ಕಾಣಿಯೂರು: ಪುತ್ತೂರಿನ ಇನ್ಸ್ಟಿಟ್ಯೂಟ್ ಆಫ್ ಗ್ಲೋಬಲ್ ಡೆವಲಪ್ಮೆಂಟ್ ಇವರ ನೇತೃತ್ವದಲ್ಲಿ “ಸಂಸಾರ” (ಸಂಘಟನೆಗಾಗಿ ಸಾಮಾಜಿಕ ರಂಗಭೂಮಿ) ಕಲಾತಂಡದ ವತಿಯಿಂದ ಅಯೋಡಿನ್ ಕೊರತೆ ಮತ್ತು ಪೋಷಕಾಂಶಗಳು ಎಂಬ ವಿಷಯದ ಕುರಿತು ಬೀದಿನಾಟಕ ಪ್ರದರ್ಶನವು ಬೆಳಂದೂರು ಪಂಚಾಯತ್ ವ್ಯಾಪ್ತಿಯ ಕುದ್ಮಾರು ಶಾಲಾ ಬಳಿ ಜ.15 ರಂದು ನಡೆಯಿತು.
ಈ ಸಂದರ್ಭದಲ್ಲಿ ಬೆಳಂದೂರು ಗ್ರಾ.ಪಂ ಉಪಾಧ್ಯಕ್ಷ ಜಯಂತ ಅಬೀರ, ಮಾಜಿ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಲಕ್ಷೀ, ಆಶಾ ಕಾರ್ಯಕರ್ತೆಯರಾದ ಯಮುನಾ, ತಾರಾ, ಕುದ್ಮಾರು ಅಂಗನವಾಡಿ ಕಾರ್ಯಕರ್ತೆ ವಸಂತಿ, ಕುದ್ಮಾರು ಶಾಲಾ ಅಧ್ಯಾಪಕ ಕುಶಾಲಪ್ಪ ಗೌಡ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಐಜಿಡಿ ಸದಸ್ಯೆ ಪ್ರಜ್ಞಾ ಸ್ವಾಗತಿಸಿ, ಬೆಳಂದೂರು ಪಂಚಾಯತ್ ಲೆಕ್ಕ ಸಹಾಯಕಿ ಸುನಂದಾ ವಂದಿಸಿದರು. ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು