ರಾಮಕುಂಜ: ಕೊಯಿಲ ಗ್ರಾಮದ ಸಬಳೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘ, ಸಬಳೂರು ಅಯೋಧ್ಯಾನಗರ ಶ್ರೀರಾಮ ಗೆಳೆಯರ ಬಳಗ, ಏಣಿತ್ತಡ್ಕ ಶಿವಾಜಿ ಗೆಳೆಯರ ಬಳಗದ ವತಿಯಿಂದ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಸಹಯೋಗದಲ್ಲಿ ರಕ್ತದಾನ ಶಿಬಿರ ಡಿ.29ರಂದು ನಡೆಯಿತು.
ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಕುಲ್ದಿಪ್ ಬಿ.ಜೆ. ಉದ್ಘಾಟಿಸಿದರು. ಬ್ಲಡ್ ಸೆಂಟರ್ ತಾಂತ್ರಿಕ ಮೇಲ್ವಿಚಾರಕಿ ಸಜನಿ ಮಾರ್ಟಿಸ್ ಮಾಹಿತಿ ನೀಡಿದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶೇಖರ ಗೌಡ ಪಾಪುದಮಂಡೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಬಳೂರು ಒಕ್ಕೂಟದ ಅಧ್ಯಕ್ಷ ಪುರಂದರ ಪೂಜಾರಿ ತುಂಬೆತ್ತಡ್ಕ, ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ ಪವನ್ ಕುಮಾರ್ ಏಣಿತ್ತಡ್ಕ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಯತೀನ್ ಪಟ್ಟೆದಮೂಲೆ ಉಪಸ್ಥಿತರಿದ್ದರು. ಶ್ರೀರಾಮ ಭಜನಾ ಮಂಡಳಿ ಕಾರ್ಯದರ್ಶಿ ರಾಧಕೃಷ್ಣ ನಾಯ್ಕ ಟಿ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಎರ್ಮಡ್ಕ ವಂದಿಸಿದರು.