ಉಪ್ಪಿನಂಗಡಿ : ಫಿಲೋಮಿನಾ ಕಾಲೇಜು ದರ್ಬೆ, ಪುತ್ತೂರು ಇಲ್ಲಿ ನವೆಂಬರ್ 21,22 ಮತ್ತು 23ರಂದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಲ್ಲೇಶ್ವರಂ, ಬೆಂಗಳೂರು ಆಯೋಜಿಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ 28 ವಿದ್ಯಾರ್ಥಿಗಳು ಭಾಗವಹಿಸಿದ್ದು ಶೇ.100 ಫಲಿತಾಂಶ ಪಡೆದಿರುತ್ತಾರೆ.
ಲೋವರ್ ಗ್ರೇಡ್ ವಿಭಾಗದಲ್ಲಿ 14 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು, 8ನೇ ತರಗತಿಯ ಶಮಿಕಾ, ಅಕ್ಷಯ ಪ್ರಸಾದ್ ಹಾಗೂ ಕೌಷಿಕ್ ಡಿ.ಟಿ ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 8ನೇ ತರಗತಿಯ ತ್ರಿಶಿಕ್ ಆಳ್ವ, ತನ್ವಿ ಕೆ.ಎಸ್, ಸುಯೋಗ್ ವೈ ಬಿ, ಶ್ರೇಯಸ್, ವೈಷ್ಣವಿ ಪೈ, ಅದ್ವೈತ್ ಕೆ.ಜೆ, ಸಾತ್ವಿಕ್ ಪ್ರಥಮ ಶ್ರೇಣಿಯಲ್ಲಿ, ವನ್ವಿತ್ ಎಸ್, ದೀಕ್ಷಿತ್ ಬಿ, ಯುತಿಕಾ ಎಸ್ ಹಾಗೂ ರಕ್ಷಾ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿತ್ತಾರೆ.
ಹೈಯರ್ ಗ್ರೇಡ್ ವಿಭಾಗದಲ್ಲಿ 14 ವಿದ್ದಾರ್ಥಿಗಳು ಭಾಗವಹಿಸಿದ್ದು, ಮೋಕ್ಷಾ ಎಂ ರೈ, ಆದ್ಯಾ, ಧನ್ವಿ ಬಿ ಸಿ ಶೆಟ್ಟಿ, ಅನ್ಮಯ್ ಡಿ ಶೆಟ್ಟಿ, ಹನೀಕ್ಷಾ, ಸೃಷ್ಟಿ ಕೆ, ಶ್ರಾವ್ಯ ಎಂ ಎಸ್ ಪ್ರಥಮ ಶ್ರೇಣಿಯಲ್ಲಿ, ಸಾನ್ವಿ, ಸೋನಿಕಾ ಟಿ, ಲಾಸ್ಯ ಕೆ, ಕೌಶಲ್ ಎ, ವೃಂದ ಭಟ್, ನಿಹಾರಿಕಾ ಕೆ, ಸುಧನ್ವ ಯೋಗೀಂದ್ರ ಭಟ್ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಇವರಿಗೆ ಸಂಸ್ಥೆಯ ಚಿತ್ರಕಲಾ ಶಿಕ್ಷಕರಾದ ಪ್ರವೀಣ್ ವರ್ಣಕುಟೀರ ಹಾಗೂ ಶ್ರೀನಿಧಿ ತರಬೇತಿ ನೀಡಿರುತ್ತಾರೆ.