ಪುತ್ತೂರು: ವಿಟ್ಲ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 12ಕ್ಕೆ ಹನ್ನೆರಡೂ ಸೀಟಿನಲ್ಲಿ ವಿಜಯ ಸಾಧಿಸಿದ್ದಾರೆ.
ಆ ಬಳಿಕ ಮಾತನಾಡಿದ ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷ ವಿಟ್ಲ ಮಹಾಶಕ್ತೀ ಕೇಂದ್ರ ಉಸ್ತುವಾರಿ ಹರಿಪ್ರಸಾದ್ ಯಾದವ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದು ಅದರಲ್ಲೂ ಪುತ್ತೂರಿನಲ್ಲಿ ಕಾಂಗ್ರೆಸಿನ ಶಾಸಕರು ಖುದ್ದು ಫೀಲ್ಡಿಗೆ ಇಳಿದರೂ ಕೂಡ ಕನಿಷ್ಠ ಒಂದು ಸೀಟ್ ಕೂಡ ಸಿಗದೇ ವಿಟ್ಲದ ರೈತಾಪಿ ವರ್ಗ ಮತ್ತು ಮತದಾರ ಬಾಂಧವರು ಗ್ಯಾರೆಂಟಿ ಮತ್ತು ಆಮಿಷಕ್ಕೆ ಬಲಿಯಾಗದೆ ಬಿಜೆಪಿಯನ್ನು ಬೆಂಬಲಿಸಿರುವುದು ಸಂತಸ ತಂದಿದೆ ಮತ್ತು ಗೆಲುವಿನ ಕಾರಣೀಭೂತರಾದ ಪಾರ್ಟಿಯ ಎಲ್ಲಾ ಸ್ತರದ ದೇವದುರ್ಲಭ ಕಾರ್ಯಕರ್ತರಿಗೆ ಅಭಿನಂದನೆ ಎಂದಿದ್ದಾರೆ.