ಪುತ್ತೂರು:2013ರಲ್ಲಿ ನೆಲ್ಯಾಡಿಯಲ್ಲಿ ನಡೆದಿದ್ದ ಅಡಿಕೆ ಕಳವು ಪ್ರಕರಣದ ಆರೋಪಿಯನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.
ನೆಲ್ಯಾಡಿಯ ರೀಬ್ ಕಾಂಪ್ಲೆಕ್ಸ್ನಲ್ಲಿದ್ದ, ಅನಂತಾಡಿಯ ಇಸಾಕ್ ಎಂಬವರಿಗೆ ಸೇರಿದ ಅಡಿಕೆ ಖರೀದಿ ಅಂಗಡಿ ‘ಅರವಿಂದ ಟ್ರೇಡರ್ಸ್’ನ ರೋಲಿಂಗ್ ಶಟರ್ನ ಸೆಂಟ್ರಲ್ ಲಾಕನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಒಳಪ್ರವೇಶಿಸಿ ಅಂಗಡಿಯೊಳಗಿದ್ದ 14 ಚೀಲ ಅಡಿಕೆಯನ್ನು ಕಳವು ಮಾಡಲಾಗಿತ್ತು.2013ರ ದ.5ರ ರಾತ್ರಿ ಕೃತ್ಯ ನಡೆದಿತ್ತು.ಕಳವಾದ ಅಡಿಕೆ ಮೌಲ್ಯ 24,800ರೂ.ಎಂದು, ಇಸಾಕ್ ಅವರು ನೀಡಿದ್ದ ದೂರಿನಲ್ಲಿ ತಿಳಿಸಲಾಗಿತ್ತು.ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬಳಿಕ ಆರೋಪಿ ಕುವೆಟ್ಟು ಬಾರ್ಯದ ಮೊಹಮ್ಮದ್ ಇಸಾಕ್ ಎಂಬಾತನನ್ನು ಬಂಧಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿದೆ.ಆರೋಪಿ ಪರ ವಕೀಲರಾದ ಮಾಧವ ಪೂಜಾರಿ,ರಾಕೇಶ್ ಬಲ್ನಾಡು, ಮೋಹಿನಿ ಕೆ.ವಾದಿಸಿದ್ದರು.