ಸವಣೂರು : ಸವಣೂರು ಮೊಗರು ಹಿ.ಪ್ರಾ.ಶಾಲಾ ವಾರ್ಷಿಕೋತ್ಸವ ಸಪ್ತತಿ ಸಂಭ್ರಮದ ಪ್ರಯುಕ್ತ ವಾರ್ಷಿಕ ಕ್ರೀಡಾಕೂಟ”ಕ್ರೀಡಾ ಸಂಭ್ರಮ” 2024 -25 ಕ್ರೀಡೋತ್ಸವ ನಡೆಯಿತು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು.
ಕ್ರೀಡಾ ಸಂಭ್ರಮವನ್ನು ಪುತ್ತೂರು ನಗರ ಠಾಣಾಧಿಕಾರಿ ಆಂಜನೇಯ ರೆಡ್ಡಿ ಅವರು ಉದ್ಘಾಟಿಸಿದರು.ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲಿನ ಟ್ರಸ್ಟಿ, ಆ ಜಿ ಅಬ್ದುಲ್ ಖಾದರ್ ಸಹಲ್ ರವರು ಸಂಸ್ಥೆಗೆ ಪ್ರಾಜೆಕ್ಟ್ ಹಸ್ತಾಂತರ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸವಣೂರು ಗ್ರಾ.ಪಂ.ಸದಸ್ಯರಾದ ರಜಾಕ್ ಕೆನರಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್ ಎಂ. ಎ ,ಉದ್ಯಮಿ ಸಮದ್ ಸೋಂಪಾಡಿ , ಸವಣೂರು ಸರಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ , ಕೃಷಿಕ ಶಿವರಾಮ ಗೌಡ ಮೆದು , ನಾಟಿ ವೈದ್ಯ ವಾಸುದೇವ ಇಡ್ಯಾಡಿ , ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜಯಪ್ರಕಾಶ್ ಊರ್ಸಾಗ್ ಜತೆ ಕಾರ್ಯದರ್ಶಿ ಗಿರೀಶ್ ,ಗ್ರಾ.ಪಂ.ಮಾಜಿ ಸದಸ್ಯ ಸುದರ್ಶನ್ ನಾಯ್ಕ್ ಕಂಪ ,ಶಾಲಾಭಿವೃದ್ದಿ ಸಮಿತಿಯ ಮಾಜಿ ಅಧ್ಯಕ್ಷೆ ದಿವ್ಯಲತಾ ,ಉಪಾಧ್ಯಕ್ಷೆ ಯಶೋಧಾ, ರಾಷ್ಟ್ರೀಯ ಕ್ರೀಡಾಪಟು ಪುಷ್ಪಾವತಿ ಕೇಕುಡೆ ನಿಶಾಂತ್ ಕೋರಿಯೋಗ್ರಾಫರ್ ಬಂಟ್ವಾಳ, ಶಾಲಾ ಪ್ರಭಾರ ಮುಖ್ಯಗುರು ಜುಸ್ತಿನಾ ಲಿಡ್ವಿನ್ ಡಿಸೋಜಾ ಉಪಸ್ಥಿತರಿದ್ದರು. ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ವಿದ್ಯಾರ್ಥಿ ವೃಂದದವರು, ಹಿರಿಯ ವಿದ್ಯಾರ್ಥಿ ಸಂಘ ಸವಣೂರು ಮೊಗರು, ಸ್ಪೋರ್ಟ್ಸ್ ಕ್ಲಬ್ ಸವಣೂರು, ಊರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕರಾದ ಜಾನಕಿ ಹಾಗೂ ಕು. ಸುನೀತಾ ಕ್ರೀಡಾಕೂಟವನ್ನು ನಡೆಸಿಕೊಟ್ಟರು.
ಶಝ ಅಬ್ದುಲ್ ಸೋಂಪಾಡಿ ತಂಡದವರು ಪ್ರಾರ್ಥಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ಅಬ್ದುಲ್ಲಾ ಸೋಂಪಾಡಿ ಸ್ವಾಗತಿಸಿದರು.ಪ್ರಭಾರ ಮುಖ್ಯಗುರು ಜುಸ್ತಿನಾ ಲಿಡ್ವಿನ್ ಡಿ ಸೋಜ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕಿ ದಯಾಮಣಿ ಕೆ ಕಾರ್ಯಕ್ರಮ ನಿರೂಪಿಸಿದರು.