ಮರುಕಳಿಸುತ್ತಿದೆ ಎರಡು ವರ್ಷಗಳ ಹಿಂದಿನ ಜಾತ್ರಾ ಮೆರುಗು
ಪುತ್ತೂರಿನಲ್ಲಿ ನಡೆದ ಅಭೂತಪೂರ್ವ ಸಸ್ಯ ಜಾತ್ರೆ ಸಂಭ್ರಮ ಮತ್ತೆ ಬಂದಿದೆ. ಸುದ್ದಿ ಸಸ್ಯ ಜಾತ್ರೆ ಸೀಸನ್ 2.0 ಪುತ್ತೂರು ಸುದ್ದಿ ಮಾಹಿತಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಅರಿವು ಕೃಷಿ ಕೇಂದ್ರದ ಸಾರಥ್ಯದಲ್ಲಿ, ’ಹಸಿರೇ ಉಸಿರು-ಮನೆ ಮನೆಯಲ್ಲಿ ಕೃಷಿ’ ಆಶಯದೊಂದಿಗೆ ನಗರ ಸಭೆ ಮತ್ತು ತಾ.ಪಂ., ಜಿ.ಪಂ., ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ಜ.10ರಿಂದ 12ರ ತನಕ ನಡೆಯಲಿದೆ.
ಸಸ್ಯ ಜಾತ್ರೆಯ ಉದ್ಘಾಟನೆಗೆ ಮೊದಲು ಬೆಳಿಗ್ಗೆ ಗಂಟೆ 9ಕ್ಕೆ ಪುತ್ತೂರು ಖಾಸಗಿ ಬಸ್ ನಿಲ್ದಾಣದಿಂದ ಕಿಲ್ಲೆ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಅತಿಥಿ ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಚೆಂಡೆ ಬಳಗ, ಗೊಂಬೆ ಕುಣಿತ, ಹಸಿರಿನ ಮಹತ್ವವನ್ನು ಸಾರುವ -ಫಲಕಗಳು ವಿಶೇಷ ಆಕರ್ಷಣೆ ನೀಡಿದವು., ವಿದ್ಯಾರ್ಥಿಗಳು ಮತ್ತು ರಿಕ್ಷಾ ಚಾಲಕರು ಮೆರವಣಿಗೆಗೆ ಸಾಥ್ ನೀಡಿದರು.
ಸಸ್ಯ ಜಾತ್ರೆಯಲ್ಲಿ ಕೃಷಿಕರಿಗೆ ವಿವಿಧ ಬೆಳೆಗಳು, ಉಪ-ಬೆಳೆಗಳು, ಕೃಷಿಯಲ್ಲಿ ಮೌಲ್ಯವರ್ಧನೆ, ತಜ್ಞರಿಂದ ವಿಚಾರ ಸಂಕಿರಣ, ಸಾಧಕರನ್ನು ಗುರುತಿಸುವಿಕೆ, ಸಂಜೀವಿನಿ ಒಕ್ಕೂಟದ ಉತ್ಪನ್ನಗಳ ಸಂತೆ, ವಿಷಮುಕ್ತ ಆಹಾರಕ್ಕಾಗಿ.. ತರಕಾರಿ ಗಿಡಗಳು, ಹಣ್ಣಿನ ಗಿಡಗಳು, ಸೌಂದರ್ಯಕ್ಕಾಗಿ.. ಅಲಂಕಾರಿಕ ಗಿಡಗಳು, ಫಲ-ಪುಷ್ಪ ಗಿಡಗಳ ಮಾರಾಟ ಮಳಿಗೆಗಳು, ಪರಾಗ ಸ್ಪರ್ಶಕ್ಕಾಗಿ, ಶುದ್ಧ ಜೇನಿಗಾಗಿ..ಮನೆ-ಮನೆ ಜೇನು ಕೃಷಿ.ಆರೋಗ್ಯಕರ ವಾತಾವರಣಕ್ಕಾಗಿ ಮನೆ ಗಾರ್ಡನ್ ವಿಶೇಷಗಳು,ಆಹಾರ ಮೇಳ. ಪ್ರತೀ ದಿನ ಸಾಯಂಕಾಲ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು. ಕೃಷಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಮೀನುಗಾರಿಕೆ, ಸಾಲ ಸೌಲಭ್ಯ, ಅಡಿಕೆಗೆ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗ ಸಹಿತ ಕೃಷಿಯನ್ನು ಕಾಡುವ ರೋಗಗಳು ಸೇರಿದಂತೆ ಸಮಗ್ರ ಕೃಷಿ ವಿಚಾರಗಳಿಗೆ ಸಂಬಂಧಿಸಿ ಕೃಷಿ ತಜ್ಞರು, ಪ್ರಗತಿಪರ ಕೃಷಿಕರು ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳಿಂದ ಉಪಯುಕ್ತ ಮಾಹಿತಿ ಹಾಗೂ 100ಕ್ಕೂ ಅಧಿಕ, ಕೃಷಿ ಮತ್ತು ಕೃಷಿಯೇತರ ಸ್ಟಾಲ್ಗಳು ಗ್ರಾಹಕರ ಬೇಡಿಕೆಯನ್ನು ಪೂರೈಸಲಿದೆ. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ಮತ್ತು ವಿಜೇತರಿಗೆ ವಿವಿಧ ರೀತಿಯ ವಿಶೇಷ ಬಹುಮಾನ ದೊರಕಲಿದೆ.