ಆಲಂಕಾರು:ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ.7 ರಂದು ನಡೆಯಲಿದೆ.ಬೆಳಿಗ್ಗೆ 9:00ಕ್ಕೆ ಅಭಿವೃದ್ಧಿ ಅಧಿಕಾರಿ ನಾರಾಯಣ ಬಲ್ಯ ಎಲ್.ಐ.ಸಿ. ಧ್ವಜಾರೋಹಣ ನಡೆಸಲಿದ್ದಾರೆ. ಪದವಿ ಪೂರ್ವ ವಿದ್ಯಾರ್ಥಿ ಸಂಘ ಹಾಗೂ ದಾನಿಗಳಿಂದ ನಿರ್ಮಾಣಗೊಂಡ ನೂತನ ಕ್ರೀಡಾಂಗಣ ಉದ್ಘಾಟನೆಯನ್ನು ಚಕ್ರಪಾಣಿ ಬಾಕಿಲ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪುತ್ತೂರು ತಾಲೂಕು ಇವರು ಉದ್ಘಾಟಿಸಲಿದ್ದು, ಸಭಾಧ್ಯಕ್ಷತೆಯನ್ನು ದಯಾನಂದ ರೈ ಮನವಳಿಕೆ ಅಧ್ಯಕ್ಷರು, ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘ ಇವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜನಾರ್ಧನ ಗೌಡ ಕಯ್ಯಪೆ ಅಧ್ಯಕ್ಷರು, ಭಾರತೀಯ ಮಜ್ದೂರ್ ಸಂಘ ಆಲಂಕಾರು ವಲಯ, ಸುಂದರ ಗೌಡ ಅಧ್ಯಕ್ಷರು, ಪೂರ್ವ ವಿದ್ಯಾರ್ಥಿ ಸಂಘ,ಶ್ರೀಪತಿ ರಾವ್ ಹೆಚ್. ಆಡಳಿತಾಧಿಕಾರಿಗಳು, ಶ್ರೀ ದುರ್ಗಾಂಬಾ ಪದವಿಪೂರ್ವ ವಿದ್ಯಾಲಯ ಆಲಂಕಾರು ಇವರ ಉಪಸ್ಥಿತಿಯಲ್ಲಿ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಪೂರ್ವವಿದ್ಯಾರ್ಥಿ ಸಂಘದ ಸಂಯೋಜನೆಯಲ್ಲಿ ನಡೆಯಲಿದೆ.
ರಾತ್ರಿ ಸಮಯ 7:00 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಸಭಾಧ್ಯಕ್ಷತೆಯನ್ನು ದಯಾನಂದ ರೈ ಮನವಳಿಕೆ ಅಧ್ಯಕ್ಷರು, ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘ (ರಿ) ಅಲಂಕಾರು ಇವರು ವಹಿಸಲಿದ್ದು ಗೌರವಾನ್ವಿತ ಅತಿಥಿಗಳಾಗಿ ದಂಬೆಕ್ಕಾನ ಸದಾಶಿವ ರೈ ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರು, ಎನ್.ಸಿ. ರಮೇಶ್ ರಾಮಕುಂಜ ನೋಟರಿ ವಕೀಲರು ಕಡಬ, ಸರೋಜ ಉಮೇಶ್ ರೈ ಮನವಳಿಕೆ ಪದಕ ಮನೆ, ಕಡಬ, ಸುಶೀಲ ಕೊಂಡಾಡಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಆಲಂಕಾರು ಇವರ ಉಪಸ್ಥಿತಿಯಲ್ಲಿ ಸಭಾಕಾರ್ಯಕ್ರಮ ನಡೆದು ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ , ತುಳು ಹಾಸ್ಯಮಯ ನಾಟಕ “ನಂಬುನ ದುಂಬು” ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಡಳಿತ ಮಂಡಳಿಯ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು, ಕಾರ್ಯದರ್ಶಿ ಈಶ್ವರ ಗೌಡ ಪಜ್ಜಡ್ಕ,ಆಡಳಿತಾಧಿಕಾರಿ ಶ್ರೀಪತಿ ರಾವ್ ಹೆಚ್. ಮುಖ್ಯಗುರುಗಳಾದ ನವೀನ್ ಕುಮಾರ್ ರೈ, ಪ್ರಾಂಶುಪಾಲರರಾದ ರೂಪಾ ಎಂ.ಟಿ ,ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಂದರ ಗೌಡ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀನಾಥ್ ಗೌಡ.ಪಿ, ವಿದ್ಯಾರ್ಥಿ ಸಂಘದ ನಾಯಕ ವಿಘ್ನೇಶ್, ಪ್ರೌಡ ಶಾಲಾ ನಾಯಕ ಚಿತ್ರೇಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.