ಆತೂರು: ದ್ಸಿಕ್ರ್ ಹಲ್ಕಾ 24ನೇ ವಾರ್ಷಿಕೋತ್ಸವ

0

ಶಿಕ್ಷಣ ಕ್ಷೇತ್ರದ ಒಲುಮೆಯಿಂದ ಅಲ್ಲಾಹುವಿನ ಅನುಗ್ರಹ ಪ್ರಾಪ್ತಿ-ಚುಂಗತ್ತರ ಫೈಝಿ

ಕಡಬ: ಆತೂರು ಬದ್ರಿಯಾ ಜುಮ್ಮಾ ಮಸ್ಜಿದ್‌ನಲ್ಲಿ ಪ್ರತಿ ತಿಂಗಳ ಪ್ರಥಮ ಗುರುವಾರ ಮಗ್ರಿಬ್ ನಮಾಝ್‌ನ ಬಳಿಕ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್‌ರವರ ನೇತೃತ್ವದಲ್ಲಿ ಸುಲ್ತಾನುಲ್ ಹಿಂದ್ ಅಜ್ಮೀರ್ ಖ್ವಾಜಾ ಮುಹೀನುದ್ದೀನ್ ಜಿಸ್ತಿ(ಖ.ಸಿ.)ರವರ ಸ್ಮರಣಾರ್ಥ ನಡೆಸಿಕೊಂಡು ಬರುತ್ತಿರುವ ದ್ಸಿಕ್ರ್ ಹಲ್ಕಾ ಇದರ 24ನೇ ವಾರ್ಷಿಕ ಮಹಾಸಂಭ್ರಮದ ಸಮಾರೋಪ ಜ.2ರಂದು ರಾತ್ರಿ ನಡೆಯಿತು.


ಸಮರಂಭ ಉದ್ಘಾಟಿಸಿದ ಶೈಖುನಾ ಸುಲೈಮಾನ್ ಫೈಝಿ ಚುಂಗತ್ತರ ಅವರು ಮಾತನಾಡಿ, ಅಲ್ಲಾಹುವಿನ ಅನುಸ್ಮರಣೆಯೊಂದಿಗೆ ವಿಜ್ಞಾನ, ಶಿಕ್ಷಣ ಕ್ಷೇತ್ರಕ್ಕೆ ಒಲುಮೆಯಿಂದ ಒತ್ತು ಕೊಟ್ಟು ಅಭಿವೃದ್ಧಿ ಕೆಲಸ ಮಾಡಿದರೆ ಅದರಲ್ಲಿ ದೊರಕುವ ಅನುಗ್ರಹ ಬೇರೆ ಯಾವುದರಲ್ಲೂ ಸಿಗಲಾರದು. ಈ ವಿಚಾರಗಳಲ್ಲಿ ಸೂಫಿವರ್ಯರ, ಉಸ್ತಾದ್‌ಗಳವರ ದುವಾಃ ನಮ್ಮನ್ನು ಒಳಿತಿನ ಕಡೆಗೆ ಕರೆದೊಯ್ಯಲಿದೆ ಎಂದರು. ಆತೂರು ಬದ್ರಿಯಾ ಜುಮ್ಮಾ ಮಸ್ಜಿದ್ ಆಶ್ರಯದಲ್ಲಿ ನಡೆಯುವ ದ್ಸಿಕ್ರ್‌ನ ಪಾವಿತ್ರತೆ, ಇಲ್ಲಿ ಶಿಕ್ಷಣಕ್ಕೆ ನೀಡುವ ಪ್ರಾಮುಖ್ಯತೆ ಹೆಮ್ಮೆ ಅನಿಸುತ್ತದೆ, ತನ್ಮೂಲಕ ಇನ್ನಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿ ಎಂದು ಅವರು ಹೇಳಿದರು.

ದ.ಕ. ಜಿಲ್ಲಾ ಖಾಝಿ ಅಲ್‌ಹಾಜಿ ತ್ವಾಖಾ ಅಹಮದ್ ಮುಸ್ಲಿಯಾರ್ ದುವಾಃ ನೆರವೇರಿಸಿದರು. ದ್ಸಿಕ್ರ್ ಹಲ್ಕಾ ಇದರ ನೇತೃತ್ವ ವಹಿಸಿರುವ ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಅಸೈಯ್ಯದ್ ಜುನೈದ್ ಜಿಫ್ರಿ ತಂಙಳ್ ಮಾತನಾಡಿ, ಕಳೆದ 24 ವರ್ಷಗಳಿಂದ ನಡೆಯುತ್ತಿರುವ ದ್ಸಿಕ್ರ್ ಹಲ್ಕಾ ವಿಷೇಷ ಪ್ರಾವಿತ್ರತೆಯನ್ನು ಹೊಂದಿದ್ದು, ಬಹಳಷ್ಟು ಮಂದಿ ತಮ್ಮ ಸಂಕಷ್ಟಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ ಎಂದು ಹೇಳಿದರು.


ಕಡಬ ತಾಲೂಕು ಜಂ-ಇಯ್ಯತುಲ್ ಖುತುಬಾ ಪ್ರಧಾನ ಕಾರ‍್ಯದರ್ಶಿ ಇಬ್ರಾಹಿಂ ದಾರಿಮಿ ದುವಾಃ ನೆರವೇರಿಸಿದರು. ಶಾಕಿರ್ ಹುಸೈನ್ ಅಝ್‌ಹರಿ ಧಾರ್ಮಿಕ ಉಪನ್ಯಾಸ ನೀಡಿದರು. ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಹಮದ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು.


ಸಮಾರಂಭದಲ್ಲಿ ಚಾಪಲ್ಲ ಜೆ.ಎಂ.ಮುದರ್ರಿಸ್ ಮುಹಮ್ಮದ್ ಅಶ್ರಫ್ ಬಾಖವಿ, ಉದ್ಯಮಿ ಅಬ್ದುಲ್ ಲತೀಫ್ ಗುರುಪುರ, ಎಸ್‌ಎಂಎಫ್ ಕಡಬ ತಾಲೂಕು ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸೀಗಲ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಶೇಡಿಗುಂಡಿ, ಕೋಲ್ಪೆ ಜೆ.ಎಂ.ಅಧ್ಯಕ್ಷ ಕೆ.ಕೆ.ಅಬೂಬಕ್ಕರ್, ಎಸ್.ಕೆ.ಎಸ್.ಎಸ್.ಎಫ್. ವಿಖಾಯ ಸಂಯೋಜಕ ಇಸ್ಮಾಯಿಲ್ ತಂಙಳ್, ಆತೂರು ಬದ್ರಿಯಾ ಸ್ಕೂಲ್ ಸಂಚಾಲಕ ಪಿ.ಆದಂ ಹಾಜಿ, ಉಪಾಧ್ಯಕ್ಷ ಪೊಡಿಕುಂಞಿ ನೀರಾಜೆ, ಕಾರ‍್ಯದರ್ಶಿ ಕೆ.ಎ. ಯಾಹ್ಯಾ, ಆತೂರು ರೇಂಜ್ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಬಿ.ಕೆ. ಅಬ್ದುಲ್ ರಜಾಕ್, ಪ್ರಧಾನ ಕಾರ‍್ಯದರ್ಶಿ ಜಿ. ಮಹಮ್ಮದ್ ರಫೀಕ್, ಕೋಶಾಧಿಕಾರಿ ಅಬ್ದುಲ್ ಅಝೀಜ್, ಕೆಮ್ಮಾರ ಮಸೀದಿ ಅಧ್ಯಕ್ಷ ರಶೀದ್ ಹಾಜಿ ಬಡ್ಡಮೆ, ಗಂಡಿಬಾಗಿಲು ಮಸೀದಿ ಖತೀಬ್ ಅಬ್ದುಲ್ ಹಮೀದ್ ಸೌಕತ್ ಫೈಝಿ, ಗಂಡಿಬಾಗಿಲು ಮಸೀದಿ ಅಧ್ಯಕ್ಷ ಎಸ್. ಅಬ್ದುಲ್ ರಹಿಮಾನ್, ಕುಂಡಾಜೆ ಮಸೀದಿ ಅಧ್ಯಕ್ಷ ಶಾಹುಲ್ ಹಮೀದ್, ನೀರಾಜೆ ಮದ್ರಸ ಸಮಿತಿ ಅಧ್ಯಕ್ಷ ಸಿದ್ದಿಕ್ ಎನ್., ಬಿ.ಆರ್. ಅಬ್ದುಲ್ ಖಾದರ್, ಆತೂರು ಎಂಜೆಎಂ ಅಧ್ಯಕ್ಷ ಹೈದರ್ ಕಲಾಯಿ, ಉದ್ಯಮಿ ಹಸೈನಾರ್ ಹಾಜಿ ಕೊಯಿಲ, ಹಳೆನೇರೆಂಕಿ ಜೆ.ಎಂ.ಖತೀಬರಾದ ರಫೀಕ್ ಅರ್ಷದಿ, ನೀರಾಜೆ ಎನ್‌ಹೆಚ್‌ಎಂ ಮುಅಲ್ಲಿಂ ಹಾರಿಸ್ ಅಝ್ಹರಿ, ಕೆಮ್ಮಾರ ಶಕ್ತಿನಗರ ಹೆಚ್‌ಐಎಂ ಸದರ್ ಮುಅಲ್ಲಿಂ ಅಬ್ದುಲ್ಲಾ ಮುಸ್ಲಿಯಾರ್, ಆತೂರು ಬಿಜೆಎಂ ಕೋಶಾಧಿಕಾರಿ ನಝೀರ್ ಎನ್.ಕೆ., ಕುಂಡಾಜೆ ಎಂಆರ್‌ಜೆಎಂ ಖತೀಬರಾದ ಮುಹಮ್ಮದ್ ಹನೀಫ್ ಅಸ್ಲಮಿ, ಕೆ.ಎಂ.ಎಸ್.ಸಿದ್ದೀಕ್ ಫೈಝಿ ಕರಾಯ, ಎಸ್‌ಕೆಎಸ್‌ಎಸ್‌ಎಫ್ ದ.ಕ.ಈಸ್ಟ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ ಮತ್ತಿತರರು ಉಪಸ್ಥಿತರಿದ್ದರು.

ಬದ್ರಿಯಾ ಮಹಿಳಾ ಶರೀಅತ್ ಕಾಲೇಜು ಮ್ಯಾನೇಜರ್ ಸತ್ತಾರ್ ಅಸ್‌ನವಿ ಸ್ವಾಗತಿಸಿ, ಮಸೀದಿ ಪ್ರಧಾನ ಕಾರ‍್ಯದರ್ಶಿ ಸಿರಾಜುದ್ದೀನ್ ಬಡ್ಡಮೆ ವಂದಿಸಿದರು. ಕೆ.ರಫೀಕ್ ಮಾಸ್ಟರ್ ಆತೂರು, ರಫೀಕ್ ಗೋಳಿತ್ತಡಿ ಕಾರ‍್ಯಕ್ರಮ ನಿರೂಪಿಸಿದರು. ಆತೂರು ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಪದಾಧಿಕಾರಿಗಳು ಹಾಗೂ ಮದ್ರಸ ಅಧ್ಯಾಪಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


ಶರೀಅತ್ ಕಾಲೇಜು ಕಟ್ಟಡ ಉದ್ಘಾಟನೆ:
ದ್ಸಿಕ್ರ್ ಹಲ್ಕಾ ಸಮಾರೋಪಕ್ಕೆ ಮೊದಲು ಶರೀಅತ್ ಕಾಲೇಜು ಕಟ್ಟಡ ಉದ್ಘಾಟಿಸಲಾಯಿತು. ದ.ಕ.ಜಿಲ್ಲಾ ಖಾಝಿ ಅಲ್‌ಹಾಜಿ ತ್ವಾಖಾ ಅಹಮದ್ ಮುಸ್ಲಿಯಾರ್ ಕಾಲೇಜು ಕಟ್ಟಡ ಉದ್ಘಾಟಿಸಿದರು.

ಸಾವಿರಾರು ಮಂದಿ ಭಾಗಿ:
ದ್ಸಿಕ್ರ್ ಹಲ್ಕಾ ಇದರ 24ನೇ ವಾರ್ಷಿಕ ಮಹಾಸಂಭ್ರಮದ ಸಮಾರೋಪದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ದ್ಸಿಕ್ರ್ ಹಲ್ಕಾ ನಡೆದ ಬಳಿಕ ಎಲ್ಲರಿಗೂ ಅನ್ನದಾನ ಮಾಡಲಾಯಿತು. ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.

LEAVE A REPLY

Please enter your comment!
Please enter your name here