ನಿಡ್ಪಳ್ಳಿ: ನವಶಕ್ತಿ ಯುವಕ ಮಂಡಲ ಮುಂಡೂರು ನಿಡ್ಪಳ್ಳಿ ಇದರ ಆಶ್ರಯದಲ್ಲಿ 4 ನೇ ವರ್ಷದ ಹೊನಲು ಬೆಳಕಿನ ಪುರುಷರ ಹಗ್ಗ ಜಗ್ಗಾಟ” ನವಶಕ್ತಿ ಚಾಂಪಿಯನ್ ಟ್ರೋಫಿ -2025″ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಜ.11ರಂದು ರಾತ್ರಿ ಮುಂಡೂರು ಶಾಲಾ ವಠಾರದಲ್ಲಿ ನಡೆಯಲಿದೆ.
ಹಗ್ಗ ಜಗ್ಗಾಟ ಸ್ಪರ್ಧೆ 450 ಕೆ.ಜಿ ವಿಭಾಗದ ಲೆವೆಲ್ ಮಾದರಿ ಮತ್ತು 450 ಕೆ.ಜಿ ವಿಭಾಗದ 8 ಜನರ ಗ್ರಿಪ್ ಮಾದರಿ ಸ್ಪರ್ಧೆ ನಡೆಯಲಿದೆ. ಸಂಜೆ ಗಂಟೆ 5.30 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು,ಸನ್ಮಾನ ಕಾರ್ಯಕ್ರಮ ಕೂಡ ನಡೆಯಲಿದೆ. ರಾತ್ರಿ ಗಂಟೆ 7 ರಿಂದ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.