ಪುತ್ತೂರು: ಮೆಸ್ಕಾಂನ ಕುಂಬ್ರ ಗ್ರಾಮಾಂತರ ಉಪವಿಭಾಗ ಕಛೇರಿಯಲ್ಲಿ ಜ.9ರಂದು ಮಂಗಳೂರು ವೃತ್ತ ಕಚೇರಿಯ ಅಧೀಕ್ಷಕ ಇಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಜನ ಸಂಪರ್ಕ ಸಭೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ.
ಸಭೆಯ ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುವುದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.