ಪುತ್ತೂರು: ಕಳೆದ 25 ವರ್ಷಗಳಿಂದ ಪುತ್ತೂರಿನಲ್ಲಿ ಮನೆಮಾತಾಗಿರುವ ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಸಾಮಾಗ್ರಿಗಳ ಮಳಿಗೆ ಶೇಟ್ ಇಲೆಕ್ಟ್ರಾನಿಕ್ಸ್ನಲ್ಲಿ ಹಬ್ಬಗಳ ಅಂಗವಾಗಿ ನಡೆಸಲಾದ ಟಿವಿಎಸ್ ಜ್ಯುಪಿಟರ್ ಗೆಲ್ಲುವ 22ನೇ ಲಕ್ಕಿ ಕೂಪನ್ ಬಂಪರ್ ಡ್ರಾ. ವಿಜೇತರಿಗೆ ಹಾಗೂ 10 ಸಮಾಧಾನಕರ ಬಹುಮಾನಗಳ ಓರ್ವ ವಿಜೇತೆ ಗೀತಾ ಉರ್ಲಾಂಡಿರವರಿಗೆ ಬಹುಮಾನ ಹಸ್ತಾಂತರ ಜ.6ರಂದು ನಡೆಯಿತು.
ಶೇಟ್ ಇಲೆಕ್ಟ್ರಾನಿಕ್ಸ್ ಮಾಲಕ ರೂಪೇಶ್ ಶೇಟ್ರವರು ಬಂಪರ್ ಡ್ರಾ. ವಿಜೇತ ಭಕ್ತಕೋಡಿಯ ಜಯಂತ ಎಸ್.ಡಿ.ಸರ್ವೆದೋಳರವರಿಗೆ ಟಿವಿಎಸ್ ಜುಪಿಟರ್ ಹಸ್ತಾಂತರ ಮಾಡಿದರು. ಸಿಬಂದಿಗಳು ಉಪಸ್ಥಿತರಿದ್ದರು.