ನೆಲ್ಯಾಡಿ: ಆಲಂತಾಯ ಗ್ರಾಮದ ಶ್ರೀ ಕ್ಷೇತ್ರ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಜ.4 ಮತ್ತು ಜ.5ರಂದು ಪಂಚಮಿ ಕಿರುಷಷ್ಠಿ ಉತ್ಸವವು ವೇದಮೂರ್ತಿ ಉಚ್ಚಿಲತ್ತಾಯ ಕೆ.ಯು.ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಜ.4ರಂದು ಸಂಜೆ ಕ್ಷೇತ್ರಕ್ಕೆ ಆಗಮಿಸಿದ ತಂತ್ರಿಗಳಿಗೆ ಸ್ವಾಗತ ಕೋರಲಾಯಿತು. ರಾತ್ರಿ ರಂಗಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೇವರ ಬಲಿ ಹೊರಟು ಕಟ್ಟೆಪೂಜೆ, ನೃತ್ಯ ಬಲಿ ನಡೆಯಿತು. ಜ.೫ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶಪೂಜೆ, ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ರೋಹಿಣಿ ಸುಬ್ಬರತ್ನಂ, ಆಡಳಿತ ಮೊಕ್ತೇಸರರಾದ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಅರ್ಚಕರಾದ ಶ್ರೀನಿವಾಸ ಬಡೆಕ್ಕಿಲ್ಲಾಯ, ಉತ್ಸವ ಸಮಿತಿ ಅಧ್ಯಕ್ಷರಾದ ಶ್ರೀಶಕುಮಾರ್ ಅರ್ತಿಗುಳಿ, ಕಾರ್ಯದರ್ಶಿ ಪ್ರವೀಣ್ ಭಂಡಾರಿ ಪುರ, ಕೋಶಾಧಿಕಾರಿ ಜನಾರ್ದನ ಗೌಡ ಬರೆಮೇಲು, ಸದಸ್ಯರಾದ ಅಜಿತ್ ಪಾಲೇರಿ, ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು, ನೇಮಣ್ಣ ಪೂಜಾರಿ ಪಾಲೇರಿ, ಬೂಚ ಗೌಡ ಶಾಂತಿನಗರ, ಸಂಕಪ್ಪ ಗೌಡ ಆಲಂತಾಯ, ಅಚ್ಚುತ ನಾಯ್ಕ ನಕ್ರುಡ್ಕ, ಹರೀಶ ಕುವೆತ್ತಿಮಾರು, ಪುರುಷೋತ್ತಮ ಗುರುಂಪು, ರವಿ ಶಿವಾರು, ಗುಲಾಬಿ ಶೆಟ್ಟಿ ಪುರ, ಈಶ್ವರ ಭಟ್ ಪೆರ್ನಾರು, ನಾರಾಯಣ ಪೂಜಾರಿ ಡೆಂಬಳೆ, ಧರ್ಣಪ್ಪ ಗೌಡ ಬೋರ್ಜಾಲು, ಮೋಹನ ಮುಂಡಾವು, ಓಡಿಯಪ್ಪ ಗೌಡ ಪೆರ್ಲ, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ರಮೇಶ ಬಿ.ಜಿ., ಕೋಶಾಧಿಕಾರಿ ನೇಮಣ್ಣ ಪೂಜಾರಿ, ಸದಸ್ಯರಾದ ವೆಂಕಪ್ಪ ಗೌಡ ಪೆರ್ಲ, ಕೆ.ಪಿ.ವೆಂಕಟ್ರಮಣ ಸುಲ್ತಾಜೆ, ವೇದಕುಮಾರ್ ಪುಲಾರ, ಉದಯಕುಮಾರ್ ಬಟ್ಲಡ್ಕ, ನೀಲಪ್ಪ ನಾಯ್ಕ ಅಲಂಗಪ್ಪೆ, ಚಲ್ಲ ಮುಗೇರ ಬೋರ್ಜಾಲು, ವಾಯುಪ್ರಭಾ ಹೆಗ್ಡೆ ಶಾಂತಿಮಾರು, ಶ್ರೀ ಷಣ್ಮುಖ ದೇವಸ್ಥಾನ ಕಾಂಚನ ಪೆರ್ಲ ಟ್ರಸ್ಟ್‌ನ ಅಧ್ಯಕ್ಷ ಜೀನೇಂದ್ರ ಕುಮಾರ್ ಪಾಲೇರಿ, ಸದಸ್ಯರಾದ ಪ್ರಶಾಂತ ರೈ ಅರಂತಬೈಲು, ವಿಶ್ವನಾಥ ಗೌಡ ಪೆರಣ, ಗುಲಾಬಿ ಶೆಟ್ಟಿ ಪುರ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಶಾಸ್ತ್ರೀಯ ಸಂಗೀತ:
ಜ.4ರಂದು ಸಂಜೆ ಶ್ರೀ ಷಣ್ಮುಖ ಸಂಗೀತ ಸಂಗಮ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.