ಶಾಲೆಯು ಸರ್ವಜನಾಂಗದ ಶಾಂತಿಯ ತೋಟ- ಸುಶೀಲಾ ಕೊಂಡಾಡಿ
ಕಾಣಿಯೂರು: ಶಾಲೆಯು ಸರ್ವ ಜನಾಂಗದ ತೋಟ.ವಿದ್ಯೆ ನೀಡುವ ಶಾಲೆಯ ಬಗ್ಗೆ ಎಲ್ಲರಿಗೂ ಅಭಿಮಾನ ಅಗತ್ಯ.ಶಾಲೆಯನ್ನು ಪ್ರೀತಿಸಿ ಶಾಲೆಯ ಪ್ರಗತಿಗೆ ವಿದ್ಯಾಭಿಮಾನಿಗಳು ಶ್ರಮಿಸಬೇಕು ಎಂದು ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ ಕೊಂಡಾಡಿ ಹೇಳಿದರು.
ಅವರು ಕೊಂಡಾಡಿಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಚಿಣ್ಣರ ಚಿಲಿಪಿಲಿ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಆಲಂಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರವಿ ಪೂಜಾರಿ ಕೆ ಅಧ್ಯಕ್ಷತೆ ವಹಿಸಿದ್ದರು.ಆಲಂಕಾರು ಗ್ರಾಮ ಪಂಚಾಯತ್ ಸದಸ್ಯರಾದ ಸದಾನಂದ ಆಚಾರ್ಯ ವಾರಿಜಾ ಕಮಿತ್ತಿಲು, ಶ್ವೇತ ಕುಮಾರ್, ಆಲಂಕಾರು ಮೂರ್ತೆದಾರರ ಸಂಘದ ಅಧ್ಯಕ್ಷರಾದ ಮುತ್ತಪ್ಪ ಪೂಜಾರಿ ನೆಯ್ಯಲ್ಗ ಆಲಂಕಾರು ಕ್ಲಸ್ಟರ್ ಸಿ.ಆರ್.ಪಿ ಪ್ರಕಾಶ್ ಬಾಕಿಲ, ಮೆಸ್ಕಾಂ ಇಂಜಿನಿಯರ್ ಪ್ರೇಮ ಕುಮಾರ್, ಸನ್ನಿಧಿ ಅರ್ತ್ ಮೂವರ್ಸ್ ಮಾಲೀಕರಾದ ಅಶೋಕ ಶರವೂರು ಉಪಸ್ಥಿತರಿದ್ದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಲತಾ ಶರವೂರು, ಉಪಾಧ್ಯಕ್ಷ ಹರೀಶ್ ಏಂತಡ್ಕ ಸದಸ್ಯರಾದ ಹರೀಶ್ ಕುಂಬಾರ ವಾಸಪ್ಪ ಕುಂಬಾರ ಗಣೇಶ ಪೂಜಾರಿ ಪ್ರೇಮಾವತಿ ಚಿತ್ರಾ ನಿತ್ಯಾನಂದ ವೇದಾವತಿ ರತ್ನಾವತಿ ಸುನೀತಾ ರೇವತಿ ಗೀತಾ ದಯಾನಂದ ಕಮಿತ್ತಿಲು ಲೀಲಾವತಿ ಚಂದ್ರಶೇಖರ ಕುಂಬಾರ ಮೀನಾಕ್ಷಿ ಕಮಿತ್ತಿಲು ರಜನಿ ಹರೀಶ್ ನೋಣಯ್ಯ ಗೌಡ ಏಂತಡ್ಕ, ವೀರೇಂದ್ರ ಗೌಡ ಏಂತಡ್ಕ ಶಿವರಾಮ ತೋಟಂತಿಲ, ದಿನೇಶ್ ದೇವಾಡಿಗ ಬಾಬು ಕುಂಬಾರ ಲೋಕೇಶ್ ಏಂತಡ್ಕ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿನೋದ್ ಕುಮಾರ್ ಕೊಂಡಾಡಿಕೊಪ್ಪ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.ಶಾಲಾ ಮುಖ್ಯ ಗುರು ಜಯಂತ್ ವೈ ಸ್ವಾಗತಿಸಿ ಸಹಶಿಕ್ಷಕಿ ದಿವ್ಯಾ ವಿ ವಂದಿಸಿದರು. ಸಹಶಿಕ್ಷಕಿ ಸೌಮ್ಯ ವಂದಿಸಿದರು.
ಸನ್ಮಾನ:
ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಆಲಂಕಾರು ಭಾಗದ ಲೈನ್ ಮ್ಯಾನ್ ವಿದ್ಯಾಸಾಗರ್ ರವರನ್ನು ಸನ್ಮಾನಿಸಲಾಯಿತು.
ಹುಟ್ಟು ಹಬ್ಬ:
ಈ ಸಂದರ್ಭದಲ್ಲಿ ನಾಡ್ತಿಲ ಕೊಪ್ಪ ಅಂಗನವಾಡಿ ಮತ್ತು ಕೊಂಡಾಡಿಕೊಪ್ಪ ಶಾಲಾ ಮಕ್ಕಳ ಹುಟ್ಟು ಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು.
ಬಹುಮಾನ ವಿತರಣೆ:
ಪೂರ್ವಾಹ್ನ ನಡೆದ ಕಾರ್ಯಕ್ರಮದಲ್ಲಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ ಧ್ವಜಾರೋಹಣ ನೆರವೇರಿಸಿದರು.ಆಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಮಾಧವ ಪೂಜಾರಿ ಕಯ್ಯಪೆ ಬಹುಮಾನ ವಿತರಣೆ ಮಾಡಿದರು. ನಿವೃತ ದೈಹಿಕ ಶಿಕ್ಷಣ ಶಿಕ್ಷಕರಾದ ರೇವತಿ ಪಿ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಲತಾ ಶರವೂರು ಉಪಾಧ್ಯಕ್ಷ ಹರೀಶ್ ಏಂತಡ್ಕ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಮೋಕ್ಷಿತಾ ಕೊಂಡಾಡಿಕೊಪ್ಪ ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ, ಶಾಲಾ ನಾಯಕ ರಕ್ಷಣ್ ಕೆ ಶಾಲಾ ಮುಖ್ಯಗುರು ಜಯಂತ್ ವೈ ಉಪಸ್ಥಿತರಿದ್ದರು.