ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾ ವಾರ್ಷಿಕೋತ್ಸವ:ಕುಂಬ್ರದಲ್ಲಿ ಬೃಹತ್ ಶ್ರೀ ರಾಮಲೀಲೋತ್ಸವ

0

ಪುತ್ತೂರು: ಆಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಮನೆ ಮನೆಗಳಲ್ಲಿ ರಾಮ ರಾಜ್ಯ ನಿರ್ಮಾಣದ ಕನಸು ನನಸಾಗಿಸುವ ಸಂಕಲ್ಪದೊಂದಿಗೆ ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳು ಮತ್ತು ನಂಬಿಕೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ‘ನಂಬಿಕೆಗಳು ಮತ್ತು ಅದರ ಅರ್ಥ ವಿವರಣೆ’ ಪುಸತಕ ಬಿಡುಗಡೆ, ವಿತರಣೆ ಮತ್ತು ಮೌಲ್ಯಮಾಪನ ಉದ್ದೇಶ ಹೊಂದಿರುವ ‘ಸುಜ್ಞಾನ ದೀಪಿಕೆ’ ಕಾರ್ಯಕ್ರಮದ ಉದ್ಘಾಟನೆ, ಭಜನಾ ತಂಡಗಳಿಂದ ಕುಣಿತ ಭಜನೆಯ ಮೂಲಕ ಶ್ರೀರಾಮ ಸಂಕೀರ್ತಣೆಯ ‘ಭಕ್ತಿ ಲಾಸ್ಯ’ಅನಾವರಣಾ, ಧರ್ಮ ಜಾಗೃತಿಗಾಗಿ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರ ಸಮ್ಮಿಲನ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ಗೈದವರಿಗೆ ಗೌರವ ಅರ್ಪಣೆ ಇತ್ಯಾದಿ ಕಾರ್ಯಕ್ರಮಗಳ ಸಂಗಮದೊಂದಿಗೆ ಸ್ಪಂದನಾ ಸೇವಾ ಬಳಗ ಕುಂಬ್ರ ಇದರ ನೇತೃತ್ವದಲ್ಲಿ ಧರ್ಮಜಾಗೃತಿಗಾಗಿ ರಾಮ ಸಂಕೀರ್ತನೆ ‘ಶ್ರೀ ರಾಮಲೀಲೋತ್ಸವ’ ಸುಜ್ಞಾನ ದೀಪಿಕೆ ಕಾರ್ಯಕ್ರಮದ ಉದ್ಘಾಟನೆ ಜ.26 ರಂದು ಕುಂಬ್ರ ಅಲಂಗಾರು ಗದ್ದೆಯಲ್ಲಿ ನಡೆಯಲಿದೆ.

ಈಗಾಗಲೇ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ. ಶ್ರೀರಾಮ ಲೀಲೋತ್ಸವ ಸಮಿತಿ ಸಂಚಾಲಕರಾಗಿ ಸುಧಾಕರ್ ರೈ ಕುಂಬ್ರ, ಸಹ ಸಂಚಾಲಕರಾಗಿ ಉಷಾ ನಾರಾಯಣ್, ಕೋಶಾಧಿಕಾರಿಯಾಗಿ ಚಂದ್ರ ಇದ್ಪಾಡಿರವರುಗಳನ್ನು ನೇಮಿಸಲಾಗಿದೆ. ಆರ್ಥಿಕ ಸಮಿತಿ ಸಂಚಾಲಕರಾಗಿ ಪ್ರಕಾಶ್ಚಂದ್ರ ರೈ ಕೈಕಾರ, ಕುಣಿತ ಭಜನೆ ನಿರ್ವಹಣಾದ ಸಮಿತಿ ಸಂಚಾಲಕರಾಗಿ ಅರುಣ್ ರೈ ಬಿಜಳ, ಮುದ್ರಣ ಸಮಿತಿ ಸಂಚಾಲಕರಾಗಿ ಸಂತೋಷ್ ರೈ ಕೈಕಾರ, ಪ್ರಚಾರ ಸಮಿತಿ ಸಂಚಾಲಕರಾಗಿ ತಿಲಕ್ ರೈ ಕುತ್ಯಾಡಿ, ವೇದಿಕೆ ಮತ್ತು ವಿದ್ಯುತ್ ಅಲಂಕಾರ ಸಮಿತಿ ಸಂಚಾಲಕರಾಗಿ ಚಂದ್ರಕಾಂತ್ ಶಾಂತಿವನ, ಆಲಂಕಾರ ಸಮಿತಿ ಸಂಚಾಲಕರಾಗಿ ಪದ್ಮನಾಭ ಗೌಡ ಮುಂಡಾಲ, ಆಹಾರ ಸಮಿತಿ ಸಂಚಾಲಕರಾಗಿ ಉದಯ ಕುಂಬ್ರ, ಶೋಭಾಯಾತ್ರೆ ನಿರ್ವಹಣಾ ಸಮಿತಿ ಸಂಚಾಲಕರಾಗಿ ಎಸ್.ಮಾಧವ ರೈ ಕುಂಬ್ರ, ಮಹಿಳಾ ಸಮಿತಿ ಸಂಚಾಲಕರಾಗಿ ತ್ರಿವೇಣಿ ಪಲ್ಲತ್ತಾರುರವರುಗಳನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಸಹ ಸಂಚಾಲಕರು, ಸದಸ್ಯರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ, ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಜಾರತ್ತಾರು, ಕಾರ್ಯಾಧ್ಯಕ್ಷ ಅಶೋಕ್ ತ್ಯಾಗರಾಜನಗರ, ಉಪಾಧ್ಯಕ್ಷರುಗಳಾದ ರಾಜೇಶ್ ರೈ ಪರ್ಪುಂಜ, ಸಂತೋಷ್ ಮಣಿಯಾಣಿ ಕುತ್ಯಾಡಿ, ಉಷಾ ನಾರಾಯಣ್, ಗೌರವಾಧ್ಯಕ್ಷರುಗಳಾದ ಮೋಹನ್‌ದಾಸ ರೈ ಕುಂಬ್ರ, ವೆಂಕಪ್ಪ ಗೌಡ ಬೊಳ್ಳಾಡಿ, ಮನ್ಮಿತ್ ರೈ ಓಲೆಮುಂಡೋವು, ಕೋಶಾಧಿಕಾರಿ ಜನಾರ್ದನ ರೈ ಪಡ್ಡಂಬೈಲು ಹಾಗು ವಿವಿಧ ಸಮಿತಿಗಳ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈಭವದ ಶೋಭಾಯಾತ್ರೆ
ಸಂಜೆ ಕುಂಬ್ರ ಶ್ರೀರಾಮ ಭಜನಾ ಮಂದಿರದಿಂದ ಆಲಂಗಾರು ಗದ್ದೆ ಕೊಡೆಂಚಾರುವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯ ಬಳಿಕ ಕುಣಿತ ಭಜನೆಗೆ ಚಾಲನೆ, ಧಾರ್ಮಿಕ ಸಭೆ, ಸಾಂಸ್ಕೃತಿಕ ವೈಭವದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here