ಪುತ್ತೂರು: ನೆಹರು ನಗರದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಮಂಗಳೂರು ವಲಯದ ಯೂತ್ ಫೆಸ್ಟ್ ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಮಂಗಳೂರು ವಲಯದ ಒಟ್ಟು 11 ಕಾನೂನು ಮಹಾವಿದ್ಯಾಲಯಗಳು ಭಾಗವಹಿಸಿದ್ದ ಈ ಯೂತ್ ಫೆಸ್ಟ್ ನಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದಿಂದ ಸಮೂಹ ಗಾಯನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಾದ ಶ್ರೀರಕ್ಷಾ, ಸುಶ್ಮಿತಾ ಕೆ., ವೈಷ್ಣವಿ, ಶರಣ್ಯ ತೋಲ್ಪಾಡಿ, ವೀಕ್ಷಿತ್ ಪಿ. ಹಾಗೂ ರಿತೇಶ್ ಅವರನ್ನು ಒಳಗೊಂಡ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಅದೇ ರೀತಿ, ಜಾನಪದ ಆರ್ಕೆಸ್ಟ್ರಾ ಸ್ಪರ್ಧೆಯಲ್ಲಿ ಗಣೇಶ್ ಜೆ ಬಾಳಿಗ, ಚಿಂತನ್, ನವನೀತ್ ಡಿ. ಕೆ., ಐ.ಡಿ. ನೂತನ್, ವಿ. ನವೀನ್ ಕೃಷ್ಣ ಭಟ್, ಶ್ರೀಕೃಷ್ಣ ಜೆ, ಸುಶಾಂತ್ ಬಿ., ಸುಚನಾ ಎ.ಎನ್., ಸುಶ್ಮಿತಾ ಕೆ. ಒಳಗೊಂಡ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಅದೇ ರೀತಿ ವಿದ್ಯಾರ್ಥಿಗಳಾದ ಸೂರ್ಯ ಹಾಗೂ ಪ್ರಜ್ವಲ್ ಕೃಷ್ಣ ನನ್ನು ಒಳಗೊಂಡ ತಂಡ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಸಾಂಸ್ಕೃತಿಕ ಸಂಘದ ಸಂಯೋಜಕ ಡಾ. ರೇಖಾ ಕೆ. ಹಾಗೂ ಶೈನಿ ವಿಜೇತಾ ಮಾರ್ಗದರ್ಶನ ಮಾಡಿದ್ದಾರೆ.