ಪುಣಚ: ಪುಣಚ ಬೈಲುಗುತ್ತು ಸಂಕೇಶ ಕೊಡಂಗೆ ಗ್ರಾಮದೈವ ಶ್ರೀ ಧೂಮಾವತಿ ದೈವದ ನೇಮೋತ್ಸವ ಸಂಕೇಶ ಕೊಡಂಗೆ ದೈವಸ್ಥಾನದಲ್ಲಿ ಜ.7ರಂದು ನಡೆಯಿತು.
ಜ.6 ರಂದು ಬೆಳಿಗ್ಗೆ ಗುರುರಾಜ್ ಕುಂಟುಕುಡೇಲು ರವರ ಪೌರೋಹಿತ್ಯದಲ್ಲಿ ನಾಗತಂಬಿಲ ನಡೆದು ರಾತ್ರಿ ಪುದುಕೋಲ ನೇಮೋತ್ಸವ ನಡೆಯಿತು.
ಜ.7ರಂದು ಬೆಳಿಗ್ಗೆ ಗ್ರಾಮ ದೈವ ಶ್ರೀ ಧೂಮಾವತಿ ದೈವದ ನೇಮೋತ್ಸವ ನಡೆದು ಮಧ್ಯಾಹ್ನ ಹರಿಕೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಬೈಲುಗುತ್ತು ಕುಟುಂಬದ ಯಜಮಾನ ಜಗನ್ನಾಥ ರೈ ಬೈಲುಗುತ್ತು, ಕುಟುಂಬಸ್ಥರು, ಬಂಧುಗಳು, ಸಂಕೇಶ ಕೊಡಂಗೆ ಸಾಲ್ಯಾನ್ ಕುಟುಂಬಸ್ಥರು, ಬಂಧುಗಳು, ಸಂಕೇಶ ಕೊಡಂಗೆ ಮನೆ ನಾಗಪ್ಪ ಪೂಜಾರಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.