ಶಿರಾಡಿ: ಆಸಿಡ್ ಸೇವಿಸಿದ್ದ ವ್ಯಕ್ತಿ ಮೃತ್ಯು

0

ನೆಲ್ಯಾಡಿ: ಆಸಿಡ್ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದ ವ್ಯಕ್ತಿಯೋರ್ವರು ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯೆ ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಕಳಪ್ಪಾರು ಎಂಬಲ್ಲಿ ನಡೆದಿದೆ.


ಕಳಪ್ಪಾರು ನಿವಾಸಿ ಮಾಧವ ಗೌಡ(64ವ.) ಮೃತಪಟ್ಟವರಾಗಿದ್ದಾರೆ. ಮಾಧವ ಗೌಡ ಅವರು ಜ.5ರಂದು ಬೆಳಿಗ್ಗೆ 10 ಗಂಟೆ ವೇಳೆಗೆ ಮನೆಯಲ್ಲಿಯೇ ಯಾವುದೋ ಕಾರಣಕ್ಕೆ ಮನನೊಂದು ರಬ್ಬರ್ ತೋಟಕ್ಕೆ ಉಪಯೋಗಿಸುವ ಆಸಿಡ್ ಸೇವನೆ ಮಾಡಿ ಬೊಬ್ಬೆ ಹೊಡೆಯುತ್ತಿದ್ದರು. ಇದನ್ನು ಗಮನಿಸಿದ ಮನೆಯವರು 108 ಅಂಬ್ಯುಲೆನ್ಸ್‌ನಲ್ಲಿ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಆಸ್ಪತ್ರೆಯ ಅಂಬ್ಯುಲೆನ್ಸ್‌ನಲ್ಲಿ ಕಳುಹಿಸಿಕೊಟ್ಟಿದ್ದರು.

ಮಂಗಳೂರು ಆಸ್ಪತ್ರೆಗೆ ಹೋಗುವ ವೇಳೆ ದಾರಿ ಮಧ್ಯೆ ಮಾಧವ ಗೌಡ ಅವರು ಯಾವುದೇ ರೀತಿಯಲ್ಲಿ ಸ್ಪಂದಿಸದೇ ಇದ್ದ ಕಾರಣ ವಾಪಾಸು ಪುತ್ತೂರು ಸರಕಾರಿ ಆಸ್ಪತ್ರೆಗೆ ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದರು ಎಂದು ವರದಿಯಾಗಿದೆ. ಈ ಬಗ್ಗೆ ಮೃತರ ಪುತ್ರ ಮಂಜುಪ್ರಸಾದ್‌ರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

==============================================

LEAVE A REPLY

Please enter your comment!
Please enter your name here