ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಎಣಿಮುಗೇರ್ ಎಂಬಲ್ಲಿ ದಶಕಗಳಿಂದ ಇದ್ದ ದಾರಿ ಸಮಸ್ಯೆಗೆ ಸಾಯಿ ಲಕ್ಷ್ಮೀ ಮಾಲಿಕರಾದ ರಾಜು ಶೆಟ್ಟಿ ಧನ್ಯಕುಮಾರ್ ರೈ ಸಂಪತ್ ಕುಮಾರ್ ಜೈನ್ ಇವರ ಸಮ್ಮುಖದಲ್ಲಿ ಬಗೆಹರಿಸಲಾಗಿದೆ.
ಚಿಕ್ಕಮುಡ್ನೂರಿನಿಂದ ರಾಗಿದಕುಮೇರಿಗೆ ಸಂಪರ್ಕ ದಾರಿಯೊಂದು ಅಗತ್ಯವಿತ್ತು.ಇದಕ್ಕಿದ್ದ ಸಮಸ್ಯೆ, ಗೊಂದಲವನ್ನು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತು ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆಯವರು ಪಕ್ಷತೀತವಾಗಿ ಮಾತುಕತೆಯ ಮೂಲಕ ಇತ್ಯರ್ಥ ಪಡಿಸಿದರು.
ಈ ಸಂದರ್ಭ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ರವಿ ಕುಮಾರ್ ರೈ, ಬಿಜೆಪಿ ನಗರ ಕಾರ್ಯದರ್ಶಿ ಅನಿಲ್ ತೆಂಕಿಲ, ಗ್ರಾಮಾಂತರ ಮಂಡಲ ಕಾರ್ಯದರ್ಶಿ ಉಮೇಶ್ ಗೌಡ, ಬಿಜೆಪಿ ಚಿಕ್ಕಮೂಡ್ನೂರು ಗ್ರಾಮದ ಶಕ್ತಿ ಕೇಂದ್ರದ ಅಧ್ಯಕ್ಷ ಕಾರ್ತಿಕ್ ಗೌಡ ಅಂದ್ರಟ್ಟ ಅವರು ಜೊತೆಯಲ್ಲಿದ್ದರು. ಬನ್ನೂರು ಗ್ರಾಮಪಂಚಾಯತ್ ಅಧ್ಯಕ್ಷೆ ಸ್ಮೀತಾ ನಾಯಕ್ ಮಾಜಿ ಅಧ್ಯಕ್ಷೆ ಜಯ ರಮೇಶ್ ಗೌಡ ವಾರ್ಡ್ ಸದಸ್ಯರಾದ ತಿಮ್ಮಪ್ಪ ಪೂಜಾರಿ ರಾಘವೇಂದ್ರ ಗೌಡ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿತ್ರಾವತಿ, ಲೆಕ್ಕ ಸಹಾಯಕಿ ಜಯಂತಿ, ತಿಮ್ಮಪ್ಪ ಪೂಜಾರಿ ಮೂಡಯೂರು, ರಾಘವೇಂದ್ರ ಅಂದ್ರಟ್ಟ ಉಪಸ್ಥಿತರಿದ್ದರು.