ಸವಣೂರು ಸರ್ಕಾರಿ ಪ್ರೌಢಶಾಲೆಗೆ ಎಸ್ ಕೆ ಜಿ ಐ ಕೋ ಆಪರೇಟಿವ್ ಸೊಸೈಟಿ ಮಂಗಳೂರು ಸಂಸ್ಥೆಯಿಂದ ಬೆಂಚ್, ಡೆಸ್ಕ್ ಗಳ ಕೊಡುಗೆ

0

ಸವಣೂರು :ಎಸ್ ಕೆ ಜಿ ಕೋ ಆಪರೇಟಿವ್ ಸೊಸೈಟಿ ಮಂಗಳೂರು ಸಂಸ್ಥೆಯ ಸ್ಥಾಪನೆಯ ವಜ್ರ ಮಹೋತ್ಸವದ ಸವಿನೆನಪಿಗಾಗಿ ಸವಣೂರಿನ ಸರ್ಕಾರಿ ಪ್ರೌಢಶಾಲೆಗೆ 50,000 ರೂ. ಮೌಲ್ಯದ ಬೆಂಚ್ ಡೆಸ್ಕ್ ಗಳನ್ನು ಕೊಡುಗೆಯಾಗಿ ನೀಡಿದರು.

ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ, ಉಪಾಧ್ಯಕ್ಷ  ಆನಂದ ಆಚಾರ್ಯ, ನಿರ್ದೇಶಕರಾದ ಶ್ರೀಕಾಂತ  ಆಚಾರ್ಯ , ರೋಹಿಣಿ ರಾಘವ, ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಆಚಾರ್ಯ, ಪುತ್ತೂರು ಶಾಖೆಯ ವ್ಯವಸ್ಥಾಪಕ ಕಿರಣ್ ಬಿ ವಿ ಇವರು ಶಾಲೆಯ ಹಿರಿಯ ಪದವೀಧರ ಸಹ ಶಿಕ್ಷಕರಾದ  ರಘು ಬಿ ಆರ್ ,ಕಾರ್ಯದರ್ಶಿ ಗಿರಿಶಂಕರ ಸುಲಾಯ, ಎಸ್ ಡಿ ಎಂ ಸಿ ಅಧ್ಯಕ್ಷ ರಾಧಾಕೃಷ್ಣ ಸಮ್ಮುಖದಲ್ಲಿ ಹಸ್ತಾಂತರಿಸಿದರು. 

ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ ಅವರು 60 ವರ್ಷಗಳ ಸವಿನೆನಪಿಗಾಗಿ ಕೈಗೊಂಡ 60 ಕಾರ್ಯಕ್ರಮಗಳ ಮಾಹಿತಿ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಯಜ್ಞೇಶ್ವರ ಆಚಾರ್ಯ ಸಂಸ್ಥೆಯ ಸ್ಥಾಪನೆ ,ಬೆಳವಣಿಗೆ ಮತ್ತು ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ಸಹಶಿಕ್ಷಕರಾದ ಬಿ ವಿ ಕಿಶನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here