ಜ.6-8 ಕುಂಜಾರು ಮದಗ ಜನಾರ್ದನ ದೇವಸ್ಥಾನದಲ್ಲಿ ಜಾತ್ರೋತ್ಸವ ಸಂಭ್ರಮ

0

ಜ.8 ದೇವರ ದರ್ಶನ ಬಲಿ, ಮನ್ಮಹಾರಥೋತ್ಸವ, ದೈವಗಳ ನೇಮ

ಪುತ್ತೂರು:ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ಮನ್ಮಹಾರಥೋತ್ಸವವು ಜ.6ರಿಂದ ಜ.8ರ ತನಕ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.


ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಜ.6ರಂದು ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಬೆಳಿಗ್ಗೆ ಶ್ರೀಲಕ್ಷ್ಮೀನಾರಾಯಣ ಹೃದಯ ಹವನ ಹಾಗೂ ಶ್ರೀದೇವರಿಗೆ ಸೀಯಾಳ ಅಭಿಷೇಕ ನಡೆಯಲಿದೆ. ನಂತರ ದೇವತಾ ಪ್ರಾರ್ಥನೆ, ಆಚಾರ್ಯವರಣ, ಗಣಪತಿ ಹವನ, ಕಲಶ ಪ್ರತಿಷ್ಠೆ, ಕಲಶಾಭಿಷೇಕ, ವಿಜಯಕುಮಾರಿ ಶೆಣೈ ರಾಮನಗರ ಮತ್ತು ಬಳಗದವರಿಂದ ವಿಷ್ಣುಸಹಸ್ರನಾಮ ಮತ್ತು ದೇವರ ನಾಮ ಸ್ಮರಣೆ, ಮಧ್ಯಾಹ್ನ ಹವನ ಪೂರ್ಣಾಹುತಿ, ತುಲಾಭಾರ ಸೇವೆ ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.


ಜ.7ರಂದು ಸಂಜೆ ಭಜನೆ, ಚೆಂಡೆ ಸೇವೆ, ಮಹಾಪೂಜೆ, ದೇವರ ಬಲಿ ಹೊರಟು ಉತ್ಸವ ಹಾಗೂ ಕಟ್ಟೆಪೂಜೆ ನಡೆಯಲಿದೆ.


ಜ.8ದರ್ಶನ ಬಲಿ, ಮನ್ಮಹಾರಥೋತ್ಸವ:
ಜಾತ್ರೋತ್ಸವದಲ್ಲಿ ಜ.8ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ನವಕಶಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಚೆಂಡೆ ಸೇವೆ, ಶ್ರೀ ದೇವರ ಬಲಿ ಹೊರಟು ಉತ್ಸವ ಕಟ್ಟೆಪೂಜೆ, ಬೆಡಿ ಪ್ರದರ್ಶನ, ಶ್ರೀ ಮನ್ಮಹಾರಥೋತ್ಸವ ನಡೆದ ಬಳಿಕ ಕ್ಷೇತ್ರದ ದೈವಗಳ ಭಂಡಾರ ತೆಗೆದು ಹುಲಿಭೂತ, ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮಗಳು:
ಜಾತ್ರೋತ್ಸವ ಸಂದರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ.7ರಂದು ಸಂಜೆ ರಾತ್ರಿ ವಿಠಲ್ ನಾಯಕ್ ಕಲ್ಲಡ್ಕ ಬಳಗದವರಿಂದ ‘ಗೀತಾ-ಸಾಹಿತ್ಯ-ಸಂಭ್ರಮ’ ನಡೆಯಲಿದೆ. ಜ.೮ರಂದು ಸ್ಥಳೀಯ ಗ್ರಾಮಸ್ಥರಿಂದ ವಿವಿಧ ವಿನೋದಾವಳಿಗಳು ನಡೆಯಲಿದೆ ಎಂದು ದೇವಸ್ಥಾನದ ಉತ್ಸವ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್, ಆಡಳಿತಾಧಿಕಾರಿ ಚಿತ್ರಾವತಿ ಹಾಗೂ ಅರ್ಚಕ ಶ್ರೀಕಾಂತ್ ಭಟ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here