ಪುತ್ತೂರು: ಇಲ್ಲಿನ ನೆಹರುನಗರ ವಿವೇಕಾನಂದ ಮಹಾವಿದ್ಯಾಲಯದ 1999ರ ಬ್ಯಾಚ್‌ನ ಬಿಬಿಎಂ ವಿದ್ಯಾರ್ಥಿಗಳ ಪುನರ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಜ.11ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ನಿವೃತ್ತ ಪ್ರಾಂಶುಪಾಲರಾದ ಎ.ವಿ. ನಾರಾಯಣ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಲೇಜು ಬೆಳೆದ ಬಗೆಯನ್ನು ವಿವರಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಬಿಬಿಎಂ 1999ರ ಬ್ಯಾಚ್‌ನ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಜಿ.ಭಟ್ ಅವರು ಮಾತನಾಡಿ, ಕಾಲೇಜಿನ ಸರ್ವತೋಮುಖ ಅಭಿವೃದ್ದಿಗೆ ಹಳೆವಿದ್ಯಾರ್ಥಿಗಳ ಸಹಕಾರ ಮುಖ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಲಿ ಎಂದು ಹೇಳಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಸತೀಶ್ ರಾವ್ ಸಂದರ್ಭೋಚಿತವಾಗಿ ಮಾತನಾಡಿದರು.
ಗುರುವಂದನೆ:
199ರ ಬ್ಯಾಚ್‌ನ ಬಿಬಿಎಂ ವಿದ್ಯಾರ್ಥಿಗಳಿಗೆ ಉಪನ್ಯಾಸಕರಾಗಿದ್ದ ಪಿ.ಕೆ. ಬಾಲಕೃಷ್ಣ, ವೆಂಕಟರಮಣ ಭಟ್, ವೇದವ್ಯಾಸ, ಶಂಕರ ನಾರಾಯಣ ಭಟ್, ಮಾಧವ ಭಟ್, ಪರಮೇಶ್ವರ ಶರ್ಮ, ಶ್ರೀಮತಿ ಶೈಲಜಾ ಶೆಣೈ, ಪ್ರಭಾಕರ್, ಶ್ರೀಮತಿ ವತ್ಸಲ ನಾರಾಯಣ, ಚೆಟ್ಟಿಯಾರ್, ಶ್ರೀಧರ ಅವರಿಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿ, ಸ್ಮರಣಿಕೆ ನೀಡಿ ಗೌರವ ಸಲ್ಲಿಸಿದರು. ಉಪನ್ಯಾಸಕರು ಶುಭಹಾರೈಸಿದರು.
25 ವಿದ್ಯಾರ್ಥಿಗಳು ಭಾಗಿ:
1999ರ ಬ್ಯಾಚ್‌ನ ಬಿಬಿಎಂನ ವಿದ್ಯಾರ್ಥಿಗಳ ಈ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ವಿದೇಶದಿಂದ ಆಗಮಿಸಿದ ವಿದ್ಯಾರ್ಥಿಗಳ ಸಹಿತ 25 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿಗಳ ಪರವಾಗಿ ಶ್ರೀಮತಿ ಸುಷ್ಮಾ ಭಟ್, ಶ್ರೀಮತಿ ಬಬಿತಾ, ಗಿರೀಶ, ವಿಜಯಾನಂದ್, ಕಾರ್ಯಪ್ಪ, ಶಿವನಾರಾಯಣ, ರಾಘವೇಂದ್ರ, ಆನಂದ ಶೆಟ್ಟಿ ಅವರು ತಮ್ಮ ಅನುಭವ ಹಂಚಿಕೊಂಡರು. ಆರಂಭದಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ಪರಿಚಯ ಮಾಡಿಕೊಂಡರು. ವಿದೇಶದಲ್ಲಿ ನೆಲೆಸಿರುವ ಹಳೆ ವಿದ್ಯಾರ್ಥಿಗಳ ಗುರುವಂದನಾ ವಿಡಿಯೋ ಸಂದೇಶ ಬಿತ್ತರಿಸಲಾಯಿತು.
1999ರ ಬ್ಯಾಚ್‌ನ ಬಿಬಿಎಂನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಕೃಷ್ಣರಾಜ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿವನಾರಾಯಣ ವಂದಿಸಿದರು. ಸದಾಶಿವ್ ಪುತ್ತೂರು ನಿರೂಪಿಸಿದರು. ಶ್ರೀಮತಿ ನಂದಿತಾ ಪೈ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ ನಡೆಯಿತು. ಉತ್ತಮವಾಗಿ ಸಂಘಟಿಸಿದ್ದ ಕಾರ್ಯಕ್ರಮದ ಕೊನೆಯಲ್ಲಿ ಪ್ರಾಂಶುಪಾಲ ವಿ.ಜಿ.ಭಟ್ ಅವರು ಹಳೆಯ ವಿದ್ಯಾರ್ಥಿಗಳ ಜೊತೆಗೂಡಿ ಬಿಬಿಎಂ ತರಗತಿಯನ್ನು ಮರುಸೃಷ್ಟಿಸಿದರು.