ಪುತ್ತೂರು:ಸುದ್ದಿ ಮಾಹಿತಿ ಟ್ರಸ್ಟ್ ಪ್ರಾಯೋಜತ್ವದಲ್ಲಿ, ಅರಿವು ಕೃಷಿ ಮಾಹಿತಿ ಸೇವಾ ಕೇಂದ್ರದ ನೇತೃತ್ವದಲ್ಲಿ ಪುತ್ತೂರು ನಗರ ಸಭೆ ಮತ್ತು ತಾ.ಪಂ., ಜಿ.ಪಂ., ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸುದ್ದಿ ಸಸ್ಯ ಜಾತ್ರೆ ಸೀಸನ್ 2.0ಗೆ ಬೆಳಿಗ್ಗೆ ಚಾಲನೆ ನೀಡಿದ ಬಳಿಕ ಮಧ್ಯಾಹ್ನದ ವೇಳೆ ಮಳಿಗೆಗಳ ಉದ್ಘಾಟನೆ ನಡೆಯಿತು.ಜಿಲ್ಲಾಧಿಕಾರಿ ಮುಲ್ಲೈ ಮುಹಿನಲ್ ಅವರು ಸಂಜೆ ವೇಳೆಗೆ ಸಸ್ಯ ಜಾತ್ರೆಗೆ ಆಗಮಿಸಿ ಮಳಿಗೆಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ಅಧ್ಯಕ್ಷರಾಗಿರುವ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಶ್ರೀಪತಿ ರಾವ್ ಅವರು ರಿಬ್ಬನ್ ತೆರೆಯುವ ಮೂಲಕ ಸಸ್ಯಜಾತ್ರೆಯಲ್ಲಿ ‘ಅರಿವು’ ಕೃಷಿ ಮಾಹಿತಿ ಸೇವಾ ಕೇಂದ್ರದ ಮಳಿಗೆಯನ್ನು ಉದ್ಘಾಟಿಸಿದರು.ಈ ಸಂದರ್ಭ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ,ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯ ವಿನಯ ಸುವರ್ಣ, ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ, ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಕಡಮಜಲು ಸುಭಾಸ್ ರೈ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಎ.ವಿ.ಜಿ ಅಸೋಸಿಯೇಟ್ಸ್ನ ಮಾಲಕ ಎ.ವಿ.ನಾರಾಯಣ,‘ಸಹಕಾರ ರತ್ನ’ ದಂಬೆಕ್ಕಾನ ಸದಾಶಿವ ರೈ,‘ಸಹಕಾರತ್ನ’ ನಿತ್ಯಾನಂದ ಮುಂಡೋಡಿ,ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಅಧ್ಯಕ್ಷ ಮಹೇಂದ್ರ ವರ್ಮ, ಕುಸುಮಾಧರ್, ಗ್ಯಾರೆಂಟಿ ಯೋಜನೆ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ,ನಾರಾಯಣ ರೈ ಕುಕ್ಕುವಳ್ಳಿ, ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ,ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ,ಪ್ರಗತಿ ಸ್ಟಡಿ ಸೆಂಟರ್ನ ಸಂಚಾಲಕ ಗೋಕುಲ್ನಾಥ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಹಿರಿಯ ವರದಿಗಾರ ಉಮೇಶ್ ಮಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.ಮಳಿಗೆಗಳ ಉದ್ಘಾಟನೆಯ ಬಳಿಕ ಎಲ್ಲಾ ಮಳಿಗೆಗಳಿಗೆ ಭೇಟಿ ನೀಡಿದ ಗಣ್ಯರು ಪುರಭವನದಲ್ಲಿ ನಡೆಯುತ್ತಿರುವ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದರು.ಅಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಮಳಿಗೆಗಳ ಉದ್ಘಾಟನಾ ಸಭಾ ಕಾರ್ಯಕ್ರಮ:
ಅಲೋಪತಿಕ್ ಕೆಮಿಕಲ್ ಅನ್ನುವಂತಹ ತಪ್ಪು ಕಲ್ಪನೆ ಹೋಗಬೇಕು-ಡಾ.ಶ್ರೀಪತಿ ರಾವ್:
ಸಸ್ಯ ಜಾತ್ರೆಯ ಮಳಿಗೆಯನ್ನು ಉದ್ಘಾಟಿಸಿದ ರೋಟರಿ ಕ್ಲಬ್ ಅಧ್ಯಕ್ಷ,ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಶ್ರೀಪತಿ ರಾವ್ ಅವರು ಮಾತನಾಡಿ ಡಾ.ಶಿವಾನಂದರು ಓರ್ವ ವೈದ್ಯರಾಗಿ ಸಸ್ಯ ಜಾತ್ರೆಯನ್ನು ಪುತ್ತೂರಿಗೆ ಪರಿಚಯ ಮಾಡಿಕೊಟ್ಟಿರುವುದು ಮಹತ್ವದ ಸಂಗತಿಯಾಗಿದ್ದು ಅವರನ್ನು ಅಭಿನಂದಿಸುತ್ತೇನೆ ಎಂದರು.ವಾತಾವರಣದಲ್ಲಿ ಬೇರೆ ಬೇರೆ ರೋಗಾಣುಗಳಿರುತ್ತವೆ.ಅವೆಲ್ಲ ಮನುಷ್ಯರನ್ನು ರೋಗಕ್ಕೆ ತುತ್ತಾಗಿಸುವ ಕೆಲಸ ಆಗುತ್ತದೆ.ಇದಕ್ಕೆ ಮುಖ್ಯ ಕಾರಣ ನಮ್ಮ ಪರಿಸರ ಮಾಲಿನ್ಯ. ಪರಿಸರವನ್ನು ಸಂರಕ್ಷಿಸುವ ಕೆಲಸ ಸಸ್ಯಗಳಿಂದ ಆಗುತ್ತದೆ.ಅದು ನಿಸ್ವಾರ್ಥ ಸೇವೆ.ಇವತ್ತು ಪರಿಸರವನ್ನು ಉಳಿಸುವ ಕೆಲಸವನ್ನು ಯುವಜನತೆಗೆ ತೋರಿಸುವಲ್ಲಿ ಸುದ್ದಿ ಮಾಧ್ಯಮ ಯಶಸ್ವಿಯಾಗಿದೆ.ಸಸ್ಯ ಕೇವಲ ಆಯುರ್ವೇದಿಕ್ ಮಾತ್ರವಲ್ಲ ಆಲೋಪತಿಕ್ನಲ್ಲೂ ಉಪಯೋಗಕ್ಕೆ ಬರುತ್ತದೆ.ಬಹುತೇಕ ಮಂದಿಗೆ ಅಲೋಪತಿಕ್ ಔಷಽ ಕೆಮಿಕಲ್ ಎಂಬ ತಪ್ಪು ಕಲ್ಪನೆ ಇದೆ.ಆದರೆ ನಿಜಾರ್ಥದಲ್ಲಿ ಮುಖ್ಯ ಖಾಯಿಲೆಗಳಾದ ಕ್ಯಾನ್ಸರ್, ಬ್ರಸ್ಟ್ ಕ್ಯಾನ್ಸರ್, ಶ್ವಾಸಕೋಶದ ಸಮಸ್ಯೆಗೆ ಮರದ ತೊಗಡೆಯಿಂದ ಬರುವ ದ್ರವ ಮತ್ತು ಸಸ್ಯಗಳಿಂದಲೇ ಔಷಽ ತಯಾರಿಸಲಾಗುತ್ತಿದೆ ಎಂಬುದು ತಿಳಿದಿರಬೇಕು ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ವಾತಾವರಣಕ್ಕೆ ಶಕ್ತಿಯನ್ನು ನೀಡುವ ಕಲ್ಪನೆ-ಅರುಣ್ ಕುಮಾರ್ ಪುತ್ತಿಲ:
ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಮಾಲಿನ್ಯದಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವ ಕಾಲಘಟ್ಟದಲ್ಲಿ ಈ ವಾತಾವರಣಕ್ಕೆ ಒಂದು ಶಕ್ತಿಯನ್ನು ನೀಡುವ ಕಲ್ಪನೆಯೊಂದಿಗೆ 2ನೇ ವರ್ಷದ ಸಸ್ಯಜಾತ್ರೆಯನ್ನು ಆಯೋಜನೆ ಮಾಡುತ್ತಾ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಕೆಲಸವನ್ನು ಡಾ.ಯು.ಪಿ.ಶಿವಾನಂದ ಅವರು ಮಾಡಿದ್ದಾರೆ. ಎಲ್ಲಾ ಸಂದರ್ಭದಲ್ಲೂ ಹೊಸತನವನ್ನು ಮಾಡುತ್ತಾ ಪುತ್ತೂರಿನ ಜನಮಾನಸದಲ್ಲಿ ಇರುವಂತಹ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲಿ.ಮುಂದಿನ ನೂರಾರು ವರ್ಷಗಳ ಕಾಲ ಈ ರೀತಿಯ ಕೃಷಿಗೆ ವಿಶೇಷವಾದ ಪ್ರಾಧಾನ್ಯತೆಯನ್ನು ಕೊಡುವಂತಹ ಸನ್ನಿವೇಶ ಮತ್ತು ಮಾಲಿನ್ಯವನ್ನು ಸರಿ ಮಾಡುವ ಸಂಕಲ್ಪವನ್ನು ಮಾಡೋಣ ಎಂದು ಸಸ್ಯ ಜಾತ್ರೆಗೆ ಶುಭ ಹಾರೈಸಿದರು.
ಸಮಾಜಕ್ಕೆ ಚಿಕಿತ್ಸೆ ನೀಡುವುದು ಹೆಮ್ಮೆಯ ಸಂಗತಿ-ಈಶ್ವರ ಭಟ್ ಪಂಜಿಗುಡ್ಡೆ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ ಎಲ್ಲೋ ಒಂದು ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿದ್ದ ವೈದ್ಯರು ಇವತ್ತು ಇಡೀ ಸಮಾಜಕ್ಕೆ ಚಿಕಿತ್ಸೆ ನೀಡುತ್ತಿರುವುದು ಹೆಮ್ಮೆಯ ಸಂಗತಿ.ಡಾ.ಯು.ಪಿ.ಶಿವಾನಂದ ಅವರು ಯಾವುದೇ ಕಾರ್ಯಕ್ರಮ ಮಾಡಿದರೂ ಅದರಲ್ಲೊಂದು ವಿಶೇಷತೆ ಇದೆ. ಇವತ್ತು ಉತ್ತಮ ಕೆಲಸ ಮಾಡಿದ ಸರಕಾರಿ ನೌಕರರನ್ನು ಜನತೆಯ ಮೂಲಕ ಗುರುತಿಸುವ ಕೆಲಸ ಮಾಡಿದ ಶಿವಾನಂದ ಅವರು ಓರ್ವ ವಿಶೇಷ ವ್ಯಕ್ತಿತ್ವ ಉಳ್ಳವರು.ಇವತ್ತು ಅವರು ಸಸ್ಯ ಜಾತ್ರೆಯ ಮೂಲಕ ಪರಿಸರದ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಮನೆಯ ಸುತ್ತ ಸಸಿಗಳನ್ನು ನೆಡಿ-ಜಯರಾಮ ಕೆದಿಲಾಯ:
ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಅವರು ಮಾತನಾಡಿ ನಾನು ಸಮಾರು 50 ವರ್ಷಗಳಿಂದ ಸಸ್ಯಗಳೊಂದಿಗೆ ಬದುಕಿದವ.ಹೊಸ ಹೊಸ ಸಸ್ಯಗಳನ್ನು ಬೆಳೆಸಿ ಜನರಿಗೆ ಕೊಡುವ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ.ಇವತ್ತು ಮಕ್ಕಳಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿದಾಗ ಮಾತ್ರ ಸಮಾಜ ಉತ್ತಮ ಸಮಾಜವಾಗಿ ಮೂಡಿ ಬರುತ್ತದೆ.ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಅದಕ್ಕೆ ಪೂರಕ ಕೆಲಸ ಮಾಡುತ್ತದೆ.ಸುದ್ದಿಯ ಶಿವಾನಂದರು ಇವತ್ತು ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುತ್ತಿದ್ದಾರೆ.ಈ ನಿಟ್ಟಿನಲ್ಲಿ ಎಲ್ಲರೂ ಮನೆಯ ಸುತ್ತಮುತ್ತ ಸಸ್ಯಗಳನ್ನು ನೆಡುವ ಮೂಲಕ ಉತ್ತಮ ಆರೋಗ್ಯದ ವಾತಾವರಣ ನಿರ್ಮಾಣ ಮಾಡಿ ಎಂದರು.
ಸಸ್ಯದೊಂದಿಗೆ ಪ್ರೀತಿ ಸಮೃದ್ಧ ಬದುಕಿಗೆ ಕಾರಣ-ಕಡಮಜಲು ಸುಭಾಸ್ ರೈ:
ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಕಡಮಜಲು ಸುಭಾಸ್ ರೈ ಅವರು ಮಾತನಾಡಿ, ನಾನು ಸುಮಾರು 55 ವರ್ಷ ಕೃಷಿಯಲ್ಲಿ ಬದುಕಿದವ.ಸಸ್ಯವನ್ನು ಪ್ರೀತಿಸಿದವನಿಗೆ ಸಮೃದ್ಧ ಬದುಕು ದೊರೆಯುತ್ತದೆ.ಇಂತಹ ಸಂದರ್ಭದಲ್ಲಿ ಸಸ್ಯಜಾತ್ರೆ ಮೂಲಕ ಜನರಿಗೆ ಸಸ್ಯದ ಮೇಲಿನ ಪ್ರೀತಿ ಹೆಚ್ಚಿಸಲಿ.ಉತ್ತಮ ಬದುಕು ಕೂಡಿ ಬರಲೆಂದು ಹಾರೈಸಿದರು.
ಜನರ ನಾಡಿ ಮಿಡಿತ ತಿಳಿಯುವಲ್ಲಿ ಮಹತ್ವದ ಪಾತ್ರ-ಬೂಡಿಯಾರ್ ರಾಧಾಕೃಷ್ಣ ರೈ:
ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಅವರು ಮಾತನಾಡಿ, ಡಾ.ಯು.ಪಿ.ಶಿವಾನಂದ ಅವರು ಜನರ ನಾಡಿ ಮಿಡಿತ ತಿಳಿಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.ಯಾಕೆಂದರೆ ಪ್ರಸ್ತುತ ಕಾಲದಲ್ಲಿ ಏನು ಅಗತ್ಯವಿದೆಯೋ ಅದನ್ನೇ ಅವರು ಜನರ ಮುಂದೆ ಇಡುತ್ತಾರೆ. ಇವತ್ತು ರೈತರ ಕಡೆ ಒಲವು ತೋರಿಸುವ ಮೂಲಕ ಕೃಷಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ.ಸಸ್ಯ ಜಾತ್ರೆಯ ಮೂಲಕ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.ಕೃಷಿಯಲ್ಲಿ ಬರುವ ಬೇರೆ ಬೇರೆ ಅವಿಷ್ಕಾರಗಳನ್ನು ಜನರ ಮುಂದೆ ಪರಿಚಯಿಸುವ ಕೆಲಸ ಮಾಡುತ್ತಿರುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಸಸ್ಯದಲ್ಲಿರುವ ಶಕ್ತಿಯನ್ನು ತೋರಿಸುವ ಪ್ರಯತ್ನ-ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ:
ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆಯವರು ಮಾತನಾಡಿ ಇವತ್ತು ಪುತ್ತೂರು ಜಾತ್ರೆಯನ್ನು ಕಾಯುತ್ತಿದ್ದಂತೆ ಸಸ್ಯ ಜಾತ್ರೆಯನ್ನೂ ಜನರು ಕಾತುರದಿಂದ ಕಾಯುವ ಹಾಗೆ ಆಗಿದೆ.ಇವತ್ತು ಬಹುತೇಕ ಮಂದಿಗೆ ಸಸ್ಯದ ಮಹತ್ವ ಗೊತ್ತಿಲ್ಲ.ಅದರಲ್ಲಿ ಮದ್ದಿಗೆ ಬೇಕಾದ ಗಿಡಗಳು ಯಾವುದು ಎಂಬುದನ್ನು ಅರಿಯುವ ಪ್ರಯತ್ನವೂ ಆಗುತ್ತಿಲ್ಲ.ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲೂ ಇದರ ಮಾಹಿತಿ ಸಿಗುವುದಿಲ್ಲ.ಆದರೆ ಸುದ್ದಿಯ ಸಸ್ಯ ಜಾತ್ರೆಯ ಒಳಗೆ ಒಂದು ರೌಂಡ್ ಹೊಡೆದರೆ ಸಸ್ಯದ ಶಕ್ತಿ ಏನು ಎಂಬುದು ತಿಳಿಯುತ್ತದೆ.ಡಾ.ಯು.ಪಿ.ಶಿವಾನಂದರಂತಹ 10 ಜನ ವಿವಿಧ ಊರುಗಳಲ್ಲಿ ಇದ್ದರೆ ಆ ಭಾಗದಲ್ಲಿ ಯಾವುದೇ ತೊಂದರೆ ಇರುವುದಿಲ್ಲ.ಎಲ್ಲರೂ ಆರೋಗ್ಯವಂತರಾಗಿರುತ್ತಾರೆ ಎಂದರು.
ಕೃಷಿ ಜಾತ್ರೆಯಿಂದ ಜನರಿಗೆ ಆರೋಗ್ಯದ ಅರಿವು ಮೂಡಲಿ-ಕೃಷ್ಣಪ್ರಸಾದ್ ಅಳ್ವ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ ಆಳ್ವ ಅವರು ಮಾತನಾಡಿ ಕೃಷಿಕರಿಗೆ ಕೃಷಿ ಚಟುವಟಿಕೆಗೆ ಪ್ರೇರಣೆ ಕೊಡುವ ಕಾರ್ಯಕ್ರಮವಾಗಿ ಸುದ್ದಿ ಸಸ್ಯ ಜಾತ್ರೆ ಮೂಡಿ ಬಂದಿದೆ.ಲಂಚ,ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿ ಅನೇಕ ವಿಚಾರದಲ್ಲಿ ಜನರನ್ನು ಎಚ್ಚರಿಸಿದ ಡಾ.ಶಿವಾನಂದ ಅವರು ಇವತ್ತು ಸಸ್ಯ ಜಾತ್ರೆಯ ಮೂಲಕ ಜನರ ಆರೋಗ್ಯ ಕಾಪಾಡುತ್ತಿದ್ದಾರೆ.ಇವತ್ತು ವಿಷಮುಕ್ತ ತರಕಾರಿ ಸೇವಿಸಿದಲ್ಲಿ 10 ರಿಂದ 20 ವರ್ಷ ಆಯುಷ ಜಾಸ್ತಿಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ.ಈ ನಿಟ್ಟಿನಲ್ಲಿ ಅದನ್ನು ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಕಾರ್ಯಗತಗೊಳಿಸುವ ಎಂದರು.
ಸರಕಾರ ಮಾಡದ ಕೆಲಸವನ್ನು ಡಾ.ಶಿವಾನಂದರು ಮಾಡುತ್ತಿದ್ದಾರೆ-ಮಹಮ್ಮದ್ ಬಡಗನ್ನೂರು:
ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಅವರು ಮಾತನಾಡಿ ಡಾ.ಯು.ಪಿ.ಶಿವಾನಂದ ಅವರು ಪುತ್ತೂರಿಗೆ ಭವ್ಯವಾದ ಆಕ್ಸಿಜನ್ ಅನ್ನು ಕೊಡುವಂಥ ಕೆಲಸವನ್ನು ಮಾಡಿದ್ದಾರೆ.ಒಂದು ಬದುಕಿಸುವ ಮತ್ತು ಬದುಕಬೇಕಾದ ಆಲೋಚನೆಗಳು ಸಸ್ಯ ಜಾತ್ರೆಯಲ್ಲಿದೆ.ಒಂದು ಕಡೆ ಸಮಾಜದ ಕಾಂಕ್ರಿಟೀಕರಣ ಆಗುತ್ತಿದೆ.ಇಂತಹ ಸಂದರ್ಭದಲ್ಲಿ ಸಸ್ಯವನ್ನು ಉಳಿಸುವ, ಬೆಳೆಸುವ ಚಿಂತನೆ ಭವಿಷ್ಯದ ಉತ್ತಮ ಆಲೋಚನೆ.ಇದು ನಿಜವಾಗಿ ಸರಕಾರ ಮಾಡಬೇಕಾದ ಕೆಲಸ.ಇವತ್ತು ಜನರಿಗೆ ಬದುಕಬೇಕಾದ ಆಲೋಚನೆಗಳನ್ನು ಅವರಿಗೆ ಅವಕಾಶಗಳನ್ನು ಸರಕಾರ ಮಾಡಿಕೊಡಬೇಕು.ಆದರೆ ಸರಕಾರ ಮಾಡದ ಕೆಲಸವನ್ನು ಡಾ.ಯು.ಪಿ.ಶಿವಾನಂದ ಮತ್ತು ಅವರ ತಂಡ ಮಾಡುತ್ತಿದೆ.ಹಾಗಾಗಿ ಎಲ್ಲ ಜನರು ಶಿವಾನಂದ ಅವರಿಗೆ ಅಭಿನಂದನೆ ಸಲ್ಲಿಸಬೇಕು.ಸಸ್ಯ ಜಾತ್ರೆ ಪುತ್ತೂರಿನ ಕಿಲ್ಲೆ ಮೈದಾನ ಮಾತ್ರವಲ್ಲ ಗ್ರಾಮೀಣ ಭಾಗಕ್ಕೂ ತಲುಪಬೇಕು.ಪ್ರತಿ ಗ್ರಾಮ ಮಟ್ಟಕ್ಕೂ ನಿಮ್ಮ ಆಲೋಚನೆಗಳು ತಲುಪಲಿ ಎಂದು ಹೇಳಿದರು.
ಡಾ.ಶಿವಾನಂದ ಅವರಿಂದ ಕೃಷಿಕರನ್ನು ಉಳಿಸುವ ಕೆಲಸ-ಶಶಿಕುಮಾರ್ ರೈ ಬಾಲ್ಯೊಟ್ಟು:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರು ಹಾಗೂ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷರೂ ಆಗಿರುವ ಹಿರಿಯ ಸಹಕಾರಿ ಧುರೀಣ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ,ಡಾ.ಶಿವಾನಂದ ಅವರು ಪತ್ರಿಕೋದ್ಯಮದ ಮೂಲಕ ಭ್ರಷ್ಟಾಚಾರವನ್ನು ತೊಲಗಿಸುವ ಕೆಲಸ ಕಾರ್ಯ ಮಾಡುತ್ತಾ ಈಗ ಕೃಷಿಕರನ್ನು ಉಳಿಸುವ ಕೆಲಸ ಕಾರ್ಯ ಮಾಡುತ್ತಿದ್ದಾರೆ.ಕಾರ್ಯಕ್ರಮವನ್ನು ಸರಕಾರ ಮಾಡಬೇಕಾಗಿತ್ತು.ಆದರೆ ಡಾ.ಶಿವಾನಂದ ಅವರ ಸುದ್ದಿ ಮಾಹಿತಿ ಟ್ರಸ್ಟ್ನ ಮೂಲಕ ನಡೆಯುತ್ತಿದೆ.ಇವತ್ತು ಸಹಕಾರಿ ಕ್ಷೇತ್ರದ ಮೂಲಕ ಗ್ರಾಮ ಬೆಳೆಯುತ್ತದೆ.ಇದಕ್ಕೆ ಸರಕಾರದ ಅನುದಾನ ಇರುವುದಿಲ್ಲ.ಇವತ್ತು ನಿರುದ್ಯೋಗಿ ಯುವಕರೂ ಸಹಕಾರಿ ಕ್ಷೇತ್ರಕ್ಕೆ ಬರುತ್ತಿರುವುದು ಉತ್ತಮ ವಿಚಾರ.ಸಹಕಾರಿ ರಂಗ ಸದೃಢವಾದ ಕ್ಷೇತ್ರವಾಗಿದೆ ಎಂದರು.
ಆರೋಗ್ಯದ ಸಂಪಾದನೆಗಾಗಿ ಗಿಡ ನೆಡಿ-ಡಾ.ಯು.ಪಿ.ಶಿವಾನಂದ:
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇವತ್ತು ಹಿರಿಯರಿಗಿಂತ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದಾರೆ.ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಾತ್ರವಲ್ಲ ಅವರು ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿರುವುದು ಮುಂದೆ ಹಸಿರು ಉಸಿರು ಯಶಸ್ವಿಯಾಗಲಿದೆ.ಹುಟ್ಟು ಹಬ್ಬಕ್ಕೆ ಮನೆಯಲ್ಲಿ ಗಿಡ ನೆಡಿ ಎಂಬ ಚಿಂತನೆಯನ್ನು ಆ ವಿದ್ಯಾರ್ಥಿಗಳಿಗೆ ನೀಡಲಾಗಿದೆ.ಪ್ರತಿ ಮನೆಯಲ್ಲೂ ಗಿಡ ನೆಡುವ ಸಂಕಲ್ಪ ಮಾಡಿಕೊಂಡಿದ್ದಾರೆ.ಹಣ್ಣು, ಹೂವಿನ, ಔಷಧಿಯ ಗಿಡ ನೆಡುವ ಜೊತೆಗೆ ಒಂದೊಂದು ಜೇನು ಪೆಟ್ಟಿಗೆ ಮನೆಯ ಸುತ್ತ ಇದ್ದರೆ ಆರೋಗ್ಯಯುತ ಜೀವನ ನಡೆಸಬಹುದು.ನಾವಿಲ್ಲಿ ಸಣ್ಣ ಪ್ರಮಾಣದ ಕೃಷಿಗೆ ಆದ್ಯತೆ ನೀಡುತ್ತಾ, ಇರುವ ಜಾಗದಲ್ಲಿ ಏನು ಮಾಡಬಹುದು ಎಂಬುದನ್ನು ನೋಡಿ ಆರೋಗ್ಯದ ಸಂಪಾದನೆಗಾಗಿ ಗಿಡ ನೆಡಿ ಎಂದರು.
ವಿಚಾರಗೋಷ್ಠಿಯಲ್ಲೂ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕು -ಡಾ|ಯದು ಕುಮಾರ್:
ಡಿ.ಸಿ.ಆರ್ನ ನಿವೃತ್ತ ವಿಜ್ಞಾನಿ ಡಾ|ಯದು ಕುಮಾರ್ ಅವರು ಮಾತನಾಡಿ ಕೇವಲ ಸಸ್ಯಜಾತ್ರೆಯನ್ನು ನೋಡಿದರೆ ಸಾಲದು ಅದರಲ್ಲಿರುವ ವಿಚಾರಗೋಷ್ಟಿಯಲ್ಲೂ ಜನರು ಭಾಗವಹಿಸಿ ಸಾಕಷ್ಟು ಮಾಹಿತಿ ಪಡೆದುಕೊಳ್ಳಬೇಕು.ಡಾ.ಶಿವಾನಂದ ಅವರು ದೊಡ್ಡ ಆಲೋಚನೆ ಮಾಡಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.ಪ್ರಪಂಚಾದ್ಯಂತ ಮೆಚ್ಚುಗೆ ವ್ಯಕ್ತಪಡಿಸಿದ ವಿಜ್ಞಾನಿಗಳನ್ನು ಕರೆಸಿದ್ದಾರೆ ಎಂದರು.ಸುದ್ದಿ ಮಿಡಿಯಾದ ನಿರೂಪಕಿ ಸುಮಿತ್ರ ಕಾರ್ಯಕ್ರಮ ನಿರೂಪಿಸಿದರು.ಹಿರಿಯ ವರದಿಗಾರರಾದ ಲೋಕೇಶ್ ಬನ್ನೂರು, ಹರೀಶ್ ಬಾರಿಂಜ, ಶರತ್ ಕುಮಾರ್ ಪಾರ, ಆದಿತ್ಯ ಈಶ್ವರಮಂಗಲ, ಸುದ್ದಿ ಬಳಗದ ಶಿವಕುಮಾರ್ ಐ, ನಮಿತಾ,ಹರಿಣಿ, ಮೋಹನ್ ಶೆಟ್ಟಿ, ವಸಂತ ಸಾಮೆತ್ತಡ್ಕ, ಪ್ರಶಾಂತ್ ಮಿತ್ತಡ್ಕ,ಕುಶಾಲಪ್ಪ ಕಾಣಿಯೂರು, ಪ್ರಜ್ವಲ್, ಪುತ್ತೂರು,ಸುಳ್ಯ ಮತ್ತು ಬೆಳ್ತಂಗಡಿ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಸಹಕರಿಸಿದರು.
ವಿಚಾರ ಸಂಕಿರಣಗಳ ವಿವರ: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರು ಹಾಗೂ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ಅಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ, ಹಿರಿಯ ಸಹಕಾರಿ ಧುರೀಣ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಕೃಷಿಕರಿಗೆ ಸಾಲ ಸೌಲಭ್ಯಗಳು ಕುರಿತ ಮಾಹಿತಿ ನೀಡಿದರು.ಕ್ಯಾಂಪ್ರೋದ ನಿವೃತ್ತ ಆಡಳಿತ ನಿರ್ದೇಶಕರು ಹಾಗೂ ಫುಡ್ ಟೆಕ್ನಾಲಜಿಯಲ್ಲಿ ಮೈಸೂರಿನ ಸೆಂಟ್ರಲ್ ಫುಡ್ ಟೆಕ್ನಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ನಿಂದ ಎಂ.ಎಸ್ಸಿ.ಪದವೀಧರರಾಗಿರುವ,ಆಹಾರೋದ್ಯಮ ತಜ್ಞರಾಗಿರುವ ಹೆಚ್.ಎಂ.ಕೃಷ್ಣ ಕುಮಾರ್ ಅವರು ಆಹಾರ ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ಮಾತನಾಡಿದರು.ಕಳೆದ 20 ವರ್ಷಗಳಿಂದ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್)ಮಂಗಳೂರು ಇದರಲ್ಲಿ ನಿರುದ್ಯೋಗಿಗಳಿಗೆ ಸರಕಾರದ ಯೋಜನೆಗಳ ಉದ್ಯಮಶೀಲತೆ ಗೌರವ ತರಬೇತುದಾರನಾಗಿ ದ.ಕ.,ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉದ್ಯಮಶೀತಾ ತರಬೇತುದಾರರಾಗಿರುವ ಸತೀಶ್ ಮೊಬೆನ್ ಅವರು ಕೃಷಿ ಮೌಲ್ಯವರ್ಧನೆ, ಗ್ರಾಮೀಣ ಉದ್ಯಮ ವಿಷಯದಲ್ಲಿ ಸಂವಾದ ಕಾರ್ಯಕ್ರಮ ನಡೆಸಿದರು.
ಸಾಂಸ್ಕೃತಿಕ ವೈವಿಧ್ಯ:
ಮಧ್ಯಾಹ್ನ ಗಂಟೆ 2ಕ್ಕೆ ದರ್ಬೆ ಲಿಟ್ಲ್ ಪ್ಲವರ್ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.ಸಂಜೆ ಗಂಟೆ 6ರಿಂದ ದೀಪಕ್ ರೈ ಪಾಣಾಜೆ ಸಾರಥ್ಯದಲ್ಲಿ ಮಸ್ಕಿರಿ ಕುಡ್ಲ ತಂಡದಿಂದ ತೆಲಿಕೆ ಬಂಜಿ ನಿಲಿಕೆ ಕಾರ್ಯಕ್ರಮ ನಡೆಯಿತು.
ಆಧುನಿಕ ಶಿಕ್ಷಣದಲ್ಲಿ ಕೃಷಿ ಉಳಿಸುವ ಯೋಚನೆ, ಯೋಜನೆ ರೂಪಿಸಿ-ಡಿಸಿ
ಸುದ್ದಿ ಸಸ್ಯ ಜಾತ್ರೆಯ ವಿಚಾರಗೋಷ್ಟಿಯ ಸಂದರ್ಭದಲ್ಲಿ ಆಗಮಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಮಾತನಾಡಿ, ನಮ್ಮ ಬದುಕಿಗೆ ಪರಿಸರ ಮತ್ತು ರೈತರ ಬದುಕಿನ ಬಗ್ಗೆ ಸಂಪೂರ್ಣ ತಿಳುವಳಿಕೆ ಪಡೆಯಬೇಕು.ಆಧುನಿಕ ಶಿಕ್ಷಣ ಹೇಗೆ ಸಿಗುತ್ತದೆಯೋ ಅದನ್ನು ಇಟ್ಟುಕೊಂಡು ನಿಮ್ಮ ಸುತ್ತಮುತ್ತ ಇರುವ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ.ಕೃಷಿಯನ್ನು ಆಧುನಿಕ ರೀತಿಯಲ್ಲಿ ಮಾಡಬಹುದು ಎಂಬ ಚಿಂತನೆ ಮಾಡಿ.ಆದಷ್ಟು ಇವತ್ತಿನ ದಿನದಲ್ಲಿ ರೈತರ ಬದುಕಿನಲ್ಲಿ ನಡೆಯುತ್ತಿರುವ ವಿವಿಧ ಸಂಕಷ್ಟಗಳು,ಸಾಧಕರು ಏನೇನು ಮಾಡುತ್ತಾರೆ ಎಂಬುದನ್ನು ಅರಿತು.ನಿಮ್ಮ ಶಿಕ್ಷಣವನ್ನು ಅರ್ಥಪೂರ್ಣವಾದ ರೀತಿಯಲ್ಲಿ ಮಾಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇಂದು ಸಸ್ಯ ಜಾತ್ರೆಯಲ್ಲಿ..
ಜ.11ರಂದು ಸಸ್ಯ ಜಾತ್ರೆಯಲ್ಲಿ ಬೆಳಗ್ಗಿನಿಂದ ಸಂಜೆಯ ತನಕ ವಿವಿಧ ವಿಚಾರಗೋಷ್ಟಿಗಳು ನಡೆಯಲಿದೆ.ಮಧ್ಯಾಹ್ನ ಗಂಟೆ 11.30ರಿಂದ ‘ಕಾಳುಮೆಣಸು ಬೆಳೆ’ ಕುರಿತು ಅಪ್ಪಂಗಳ ಐಐಎಸ್ಆರ್ಐ ಇದರ ನಿವೃತ್ತ ಹಿರಿಯ ವಿಜ್ಞಾನಿ ಡಾ|ವೇಣುಗೋಪಾಲ್, ಮಧ್ಯಾಹ್ನ ಗಂಟೆ 1 ರಿಂದ ‘ಅಡಿಕೆ ತಳಿಗಳು ಮತ್ತು ಬೀಜೋತ್ಪಾದನೆ, ಸಮಗ್ರ ಪೋಷಕಾಂಶ ನಿರ್ವಹಣೆ, ಸಮಗ್ರ ರೋಗ ಮತ್ತು ಕೀಟ ಬಾಧೆಗಳ ನಿರ್ವಹಣೆ’ ಕುರಿತು ಸಿಪಿಸಿಆರ್ಐಯ ಹಿರಿಯ ವಿಜ್ಞಾನಿ ಡಾ|ಎನ್.ಆರ್.ನಾಗರಾಜ, ತೆಂಗು ತಳಿಗಳು, ಸಮಗ್ರ ಪೋಷಕಾಂಶ ನಿರ್ವಹಣೆ ಮತ್ತು ರೋಗ ಮತ್ತು ಕೀಟಬಾಧೆಗಳ ನಿರ್ವಹಣೆಯ ಕುರಿತು ಸಿಪಿಸಿಆರ್ಐ ಹಿರಿಯ ವಿಜ್ಞಾನಿ ಡಾ|ದಿವಾಕರ್ ವೈ, ‘ಕೊಕ್ಕೊ ಮೌಲ್ಯ ವರ್ಧನೆ, ಪೋಷಕಾಂಶಗಳ ಬಳಕೆ ಮತ್ತು ರೋಗ ಭಾಧೆ ನಿರ್ವಹಣೆ’ ಕುರಿತು ಕಾಸರಗೋಡು ಸಿಪಿಸಿಆರ್ಐ ಇದರ ಪ್ರಧಾನ ವಿಜ್ಞಾನಿ ಡಾ|ಎಲೈನ್ ಅಪ್ಸರಾ, ಸಂಜೆ ಸಾವಯವ ತರಕಾರಿ ಬೆಳೆಯುವಿಕೆ ಮತ್ತು ತರಕಾರಿ ಕ್ಯಾಲೆಂಡರ್ ಕುರಿತು ಶಿವಪ್ರಸಾದ್ ವರ್ಮುಡಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.ಸಂಜೆ ಗಂಟೆ 6ರಿಂದ ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಿಂದ ಮೈಮ್ ಶೋ ಬಳಿಕ ಅಕ್ಷಯ ಕಾಲೇಜು ಪುತ್ತೂರು ಇದರ ವಿದ್ಯಾರ್ಥಿಗಳಿಂದ ಭಾರತೀಯ ವಸ ವೈಭವ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಅದೇ ದಿನ ವಿವಿಧ ಸ್ಪರ್ಧಗಳು ನಡೆಯಲಿದೆ.ಮಧ್ಯಾಹ್ನ ಗಂಟೆ 2ರಿಂದ 5ರ ತನಕ ಕವನ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕಾರ್ಟೂನ್ ಸ್ಪರ್ಧೆ, ಸಹಿತ ವಿವಿಧ ವಿವಿಧ ಸ್ಪರ್ಧೆಗಳು ನಡೆಯಲಿದೆ.
ನೂರಕ್ಕೂ ಮಿಕ್ಕಿ ಮಳಿಗೆಗಳು
ಸಸ್ಯ ಜಾತ್ರೆಯ ದ್ವಾರದ ಅಕ್ಕ ಪಕ್ಕದಲ್ಲಿ ಸಸಿಗಳೇ ಸ್ವಾಗತ ಮಾಡುವ ರೀತಿಯಲ್ಲಿ ವಿವಿಧ ತಳಿಗಳ ಹಣ್ಣಿನ ಸಸ್ಯಗಳಿವೆ.ಬಳಿಕ ಸುದ್ದಿ ಗ್ರೂಪ್ಸ್ನ ಸಹಸಂಸ್ಥೆಯಾದ ಅರಿವು ಸಂಸ್ಥೆ ಗುಣಮಟ್ಟಕ್ಕೆ ಆದ್ಯತೆ ನೀಡುವ ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಉತ್ಪಾದಕರಿಂದ, ಉತ್ತಮ ಉತ್ಪಾದನಾ ಅಭ್ಯಾಸಗಳಿಂದ ತಯಾರಿಸಲ್ಪಟ್ಟ ಉತ್ಪನ್ನಗಳ ಮಳಿಗೆಗಳು ವಿಶೇಷವಾಗಿತ್ತು.ಮುಂದೆ ನರ್ಸರಿ ಮಳಿಗೆಗಳು,ವಿವಿಧ ಕಂಪೆನಿಗಳ ಕಾರು, ದ್ವಿಚಕ್ರ ವಾಹನಗಳ ವಿತರಕರ, ಶಿಕ್ಷಣ ಸಂಸ್ಥೆಗಳ ಮಳಿಗೆಗಳು, ಸರಕಾರಿ ಇಲಾಖೆಗಳ ಮಳಿಗೆಗಳು, ಬ್ಯಾಂಕ್ ಸ್ಟಾಲ್, ಕನ್ಸ್ಟಕ್ಷನ್ ಮಳಿಗೆ, ಗೊಬ್ಬರ ಮತ್ತು ಕೃಷಿ ಪರಿಕರಗಳು, ಆಹಾರ ಮಳಿಗೆ, ಆಟೋಮೊಬೈಲ್ಸ್, ರೈತ ಉತ್ಪಾದಕ ಸಂಸ್ಥೆಗಳು, ರಿಯಲ್ ಎಸ್ಟೇಟ್ ಸ್ಟಾಲ್ ಸಹಿತ ನೂರಕ್ಕೂ ಮಿಕ್ಕಿ ಮಳಿಗೆಗಳು ಸಸ್ಯಜಾತ್ರೆಯ ವಿಶೇಷ ಆಕರ್ಷಣೆಯಾಗಿದ್ದು ಬೆಳಿಗ್ಗಿನಿಂದಲೇ ಜನ ವಿವಿಧ ಸ್ಟಾಲ್ಗಳಿಗೆ ಭೇಟಿ ನೀಡಿ ಖರೀದಿ, ಮಾಹಿತಿ ಪಡೆದುಕೊಳ್ಳುತ್ತಿರುವುದರ ಜೊತೆಗೆ ವಿಚಾರ ಸಂಕಿರಣಗಳಲ್ಲಿಯೂ ಭಾಗವಹಿಸುತ್ತಿದ್ದರು.ಒಟ್ಟಾರೆಯಾಗಿ ಕಿಲ್ಲೆ ಮೈದಾನದಲ್ಲಿ ಜಾತ್ರೆಯ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.
ಬೆಳಗ್ಗೆ ಉಪಹಾರ, ಮಧ್ಯಾಹ್ನ ಗಂಜಿಯೂಟ, ಸಂಜೆ ಲೆಮೆನ್ ಟೀ
ಸಸ್ಯ ಜಾತ್ರೆಯಲ್ಲಿ ಮಳಿಗೆ ಹಾಕಿದವರಿಗೆ, ವಿಚಾರ ಸಂಕಿರಣಕ್ಕೆ ಆಗಮಿಸಿದವರಿಗೆ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆಲ್ಲರಿಗೂ ಬೆಳಗ್ಗೆ ಉಪಹಾರ, ಮಧ್ಯಾಹ್ನ ಗಂಜಿಯೂಟ ಮತ್ತು ಸಂಜೆ ಲೆಮೆನ್ ಟೀ ಉಚಿತವಾಗಿ ನೀಡಲಾಯಿತು.ಆಗಮಿಸಿದ ಬಹುತೇಕ ಮಂದಿ ಉಟೋಪಚಾರದ ವ್ಯವಸ್ಥೆಗೆ ಕೃತಜ್ಞತೆ ಸಲ್ಲಿಸಿದರು.ಮಳಿಗೆಯ ಮಾಲಕರು,ಸಿಬ್ಬಂದಿಗಳು ಪ್ರತಿಕ್ರಿಯಿಸುತ್ತಾ, ಎಲ್ಲಾ ಕಡೆ ನಮಗೆ ಊಟಕ್ಕೆ ವ್ಯವಸ್ಥೆ ಇರುತ್ತಿರಲಿಲ್ಲ.ಆದರೆ ಇಲ್ಲಿ ಅದು ಕೂಡಾ ಉಚಿತವಾಗಿ ನೀಡುತ್ತಿರುವುದು ಮೆಚ್ಚುವ ವಿಚಾರ ಎಂದು ಅಭಿನಂದಿಸಿದರು.
ಪ್ಲಾಸ್ಟಿಕ್ ಬದಲು ಬಟ್ಟೆ ಚೀಲ ನೀಡಿ ಜಾಗೃತಿ ಮೂಡಿಸಿದ ನಗರಸಭೆ
ನಿಷೇಧಿತ ಪ್ಲಾಸ್ಟಿಕ್ ಅನ್ನು ಬಳಕೆ ಮಾಡದಂತೆ ನಗರಸಭೆ ವತಿಯಿಂದ ಸಾರ್ವಜನಿಕರಿಗೆ ಬಟ್ಟೆ ಚೀಲ ನೀಡುವ ಮೂಲಕ ವಿಶೇಷ ಜಾಗೃತಿ ಮೂಡಿಸಲಾಗಿದೆ.ನಗರಸಭೆಯಿಂದ ಸಾವಯವ ಗೊಬ್ಬರ ಮತ್ತು ವಿವಿಧ ಮಾಹಿತಿಯನ್ನಳೊಗೊಂಡ ಮಳಿಗೆಯಲ್ಲಿ ಸಾರ್ವಜನಿಕರು ವಿವಿಧ ಮಳಿಗೆಗಳಿಂದ ಖರೀದಿಸಿದ ವಸ್ತುಗಳನ್ನು ಪ್ಲಾಸ್ಟಿಕ್ ಕೈ ಚೀಲದಲ್ಲಿ ಕೊಂಡೊಯ್ಯುವುದನ್ನು ಗಮನಿಸಿ ಅವರಿಂದ ಪ್ಲಾಸ್ಟಿಕ್ ಚೀಲ ಪಡೆದು ಬಟ್ಟೆ ಚೀಲ ನೀಡಿ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ.ಬಟ್ಟೆ ಚೀಲದಲ್ಲಿ ನಗರಸಭೆಯ ಸ್ವ ನಿಽಯಿಂದ ಸಮೃದ್ಧಿ ಯೋಜನೆಯ ಪ್ರಯೋಜನ ಮತ್ತು ವಿವಿಧ ಮಾಹಿತಿಗಳನ್ನು ಅಚ್ಚು ಹಾಕಲಾಗಿದೆ.ಒಟ್ಟಿನಲ್ಲಿ ನಗರಸಭೆ ಸಸ್ಯ ಜಾತ್ರೆಯಲ್ಲಿ, ಪ್ಲಾಸ್ಟಿಕ್ ಕೈ ಚೀಲ ಬಳಸದಂತೆ ಜಾಗೃತಿಯ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ.