ನಿಡ್ಪಳ್ಳಿ: ಇಲ್ಲಿಯ ಗೋಳಿತ್ತಡಿ ನಿವಾಸಿ ಕೃಷಿಕ ವೆಂಕಪ್ಪ ಗೌಡ (80 ವ) ಅಂಗಡಿಮಜಲು ಎಂಬವರು ಜ.6 ರಂದು ನಿಧನರಾದರು.
ಅವರು ಬೆಳಿಗ್ಗೆ ಮನೆಯಲ್ಲಿ ಅನಾರೋಗ್ಯಕ್ಕೀಡಾದ ತಕ್ಷಣ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸುವುದಕ್ಕಾಗಿ ಕೊಂಡೊಯ್ಯುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಮೃತ ಪಟ್ಟಿದ್ದರು.
ಮೃತರು ಪತ್ನಿ ಯಶೋಧ, ಪುತ್ರರಾದ ಹೊನ್ನಪ್ಪ ಗೌಡ, ಸೀತಾರಾಮ ಗೌಡ,ಸತೀಶ ಗೌಡ, ವೇದನಾಥ ಗೌಡ, ಪುತ್ರಿ ಶಶಿಕಲಾ, ಸೊಸೆಯಂದಿರಾದ ಸುಗುಣ, ಜಾಹ್ನವಿ, ರಂಜಿನಿ, ಸಹೋದರ ಶಾಂತಿಗೋಡು ಪೇರಡ್ಕ ನಿವಾಸಿ ಕೃಷ್ಣಪ್ಪ ಗೌಡ ಹಾಗೂ ಸಹೋದರಿ ಜಾನಕಿ ಇವರನ್ನು ಅಗಲಿದ್ದಾರೆ.