ಇಂದಿನ ಕಾರ್ಯಕ್ರಮ(09/01/2025)

0

ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ರಾತ್ರಿ ನಗರ ಭಜನಾ ಸಂಕೀರ್ತನೆ
ಪುತ್ತೂರು ಪುತ್ತೂರು ಬದ್ರಿಯಾ ಜುಮಾ ಮಸೀದಿ ವಠಾರದ ಸಭಾಂಗಣದಲ್ಲಿ ರಾತ್ರಿ ೯ಕ್ಕೆ ಕರವಡ್ತ ವಲಿಯುಲ್ಲಾಹಿ ತಂಙಳ್‌ರವರ ಪುತ್ತೂರು ಉರೂಸ್ ಸಮಾರಂಭದ ಉದ್ಘಾಟನೆ
ತೆಂಕಿಲ ಬೈಪಾಸ್ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಸಂಜೆ ೬ರಿಂದ ಪುತ್ತೂರು ಇನ್ನರ್ ವೀಲ್ ಕ್ಲಬ್‌ಗೆ ಜಿಲ್ಲಾಧ್ಯಕ್ಷೆ ವೈಶಾಲಿ ಕುಡ್ವರ ಅಧಿಕೃತ ಭೇಟಿ
ದರ್ಬೆ ಕೃಷ್ಣ ಆರ್ಕೇಡ್ ಡಾ. ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆ ೯.೩೦ರಿಂದ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣೆ, ಉಚಿತ ಶುಗರ್, ಎಚ್‌ಬಿಎ೧ಸಿ ತಪಾಸಣೆ
ಸವಣೂರು ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ರಾಮಕುಂಜ ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ವಿಶೇಷ ಚೇತನರ ಸಮನ್ವಯ ಗ್ರಾಮಸಭೆ, ಮಹಿಳಾ ಗ್ರಾಮಸಭೆ
ಕೊಲ ಗ್ರಾಮದ ಬರೆಮೇಲು ಶ್ರೀ ಶಿರಾಡಿ, ಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ ೭ರಿಂದ ಶ್ರೀ ಶಿರಾಡಿ ದೈವದ ನೇಮೋತ್ಸವ, ೧೧ರಿಂದ ಬಟ್ಟಲು ಕಾಣಿಕೆ, ಮಧ್ಯಾಹ್ನ ೧೨ರಿಂದ ಅನ್ನಸಂತರ್ಪಣೆ, ಬಿಂದಾರ್ಪಣೆ, ಸಂಜೆ ೬.೩೦ರಿಂದ ಶ್ರೀ ಗುಳಿಗ ದೈವದ ನುಡಿಕಟ್ಟು ಆಗಿ ವಳಕಡಮದ ಕುಮಾರಧಾರಾ ನದಿ ತಟದವರೆಗೆ ಊರ ಮಾರಿ ಅಟ್ಟುವುದು
ಕಾಣಿಯೂರು ಗ್ರಾಮದ ಏಲಡ್ಕದಲ್ಲಿ ಬೆಳಿಗ್ಗೆ ಶ್ರೀ ಶಿರಾಡಿ ರಾಜನ್ ದೈವ ಮತ್ತು ಶ್ರೀ ಚಾಮುಂಡಿ ದೈವ, ಶ್ರೀ ಪರಿವಾರ ದೈವಗಳ ೧೭ನೇ ಪ್ರತಿಷ್ಠಾ ವಾರ್ಷಿಕೋತ್ಸವ, ೪೮ ಕಾಯಿಯ ಶ್ರೀ ಗಣಪತಿ ಹೋಮ
ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ೧೮ನೇ ವರ್ಷದ ನಗರ ಭಜನೆ ಪ್ರಯುಕ್ತ ಶಾಂತಿನಗರ, ಇಡೆಪುಣಿ, ಪಿಜಿನಡ್ಕದಲ್ಲಿ ಬೈಲುವಾರು ಭಜನೆ
ಕೋಲ್ಪೆ ಮೂಲಸ್ಥಾನದಲ್ಲಿ ನಡೆಯಲಿರುವ ನೇಮೋತ್ಸವದ
ಪ್ರಯುಕ್ತ ಕೋಲ್ಪೆ ಭಂಡಾರ ಮನೆಯಿಂದ ಶೀರಾಡಿ, ಜುಮಾದಿ ದೈವಗಳ ಭಂಡಾರ ತೆಗೆಯುವುದು
ಒಳಮೊಗ್ರು ಗ್ರಾಮದ ಪಲ್ಲತ್ತಾರು ಶ್ರೀ ಮಲೆ ಉಳ್ಳಾಕುಲು, ಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ ೭.೩೦ರಿಂದ ಗಣಹೋಮ, ಪಲ್ಲತ್ತಾರು ಶ್ರೀ ಮಲೆ ಉಳ್ಳಾಕುಲು, ಧೂಮಾವತಿ, ಪಿಲಿ ಚಾಮುಂಡಿ ದೈವ, ನಾಗದೇವರಿಗೆ ತಂಬಿಲ, ಸಂಜೆ ೬ರಿಂದ ಗುಳಿಗ ಬೈರವ ದೈವಗಳಿಗೆ ತಂಬಿಲ ಸೇವೆ
ಕುರಿಯ ಗ್ರಾಮದ ಸಂಪ್ಯದಮೂಲೆಯ ಆರ್ಯಣ್ಣ ಕುಟುಂಬಸ್ಥರ ತರವಾಡು ಮನೆಯಲ್ಲಿ ಬೆಳಿಗ್ಗೆ ೬ರಿಂದ ಶ್ರೀ ಧೂಮಾವತಿ ಧರ್ಮದೈವದ ನರ್ತನ ಸೇವೆ, ಮಧ್ಯಾಹ್ನ ೨ರಿಂದ ಗುಳಿಗ ದೈವದ ನರ್ತನ ಸೇವೆ


ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ೧೨ಕ್ಕೆ ನಾಟಿ ವೈದ್ಯೆ ಕಾವು ಕೆರೆಮಾರು ಚೆನ್ನಮ್ಮರವರ ಉತ್ತರಕ್ರಿಯೆ


ಧನುಪೂಜೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠ, ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಪೆರ್ಲಂಪಾಡಿ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವಸ್ಥಾನ, ಕೊಣಾಲು ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮುಂಡೂರು ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೊಡಿಪ್ಪಾಡಿ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಮುಂಡೂರು ಆಲಡ್ಕ ಶ್ರೀ ಸದಾಶಿವ ದೇವಸ್ಥಾನ, ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೆಯ್ಯೂರು ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ, ಹನುಮಗಿರಿ ಪಂಚಮುಖಿ ಆಂಜನೇಯ ದೇವಸ್ಥಾನ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಖಂಡಿಗ ನೀರ್ಕಜೆ ಶ್ರೀ ಕೈಲಾಸೇಶ್ವರ-ಅಯ್ಯಪ್ಪ ಸ್ವಾಮಿ ದೇವ ಸನ್ನಿದಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ, ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನ, ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ೩೪ನೆಕ್ಕಿಲಾಡಿ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನ, ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕೋಡಿಂಬಾಡಿ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಕಡಬ ಪಿಜಕ್ಕಳ ಶ್ರೀ ಮಹಾವಿಷ್ಣು ದೇವಸ್ಥಾನ, ಪೆರ್ಲ ಕಾಂಚನ ಶ್ರೀ ಷಣ್ಮುಖ ದೇವಸ್ಥಾನ, ಇರ್ದೆ ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನ, ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬೆಳಿಗ್ಗೆ ಧನುಪೂಜೆ.

LEAVE A REPLY

Please enter your comment!
Please enter your name here