ಪುತ್ತೂರು: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಅಮಾನವೀಯ ಅಕ್ರಮಣ ನಡೆಯುತ್ತಿದೆ ಎಂದು ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ಪುತ್ತೂರು ಘಟಕದಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಜ.6ರಂದು ಶಾಂತಿಯುತವಾಗಿ ಪ್ಲೆ ಕಾರ್ಡ್ ಮೂಲಕ ಜಾಗೃತಿಯನ್ನು ಮಾಡಲಾಯಿತು.
ಕಳೆದ ಅನೇಕ ವರ್ಷಗಳಿಂದ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಅತ್ಯಂತ ಅಮಾನವೀಯವಾಗಿ ಆಕ್ರಮಣಗಳಾಗುತ್ತಿದೆ. ಅನೇಕ ದೇಶಗಳಲ್ಲಿ ಆದ್ಯಾತ್ಮ ಪ್ರಸಾರ ಮಾಡುವ ಇಸ್ಕಾನ್ ಸಂಸ್ಥೆಯ ಮೇಲೆ ಅಕ್ರಮಣವನ್ನು ನಡೆಸಿ ಅದರ ಪ್ರಮುಖರ ಮೇಲೆ ದಾಳಿ ಮಾಡುವುದು ಅವರನ್ನು ಆಕ್ರಮವಾಗಿ ಬಂದಿಸುವಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿದ್ದು, ಇದರ ಬಗ್ಗೆ ವಿಶ್ವದಾದ್ಯಂತ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ಕುರಿತು ನಾವು ಪ್ಲೇಕಾರ್ಡ್ ಮೂಲಕ ಪ್ರತಿಭಟಿಸುತ್ತಿದ್ದೇವೆ ಎಂದು ಪ್ರಮುಖರು ತಿಳಿಸಿದರು.
ಪ್ರತಿಭಟನೆಯಲ್ಲಿ ಬಾಲಚಂದ್ರ ಸೊರಕೆ, ಶ್ರೀಧರ ಪೂಜಾರಿ, ಬಾಲಕೃಷ್ಣ ಗೌಡ, ದೇಜಪ್ಪ ಗೌಡ, ಲಕ್ಷ್ಮಣ ಗೌಡ,ಗೋಪಾಲ ಕೃಷ್ಣ ಪಿಲಿಗೂಡು, ಜಯಾನಂದ ಕಲ್ಲಾಪು, ಮದ್ವಾರಾಜ್, ರಾಘವೇಂದ್ರ ಆಚಾರ್ಯ, ತಾರಾನಾಥ್ ಗೌಡ, ಹರಿ ಪ್ರಸಾದ್ ಶೆಟ್ಟಿ, ದಯಾನಂದ ಹೆಗ್ಡೆ, ಬಾಲಕೃಷ್ಣ ಶೆಟ್ಟಿ, ಪ್ರಶಾಂತ್ ಏನ್ಮಾಡಿ, ಸೌ ಪದ್ಮಶ್ರೀ ಉಪಸ್ಥಿತರಿದ್ದರು.