ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಕಡಬ ತಾಲೂಕು ಕಡಬ ವಲಯದಿಂದ ಕೃಷಿ ಸ್ವ ಉದ್ಯೋಗ ಅಧ್ಯಯನ ಪ್ರವಾಸವನ್ನು ಬಂಟ್ವಾಳ ತಾಲೂಕಿಗೆ ಹಮ್ಮಿಕೊಳ್ಳಲಾಗಿತ್ತು.
ಮಧುಸೂದನ್ ರವರ ಅಕ್ಕಿ ರೊಟ್ಟಿ ಘಟಕಕ್ಕೆ ಭೇಟಿ ಮಾಡಿ ಸದಸ್ಯರಿಗೆ ಅಕ್ಕಿ ರೊಟ್ಟಿ ಮಾಡುವ ವಿಧಾನ ಮತ್ತು ದಿನಕ್ಕೆ 1 ಕ್ವಿಂಟಲ್ ಅಕ್ಕಿ ರೊಟ್ಟಿ ಮಾಡಿ ಮಾರಾಟ ಮಾಡುವುದರಿಂದ ಆಗುವ ಲಾಭದ ಬಗ್ಗೆ ಮಾಹಿತಿ ನೀಡಲಾಯಿತು. ರಘು ಪೂಜಾರಿಯವರನ್ನು ಭೇಟಿ ಮಾಡಿ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 5 ಲಕ್ಷ ಸಬ್ಸಿಡಿ ಸಾಲ ಪಡೆದು ಜನನಿ ಹೋಮ್ ಪ್ರಾಡಕ್ಟ್ (ಉಪ್ಪಿನಕಾಯಿ, ಚಿಕನ್ ಮಸಾಲ, ಲೋಬನ್ ನ್ಯಾಚುರಲ್ ಅಗರಬತ್ತಿ, ಮೆಂತ್ಯೆಮದ್ದು ) ತಯಾರಿ ಮಾಡುವುದರ ಬಗ್ಗೆ ಮಾಹಿತಿ ಕೊಡಿಸಲಾಯಿತು.
ಹಾಲು ಉತ್ಪಾದಕ ಘಟಕದ ಅಧ್ಯಕ್ಷ ಸತೀಶ್ ರವರ ಭೇಟಿ ಮಾಡಿ ಹೈನುಗಾರಿಕೆ ಬಗ್ಗೆ ಹಸುಗಳಿಗೆ ಬರುವ ಕಾಯಿಲೆ ಸರಿಯಾದ ಸಮಯಕ್ಕೆ ಮದ್ದು ಕೊಡಿಸುವುದರ ಬಗ್ಗೆ ಗೊಬ್ಬರ ಗ್ಯಾಸ್ ಬಳಕೆ ಓಲೆ ಬೆಲ್ಲ ತಯಾರಿ ಬಗ್ಗೆ ಮಾಹಿತಿ ಕೊಡಿಸಲಾಯಿತು. ಗುರುಪ್ರಸಾದ್ ರವರನ್ನು ಭೇಟಿ ಮಾಡಿ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 5 ಲಕ್ಷ ಸಬ್ಸಿಡಿ ಸಾಲ ಪಡೆದು ದುರ್ಗಾ ಹೋಮ್ ಪ್ರಾಡಕ್ಟ್ (ಹೋಳಿಗೆ, ಚಕ್ಲಿ,) ಬಗ್ಗೆ ಮತ್ತು ದಿನದ ಆದಾಯದ ಬಗ್ಗೆ ಮಾಹಿತಿ ಕೊಡಿಸಲಾಯಿತು.
ಪದ್ಮಾವತಿ ರವರನ್ನು ಭೇಟಿ ಮಾಡಿ 5 ಸೆನ್ಸ್ 10 ಸೆನ್ಸ್ ಮಲ್ಲಿಗೆ ನರ್ಸರಿ ಹೇಗೆ ಮಾಡಬೇಕು ಮತ್ತು ಗೊಬ್ಬರ ನೀರು ಮದ್ದು ಸಿಂಪಡನೇ ಬಗ್ಗೆ ಮಾಹಿತಿ ಕೊಡಿಸಲಾಯಿತು. ಕೃಷಿ ಸ್ವ ಉದ್ಯೋಗ ಅಧ್ಯಯನ ಪ್ರವಾಸಕ್ಕೆ ಬಂದಿರುವ ಎಲ್ಲಾ ಸದಸ್ಯರಿಗೆ ಕೃಷಿ ಪೂರಕ ಸ್ವ ಉದ್ಯೋಗ ಮಾಡುವುದರ ಬಗ್ಗೆ ಮಾಹಿತಿ ಕೊಡಿಸಲಾಯಿತು. ಯಂತ್ರ ಶ್ರೀ ನಾಟಿ ಬ್ಯಾಂಕ್ ಕೃಷಿ ಮೇಲ್ವಿಚಾರಕ ಉಮೇಶ್ ಬಂಟ್ವಾಳ ತಾಲೂಕಿನ ಕೃಷಿ ಮೇಲ್ವಿಚಾರಕ ಜೈರಾಮ್ , ಕಡಬ ತಾಲೂಕಿನ ಕೃಷಿ ಮೇಲ್ವಿಚಾರಕರಾದ ಸೋಮೇಶ್ , ಕಡಬ ವಲಯದ ಅಡ್ಡಗದ್ದೆ ವಾಲ್ಯ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರು ಮತ್ತು ಪ್ರಗತಿ ಬಂಧು ಸ್ವ ಸಹಾಯ ಸಂಘದ ಸದಸ್ಯರು ಕೃಷಿ ಅಧ್ಯಯನ ಪ್ರವಾಸದಲ್ಲಿ ಭಾಗವಹಿಸಿದರು.