ಪುತ್ತೂರು: ನೇತ್ರ ತಜ್ಞ ಡಾ.ಅಶ್ವಿನ್ ಸಾಗರ್ ಅವರ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷ ಕೇಂದ್ರ ಅಶ್ವಿನಿ ಅಪ್ಟಿಕಲ್ಸ್ ಜ.1ರಂದು ಮುಖ್ಯರಸ್ತೆಯ ಹೆಗ್ಡೆ ಆರ್ಕೆಡ್‌ನಲ್ಲಿ ಶುಭಾರಂಭಗೊಂಡಿತು.
ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ.ಗೌರಿ ಪೈಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಸತ್ಯಸಾಯಿ ಮಂದಿರದ ಹಿರಿಯರಾದ ಪದ್ಮನಾಭ ನಾಯಕ್ ಮಾತನಾಡಿ, ನಿವೃತ್ತಿ ಜೀವನದಲ್ಲಿಯೂ ಶಾಂತರಾಜ್ ಜನರಿಗೆ ಸೇವೆ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು. ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಸ್‌ನ ಅಧ್ಯಕ್ಷ ಡಾ.ಸತ್ಯಸುಂದರ ರಾವ್ ಮಾತನಾಡಿ, ನೇತ್ರಾಧಿಕಾರಿಯಾಗಿದ್ದ ಶಾಂತರಾಜ್ ರವರಲ್ಲಿ ಸೇವಾ ಮನೋಭಾವವಿದೆ. ರೋಗಿಗಳನ್ನು ಗುಣಮುಖಗೊಳಿಸಿಯೇ ಕಳುಹಿಸುವ ಶಕ್ತಿ ಅವರಲ್ಲಿದೆ. ದೀಪ ಬೆಳಗಿದಂತೆ ಸಂಸ್ಥೆಯು ಬೆಳೆಯಲಿ, ಎಲ್ಲರಿಗೂ ಸೇವೆ ದೊರೆಯಲಿ ಎಂದರು.
ನಿವೃತ್ತ ನೇತ್ರಾಧಿಕಾರಿ ಶಾಂತರಾಜ್ ಮಾತನಾಡಿ, ಸಂಸ್ಥೆಯಲ್ಲಿ ದೃಷ್ಠಿ ಪರೀಕ್ಷೆ, ತಜ್ಞರ ಸಲಹೆ, ಕಾಂಟ್ಯಾಕ್ಟ್ ಲೆನ್ಸ್ ಉತ್ತಮ ದರ್ಜೆಯ ಕನ್ನಡಕಗಳು, ಟಾಪ್‌ಕಾನ್ ಜಪಾನ್ ಕಂಪ್ಯೂಟರಿಕೃತ ಪರೀಕ್ಷೆ, ಪೊರೆ ಶಸ್ತ್ರ ಚಿಕಿತ್ಸೆ ನೀಡಲಾಗುವುದು. ತಜ್ಞ ವೈದ್ಯರಿಂದ ಸಲಹೆ, ಮಾರ್ಗದರ್ಶನ, ಚಿಕಿತ್ಸೆ ಲಭ್ಯವಿದೆ. ಗ್ರಾಮೀಣ ಪ್ರದೇಶದ ಜನರಿಗಾಗಿ ಹಳ್ಳಿಗಳಲ್ಲಿ ಪ್ರತಿ ತಿಂಗಳು 2-3 ಉಚಿತ ಕಣ್ಣಿನ ಪರೀಕ್ಷಾ ಶಿಬಿರಗಳನ್ನು ನಡೆಸಲಾಗುವುದು. ಶಿಬಿರದಲ್ಲಿ ಔಷಧಿ, ಕನ್ನಡಕ, ಚಿಕಿತ್ಸೆಗಳನ್ನು ಸಂಪೂರ್ಣ ಉಚಿತ ನೀಡಲಾಗುವುದು ಎಂದರು.
ವೇಣುಗೋಪಾಲ ಶೆಣೈ, ಆನಂದಾಶ್ರಮ ಸೇವಾ ಟ್ರಸ್ಟ್‌ನ ಟ್ರಸ್ಟಿ ಸದಾಶಿವ ಪೈ, ಆಪ್ಟಿಷಿಯನ್ ಮಂಜುಳಾ, ಡಾ.ವಿಕಾಸ್ ಮೊದಲಾದವರು ಉಪಸ್ಥಿತರಿದ್ದರು.