ಪುತ್ತೂರು: ಚಿಕ್ಕಮುಡ್ನೂರು ಮುಡಾಯೂರುಗುತ್ತು ಅರಿಗೋ ಪೆರ್ಮಂಡ ಗರಡಿಯಲ್ಲಿ ಜ.10 ರಿಂದ ಜ.12ರವರೆಗೆ ನಡೆಯುವ ಶ್ರೀ ಬೈದೇರುಗಳ ನೇಮೋತ್ಸವಕ್ಕೆ ಮುಡಾಯೂರುಗುತ್ತು ಕುಟುಂಬಸ್ಥರ ನೇತೃತ್ವದಲ್ಲಿ ಜ.2ರಂದು ಬೆಳಿಗ್ಗೆ ಗೊನೆ ಮುಹೂರ್ತ ನಡೆಯಿತು.
ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮತ್ತು ಡಾ.ಅಶೋಕ್ ಪಡಿವಾಳ್ ಮೂಡಾಯೂರುಗುತ್ತು ರವರು ಗರಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಗೊನೆ ಮುಹೂರ್ತ ನಡೆಯಿತು. ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ನರೇಂದ್ರ ಪಡಿವಾಳ್ ಮೂಡಾಯೂರುಗುತ್ತು, ಬಾಳಪ್ಪ ಪೂಜಾರಿ ಕೇಪುಳು, ರಘು ಶೆಟ್ಟಿ, ರಾಜೇಶ್, ವಿಶ್ವನಾಥ ಪೂಜಾರಿ, ಶ್ರೀಧರ ಪೂಜಾರಿ ಬಡಾವು, ಶೀನಪ್ಪ ಪೂಜಾರಿ ಆರಿಗೋ, ಗಂಗಾಧರ ಪೂಜಾರಿ ಅನಂತಿಮಾರ್, ರಘುನಾಥ ರೈ ಏಕ, ವಿಶ್ವನಾಥ ಪೂಜಾರಿ ಏಕ, ವೀರಪ್ಪ ಗೌಡ ಪುಳುವಾರ್, ಶೀನಪ್ಪ ಪೂಜಾರಿ, ಅಣ್ಣಿ ಪೂಜಾರಿ, ತಿಮ್ಮಪ್ಪ ಗೌಡ ಕಟ್ಟೆದಮಜಲು, ರಾಜೇಶ್ ಪೂಜಾರಿ, ಸುಂದರ ಪೂಜಾರಿ, ದಿನೇಶ್ ಪೂಜಾರಿ, ಅಣ್ಣಿ ಪೂಜಾರಿ ಬೀರ್ನೆತ್ತಿಲ್ ಅರಿಗೊ ಹಾಗೂ ಭಕ್ತರು ಉಪಸ್ಥಿತರಿದ್ದರು.