ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕಿನ ಪೆರ್ನೆ ವಲಯದ ಪೆರ್ಲಾಪು ಎ ಕಾರ್ಯಕ್ಷೇತ್ರ ಕಡೇಶಿವಾಲಯ ಗ್ರಾಮದ ಪಟ್ಲ ನಿವಾಸಿ ಮೋನಪ್ಪ ಭಂಡಾರಿಯವರ ಪತ್ನಿ ಉಮಾವತಿಯವರು ಅನಾರೋಗ್ಯದಿಂದ ಬಳಲುತ್ತಿದ್ದು ನಡೆದಾಡುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ಇವರಿಗೆ ಶ್ರೀ ಕ್ಷೇತ್ರದಿಂದ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಮಂಜೂರಾಗಿರುವ ಔಟ್ ಸೈಡ್ ವ್ಹೀಲ್ ಚೇರ್ ಸೌಲಭ್ಯವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಒಕ್ಕೂಟದ ಪದಾಧಿಕಾರಿ ನಳಿನಾಕ್ಷಿ, ವಲಯ ಮೇಲ್ವಿಚಾರಕಿ ಶಾರದಾ, ಸೇವಾಪ್ರತಿನಿಧಿ ಜಲಜಾಕ್ಷಿಯವರು ಉಪಸ್ಥಿತರಿದ್ದರು.