ಸೇವೆಯಿಂದ ಸಂತೃಪ್ತಿ ಸಿಕ್ಕಿದೆ..ಡಾ ಚೂಂತಾರು.
ಪುತ್ತೂರು:ಪುತ್ತೂರು ಗೃಹ ರಕ್ಷಕ ದಳ ಘಟಕದ ವತಿಯಿಂದ ಸೇವಾ ನಿವೃತ್ತಿ ಹೊಂದಲಿರುವ ದ ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ.ಮುರಲೀ ಮೋಹನ
ಚೂಂತಾರು ಅವರಿಗೆ ಶ್ರೀ ಮಹಾಲಿಂಗೇಶ್ವರ ದೇವಾಲಯ ಪುತ್ತೂರು ಇದರ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭ ಮತ್ತು ಸನ್ಮಾನ ಸಮಾರಂಭ ನಡೆಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾರ್ಯನಿರ್ವವಣಾ ಅಧಿಕಾರಿ ಶ್ರೀನಿವಾಸ ಹಾಗೂ ವ್ಯವಸ್ಥಾಪಕ ಸಮಿತಿಯ ಸದಸ್ಯ ಈಶ್ವರ್ ನಾಯ್ಕ ಮತ್ತು ಪುತ್ತೂರು ನಗರ ಠಾಣೆಯ ಬರಹಗಾರ ಚಂದ್ರಶೇಖರ ರವರ ಹಾಗೂ ಗೃಹರಕ್ಷಕ ರಕ್ಷಕಿಯರ ಸಮ್ಮುಖದಲ್ಲಿ ಈ ಬೀಳ್ಕೊಡುಗೆ ಸಮಾರಂಭ ನೆರವೇರಿತು.
ಪುತ್ತೂರು ಘಟಕಧಿಕಾರಿ ಅಭಿಮನ್ಯು ರೈ ಮತ್ತು ಸಾರ್ಜೆಂಟ್ ಜಗನ್ನಾಥ ಅವರು ಶುಭ ಹಾರೈಸಿದರು.
ಗೀತಾ ಡಾ. ಮುರಲೀ ಮೋಹನ ಚೂಂತಾರು ಮಾತನಾಡಿ ಕಳೆದ ಹತ್ತು ವರುಷಗಳಿಂದ ದ.ಕ ಜಿಲ್ಲಾ ಕಮಾಂಡೆಂಟಾಗಿ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ಅಧಿಕಾರ ಸಮಯದಲ್ಲಿ ನಾನು ಕೆಲವೊಮ್ಮೆ ಕಠಿಣವಾಗಿ ವರ್ತಿಸಿರಬಹುದು. ಆದರೆ ಅದು ಶಿಸ್ತಿನ ಕ್ರಮಕ್ಕಾಗಿ ಮಾಡಿದ್ದೇನೆ. ಹಳೆ ಎಲೆ ಚದುರಿ ಹೋಗಿ ಹೊಸ ಚಿಗುರು ಬರುವ ಹಾಗೇ ನಿಮ್ಮ ಅಕ್ಕಪಕ್ಕದ ಸದಸ್ಯರನ್ನು ಗೃಹರಕ್ಷಕ ಸಂಸ್ಥೆಗೆ ಸೇರಿಸಿ ಇಲಾಖೆಯನ್ನು ಬಲಿಷ್ಟಗೊಳಿಸಿ ಎಂದರು.
ಜಯಲಕ್ಷ್ಮೀ ಪ್ರಾರ್ಥಿಸಿದರು. ಪುತ್ತೂರು ಘಟಕ ಅಧಿಕಾರಿ ಅಭಿಮನ್ಯು ರೈ ವಂದಿಸಿದರು.ಗೃಹರಕ್ಷಕ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.