ರಾಮಕುಂಜ: ನಿವೃತ್ತ ಡಿವೈಎಸ್‌ಪಿ ದಿ.ಬಾಲಕೃಷ್ಣ ಗೌಡರವರ ಪತ್ನಿ, ಹಳೆನೇರೆಂಕಿ ಗ್ರಾಮದ ಕಟ್ಟಪುಣಿ ನಿವಾಸಿ ಗಿರಿಜಾ(86ವ.)ಅವರು ಜ.13ರಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೆಲ ದಿನಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಮೃತರು ಪುತ್ರ, ಮಂಗಳೂರಿನಲ್ಲಿ ದಂತ ವೈದ್ಯರಾಗಿರುವ ಡಾ.ರಾಜೇಶ್ ಕೆ., ಪುತ್ರಿಯರಾದ ಆಶಾ, ಉಷಾ, ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.