ಪುತ್ತೂರು:ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕು.ನಿಲಿಷ್ಕಾ ಕೆ. ಇವರು ಶೈಕ್ಷಣಿಕ ವರ್ಷದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಹೈಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯಲ್ಲಿ 530 ಅಂಕಗಳನ್ನು ಗಳಿಸಿ ಶೇ.88 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.
ನಿಲಿಷ್ಕಾರವರು ಕಲಿಕೆ ಹಾಗೂ ಪಠ್ಯೇತರ ವಿಷಯಗಳಲ್ಲಿಯೂ ಅತ್ಯುತ್ತಮ ನಿರ್ವಹಣೆಯನ್ನು ಮಾಡಿ ಅನೇಕ ಪ್ರಶಸ್ತಿಗಳನ್ನು ಬಹುಮಾನಗಳನ್ನು ಪಡೆದಿರುತ್ತಾರೆ. ಇವರು ತತ್ವ ಸ್ಕೂಲ್ ಆಫ್ ಆರ್ಟ್ ನ ಚಿತ್ರಕಲಾ ಶಿಕ್ಷಕರಾದ ಟೀಲಾಕ್ಷ ಹಾಗೂ ರಶ್ಮಿ ಶೆಟ್ಟಿ ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ. ನಿಲಿಷ್ಕಾರವರು ಇಂಜಿನಿಯರ್ ದಿನೇಶ್ ಹಾಗೂ ಸಂಜಯನಗರ ಶಾಲೆಯ ಪ್ರಭಾರ ಮುಖ್ಯಗುರು ಸ್ಮಿತಾಶ್ರೀ ಬಿ.ರವರ ಪುತ್ರಿ.