ಪುತ್ತೂರು: ಸರಕಾರಿ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸಭೆಯು ತಾಲೂಕು ವೈದ್ಯಾಧಿಕಾರಿ ಡಾ. ಆಶಾ ಜ್ಯೋತಿ ಅವರ ಅದ್ಯಕ್ಷತೆಯಲ್ಲಿ ಆಸ್ಪತ್ರೆ ಕಛೇರಿಯಲ್ಲಿ ನಡೆಯಿತು.
ಆಸ್ಪತ್ರೆಯ ಅಭಿವೃದ್ದಿ ವಿಚಾರ ಹಾಗು ಸುರಕ್ಷತೆಯ ಬಗ್ಗೆ ಚರ್ಚಿಸಲಾಯಿತು. ಅನುದಾನಗಳ ಬಗ್ಗೆ ಹಾಗು ಅದರ ಕಾರ್ಯನಿರ್ವಹಣೆ ಬಗ್ಗೆ ಚರ್ಚೆ ಮಾಡಿ ಶಾಸಕರೊಂದಿಗೆ ಈ ಬಗ್ಗೆ ಸಮಾಲೋಚನಾ ಸಭೆ ನಡೆಸಲಾಗುವುದು ಎಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಆಸ್ಪತ್ರೆ ವೈದ್ಯರಾದ ಡಾ.ಯದುರಾಜ್, ಡಾ. ಪ್ರಶಾಂತ್ ಡಾ.ಶ್ವೇತಾ , ಶುಶ್ರೂಷಾಧಿಕಾರಿ ಪುಷ್ಪಾವತಿ , ಸಹಾಯಕ ಆಡಳಿತಧಿಕಾರಿ ಯೋಗಾನಂದ, ಪ್ರಥಮ ದರ್ಜೆ ಸಹಾಯಕರಾದ ಕಿರಣ್, ನಿಶ್ಚಿತ್ ಹಾಗು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಆಸ್ಕರ್ ಆನಂದ್, ಅರುಣಾ ರೈ , ಸಿದ್ದೀಕ್ ಸುಲ್ತಾನ್, ಮುಕೇಶ್ ಕೆಮ್ಮಿಂಜೆ, ಅನ್ವರ್ ಕಬಕ, ಶೇಖರ ನಾಯ್ಕ್, ವಿಕ್ಟರ್ ಪಾಯಿಸ್ ಉಪಸ್ಥಿತರಿದ್ದರು. ವೈದ್ಯಾಧಿಕಾರಿ ಆಶಾ ಜ್ಯೋತಿ ಸ್ವಾಗತಿಸಿ ವಂದಿಸಿದರು.