ಪೆರ್ನಾಜೆ: ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 81 ಕೃಷಿಕರಿಗೆ “ಹವ್ಯಕ ಕೃಷಿ ರತ್ನ” ಪ್ರಶಸ್ತಿ ಪ್ರಧಾನ ಮಾಡಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ವಾಗ್ಮಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಿದರು. ಗಣ್ಯರ ಸಮ್ಮುಖದಲ್ಲಿ ಸೌಮ್ಯ ಪೆರ್ನಾಜೆಯವರಿಗೆ ಡಿ.27 ರಂದು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಗಣ್ಯರ ಸಮ್ಮುಖ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.
ವಿಶ್ವದಲ್ಲೇ ಪ್ರಪ್ರಥಮವಾಗಿ ಮಹಿಳಾ ಜೇನುಗಡ್ಡದಾರಿ ಜೇನು ಕೃಷಿ ವಿಶಿಷ್ಟ ಬರಹಗಳು ಕಲಾ ಪ್ರಿಯರು ಕಲಾ ಪೋಷಕರಾಗಿ ಆಕಾಶವಾಣಿಯಲ್ಲಿ ಹಾಡುಗಳನ್ನು ಆಲಿಸುವುದು ಮತ್ತು ಹಾಡುಗಳನ್ನು ಸುಶ್ರಾವ್ಯವಾಗಿ ಗುನುಗುವುದು ಅಲ್ಲದೆ ಸುಂದರ ಕೈಬರಹ ವೈವಿಧ್ಯಮಯ ತಿಂಡಿಗಳು ಸ್ವಾದಿಷ್ಟ ರುಚಿಕರ ಆಹಾರದ ಬರಹ ಅವರ ವಿಶೇಷತೆ.