ಪುತ್ತೂರು:ಕಡೇಶಿವಾಲಯ ರೋಟರಿ ಸಮುದಾಯ ದಳದ 36ನೇ ವರ್ಷದ ವಾರ್ಷಿಕೋತ್ಸವ, ಸನ್ಮಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜ.4ರಂದು ದ. ಕ. ಜಿ. ಪ. ಹಿ. ಪ್ರಾ.ಶಾಲೆ ಪೆರ್ಲಾಪು ಶಾಲಾ ವಠಾರದಲ್ಲಿ ನಡೆಯಿತು.
ರೋಟರಿ ಕ್ಲಬ್ ಬಂಟ್ವಾಳ ಇದರ zone 4 ರ leftinent ಗವರ್ನರ್ ರೊ|ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷ ರೊ|ಬೇಬಿ ಕುಂದರ್, ಬೆಂಗಳೂರಿನ ಉದ್ಯಮಿ ನಾರಾಯಣ ಪೂಜಾರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ನೇರಳಕಟ್ಟೆ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶೋಧ ಬಿ. ,ಸಿವಿಲ್ ಇಂಜಿನಿಯರ್ ದೇವಿಪ್ರಸಾದ್ ಶೆಟ್ಟಿ ಬೇಂಗದಡಿ, ರೋಟರಿ ಸಮುದಾಯ ದಳದ ಅಧ್ಯಕ್ಷ ಸತೀಶ್ ಕೆ ಅಲಂಕರಿಸಿದ್ದರು.
ಗೌರವಾರ್ಪಣೆ:
ಕಡೇಶಿವಾಲಯ ಪ್ರಾಥಮಿಕ ಶಾಲೆಯ 7ನೇ ತರಗತಿ, ಹಾಗೂ ಸರಕಾರಿ ಪ್ರೌಡಶಾಲೆಯ ಎಸ್. ಎಸ್. ಎಲ್. ಸಿ. ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪುರಸ್ಕರಿಸಿದರು. ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ಪರಿಚಾರಕ ವಿಶ್ವನಾಥ ದೇವಾಡಿಗ ಇವರನ್ನು ಸನ್ಮಾನಿಸಿ, ನಾವಿಕರಾದ ಅಬ್ಬಾಸ್ ಇವರನ್ನು ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಿ. ವಿ. ಡ್ಯಾನ್ಸ್ ಕ್ರಿವ್ ಕಡೇಶಿವಾಲಯ ಇವರಿಂದ ನೃತ್ಯ ಕಾರ್ಯಕ್ರಮ ಮತ್ತು ಶಾರದಾ ಆರ್ಟ್ಸ್ ಕಲಾವಿದರ್ ಮಂಜೇಶ್ವರ ಅಭಿನಯದ ಕಥೆ ಎಡ್ಡೆಂಡು ಎಂಬ ನಾಟಕ ನಡೆಯಿತು.
ಸಂಸ್ಥೆಯ ಸಲಹಾ ಸಮಿತಿಯ ಚೇರ್ ಮ್ಯಾನ್ ಕೆ. ಕೆ. ಶೆಟ್ಟಿ ಕುರುಂಬ್ಲಾಜೆ ಸ್ವಾಗತಿಸಿ,ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಪಿ.ಜಿ ಭಟ್ ವಂದಿಸಿ,ನವೀನ್ ನಾಯ್ಕ್ ಪಿಳಿಂಗಳ ಮತ್ತು ಪೂವಪ್ಪ ಮೂಲ್ಯ ಮುಂಡಾಲ ಕಾರ್ಯಕ್ರಮ ನಿರೂಪಿಸಿದರು.