ಪುತ್ತೂರು: ಕರ್ನಾಟಕ ರಾಜ್ಯ ಡಾ|ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅನಿಕಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಾಗ್ದೇವಿ ಸಂಗೀತ ಶಾಲೆಯ ಗುರುಗಳಾದ ವಿದುಷಿ ಸವಿತಾ ಪುತ್ತೂರುರವರ ಶಿಷ್ಯೆಯಾದ ಅನಿಕಾ. ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಕಾವು ಹರೀಶ ಕುಂಜತ್ತಾಯ ಹಾಗೂ ರಮ್ಯ ದಂಪತಿ ಪುತ್ರಿ.