಾರ ಬೆಳಿಗ್ಗೆ ಗಣಹೋಮ,ಹರಿಸೇವೆ,ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆದು ಸಂಜೆ ಕುಟುಂಬ ದೈವಗಳ ಭಂಡಾರ ತೆಗೆದು ನೇಮೊತ್ಸವ ನಡೆಯಿತು. ಆಗಮಿಸಿದ ಕುಟಂಬಸ್ಥರು ಹಾಗೂ ಹಿತೈಷಿಗಳು, ಊರವರು ದೇವರ ಹಾಗೂ ದೈವದ ಗಂಧ ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು ಈ ಸಂಧರ್ಭದಲ್ಲಿ ಪರಾರಿಗುತ್ತು ಯಜಮಾನ ಜನಾರ್ಧನ ರೈ.ಬಿ ಮತ್ತು ಕುಟುಂಬಸ್ಥರು, ವ್ಯವಸ್ಥಾಪಕರಾದ ಸುನಂದ ರೈ ಮತ್ತು ಮಕ್ಕಳು,ಶ್ರೀಮತಿ ಮತ್ತು ಶ್ರೀ ಕೆ.ಸದಾಶಿವ ರೈ ಮತ್ತು ಮಕ್ಕಳು ಪರಾರಿಗುತ್ತು ರವರು ಕಾರ್ಯಕ್ರಮದಲ್ಲಿ ಸಹಕರಿಸಿದರು.