ಆಲಂಕಾರು: ಆಲಂಕಾರು ಶರವೂರು ಎಂಬಲ್ಲಿ ರಾಜ್ಯ ಹೆದ್ದಾರಿ ಬದಿ ನಿಲ್ಲಿಸಿದ್ದ ಆಲ್ಟೊ ಕಾರಿನಿಂದ ಕಳ್ಳತನಕ್ಕೆ ಯತ್ನಿಸಿ ಕಾರಿನ ಹಿಂಭಾಗದ ಹಾಗೂ ಮುಂಭಾಗದ ಗ್ಲಾಸ್ ಗೆ ಹಾನಿಯುಂಟು ಮಾಡಿದ ಘಟನೆ ನಡೆದಿದೆ.
ನೆಲ್ಯಾಡಿ ಬದ್ರುದ್ದೀನ್ ಎಂಬವರು ಸುಳ್ಯಕ್ಕೆ ಹೋಗುತ್ತಿದ್ದು, ಶರವೂರು ಎಂಬಲ್ಲಿ ಕಾರಿನ ಟಯರ್ ಪಂಚರ್ ಆಗಿದ್ದು, ಟಯರ್ ಪಂಚರ್ ಹಾಕಿಸಲು ಆಲಂಕಾರಿಗೆ ಬಂದಿರುವ ವೇಳೆ ಕಾರಿನ ಹಿಂಭಾಗ ಹಾಗೂ ಮುಂಭಾಗ ಗ್ಲಾಸ್ ಹೊಡೆದು ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ.
ಕಳ್ಳತನಕ್ಕೆ ಯತ್ನ ಮಾಡುವ ವೇಳೆ ಕೈಗೆ ಗಾಯ ಆಗಿ ರಕ್ತದ ಕಲೆಗಳು ಕಾರಿನ ಮುಂಭಾಗದಲ್ಲಿ ಹಾಗೂ ಕಾರಿನ ಹತ್ತಿರ ರಕ್ತದ ಕಲೆಗಳು ಬಿದ್ದಿದೆ ಎಂದು ಕಾರಿನ ಮಾಲಕ ಬದ್ರುದ್ದೀನ್ ನವರು ತಿಳಿಸಿದ್ದು, ಈ ಬಗ್ಗೆ ಕಡಬ ಠಾಣೆಗೆ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.